ಸುರಂಗದಿ ಸಿಲುಕಿದ್ದ ಕಾರ್ಮಿಕರ ರಕ್ಷಣೆಗೆ ಸಹಾಯ ಮಾಡಿದ ಆಸ್ಟ್ರೇಲಿಯಾದ ಎಂಜಿನಿಯರ್, ವಕೀಲ ಅರ್ನಾಲ್ಡ್ ಡಿಕ್ಸ್ ಸಂದರ್ಶನ

ರಕ್ಷಣಾ ಕಾರ್ಯಾಚರಣೆಯನ್ನು 'ಆಧುನಿಕ ಪವಾಡ' ಎಂದು ಕರೆದಿರುವ ಡಿಕ್ಸ್, ಕಾನೂನನ್ನು ಮೂಲಸೌಕರ್ಯ ವೃದ್ಧಿಗೆ ಬಳಸಬೇಕೆ ಹೊರತು ಪ್ರತೀಕಾರಕ್ಕೆ ಬಳಸಬಾರದು ಎಂದಿದ್ದಾರೆ.
ಸುರಂಗದಿ ಸಿಲುಕಿದ್ದ ಕಾರ್ಮಿಕರ ರಕ್ಷಣೆಗೆ ಸಹಾಯ ಮಾಡಿದ ಆಸ್ಟ್ರೇಲಿಯಾದ ಎಂಜಿನಿಯರ್, ವಕೀಲ ಅರ್ನಾಲ್ಡ್ ಡಿಕ್ಸ್ ಸಂದರ್ಶನ
Published on

ಉತ್ತರಕಾಶಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಜೋಡಣೆ ಮಾಡಲು ನಿರ್ಮಿಸಲಾಗುತ್ತಿದ್ದ ಸುರಂಗದಲ್ಲಿ ಮಣ್ಣುಕುಸಿತದಿಂದ ಸಿಲುಕಿದ್ದ ಕಾರ್ಮಿಕರನ್ನು ಇತ್ತೀಚೆಗೆ ರಕ್ಷಿಸಲಾಯಿತು. ಸುದೀರ್ಘ ಕಾರ್ಯಾಚರಣೆ ಮೂಲಕ ಕಾರ್ಮಿಕರನ್ನು ರಕ್ಷಿಸಿದ ಈ ತಂಡದಲ್ಲಿ ಆಸ್ಟ್ರೇಲಿಯಾದ ಎಂಜಿನಿಯರ್, ಸುರಂಗ ಕಾಮಗಾರಿಗಳ ತಜ್ಞ ಅರ್ನಾಲ್ಡ್ ಡಿಕ್ಸ್ ಅವರು ಭಾಗವಹಿಸಿದ್ದರು. ಇಡೀ ರಕ್ಷಣಾ ಕಾರ್ಯಾಚರಣೆಯನ್ನು ಒಂದು "ಪವಾಡ" ಎಂದು ಅವರು ಬಣ್ಣಿಸಿದ್ದಾರೆ.

ತನ್ನ ಪ್ರಯತ್ನದಿಂದಾಗಿ ಭಾರತೀಯ ಮಾಧ್ಯಮಗಳಿಂದ ಹೀರೋ ಎಂದು ಘೋಷಿಸಲ್ಪಟ್ಟ ಡಿಕ್ಸ್ ಬಗ್ಗೆ ಅನೇಕರಿಗೆ ತಿಳಿದಿಲ್ಲ, ಅವರು ಓರ್ವ ವಕೀಲರೂ ಸಹ ಆಗಿದ್ದು ತಮ್ಮ ದೇಶದಲ್ಲಿ ಕಾನೂನು ಸೇವೆಯಲ್ಲಿ ತೊಡಗಿದ್ದಾರೆ.

ಬಾರ್ & ಬೆಂಚ್‌ನ ಅಮೀರ್ ಖಾನ್ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ, ಕಾನೂನನ್ನು "ಜನರ ಸೇವಕ" ಎಂದು ಕರೆದಿರುವ ಡಿಕ್ಸ್, ಮೂಲಭೂತ ಸೌಕರ್ಯದಂತಹ ವಿಷಯಗಳನ್ನು ಕಾನೂನಿನ ಸಕಾರಾತ್ಮಕ ಪರಿಣಾಮದ ಬಗ್ಗೆ ಮಾತನಾಡಿದ್ದಾರೆ. ಕಾನೂನು ಎಂಬುದು ಕೇವಲ ಪರಸ್ಪರರ ವಿರುದ್ಧ ಮೊಕದ್ದಮೆ ಹೂಡಲು ಅಥವಾ ಎಲ್ಲರನ್ನೂ ಜೈಲಿಗೆ ತಳ್ಳಲು ಬಳಸುವಂತಹುದಲ್ಲ ಎಂದು ಸ್ಪಷ್ಟವಾಗಿ ನುಡಿದಿದ್ದಾರೆ.

ಎಕೆ: ಎಂಜಿನಿಯರಿಂಗ್ ಮತ್ತು ಕಾನೂನಿನ ನಡುವಿನ ಅನುಸಂಧಾನದ ಬಿಂದುವಿನಲ್ಲಿರುವ ನಿಮ್ಮ ಕೆಲಸದ ಬಗ್ಗೆ ಸ್ವಲ್ಪ ವಿವರಿಸಿ.

ಡಿಕ್ಸ್‌: ನಾನು ವಾಸ್ತವದಲ್ಲಿ ವಕೀಲ. ತಾಂತ್ರಿಕ, ವೈಜ್ಞಾನಿಕ ಮತ್ತು ಎಂಜಿನಿಯರಿಂಗ್ ಕಾನೂನಿನ ವಿಭಾಗದಲ್ಲಿ ಪ್ರಾಕ್ಟೀಸ್‌ ಮಾಡುತ್ತಿದ್ದೇನೆ. ಕಾನೂನು ಮತ್ತು ತಾಂತ್ರಿಕತೆಯ ಹೆಣೆದುಕೊಂಡಿವೆ. ಉದಾಹರಣೆಗೆ, ನಾನು ಎಫ್ಐಡಿಐಸಿ (ಕನ್ಸಲ್ಟಿಂಗ್ ಎಂಜಿನಿಯರ್‌ಗಳ ಒಕ್ಕೂಟ) ಎಂಬ ಸಂಸ್ಥೆ ರೂಪಿಸಿ ಎಫ್ಐಡಿಐಸಿ ಐಟಿಎಯು (ಅಂತಾರಾಷ್ಟ್ರೀಯ ಸುರಂಗ ಮತ್ತು ಭೂಗರ್ಭ ಪ್ರದೇಶ ಸಂಸ್ಥೆ) ಭೂಗರ್ಭ ಕೆಲಸಗಳ ಗುತ್ತಿಗೆಯ ಭಾಗವಾಗಿದ್ದೆ. ಇದೊಂದು ಹೊಸಬಗೆಯ ಸಂಸ್ಥೆ.

ನಾನು ವಿಶೇಷವಾಗಿ ಭೂಗರ್ಭದಲ್ಲಿ ತೊಡಗುವ ಕೆಲಸಗಳಲ್ಲಿನ ಅಪಾಯದ ಹೊಣೆಗಾರಿಕೆಯ ನ್ಯಾಯಯುತ ಹಂಚಿಕೆಗೆ ರೂಪಿಸಲ್ಪಡುವ ಹೊಸ ಒಪ್ಪಂದದ ವ್ಯವಸ್ಥೆಗಳ ಭಾಗವಾಗಿದ್ದೇನೆ. ಇಲ್ಲಿ (ಉತ್ತರ ಕಾಶಿಯಲ್ಲಿ) ಏನಾಯಿತು ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ. ಗ್ರಾಹಕ (ಕ್ಲೈಂಟ್) ಒದಗಿಸಿದ ವಿನ್ಯಾಸದ ಆಧಾರದ ಮೇಲೆ ನಿರ್ದಿಷ್ಟ ಮೊತ್ತವನ್ನು ವಿಧಿಸಲು ನಾವು ಗುತ್ತಿಗೆದಾರರನ್ನು ಒತ್ತಾಯಿಸಬೇಕೇ? ಅಥವಾ ಕಾಮಗಾರಿ ವೇಳೆ ಎದುರಾದ ಭೂಗುಣವನ್ನು ಅವಲಂಬಿಸಿ ಅದಕ್ಕೆ ಅಗತ್ಯವಾದ ಹೊಂದಾಣಿಕೆಗಳನ್ನು ಅನುಮತಿಸುವಂತಹ ವಿಭಿನ್ನ ಕಾರ್ಯವಿಧಾನಗಳನ್ನು ಒಪ್ಪಂದದೊಳಗೆ ಬಳಸಬೇಕೇ ಎಂಬುದನ್ನು ಇದು ಅನ್ವೇಷಿಸುತ್ತದೆ. ಕಾಮಗಾರಿ ವೇಳೆ ಆ ನೆಲದ ಪರಿಸ್ಥಿತಿಗಳು ನಾವು ನಿರೀಕ್ಷಿಸಿದ್ದಕ್ಕಿಂತ ಹೇಗೆ ಭಿನ್ನವಾಗಿರಬಹುದು ಎಂಬುದನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

Arnold Dix
Arnold Dix

ಯಾವ ಮಾನದಂಡಗಳನ್ನು ಅನ್ವಯಿಸಬೇಕು ಎಂಬುದರ ಕುರಿತು ನಾನು ಸಾಕಷ್ಟು ಸಲಹೆಗಳನ್ನು ನೀಡುತ್ತೇನೆ. ಉದಾಹರಣೆಗೆ, ಭಾರತದಲ್ಲಿ ಉತ್ಪಾದನಾ ವಲಯ ಮತ್ತು ನಿಯಂತ್ರಕ ಪರಿಸರವು ವಿಭಿನ್ನವಾಗಿದ್ದರೆ ಒಪ್ಪಂದದ ಚೌಕಟ್ಟಿನೊಳಗೆ ಅಂತಾರಾಷ್ಟ್ರೀಯ ತಾಂತ್ರಿಕ ಮಾನದಂಡವನ್ನು ಅನ್ವಯಿಸುವುದು ಸೂಕ್ತವೇ?


ತಾಂತ್ರಿಕ ಶ್ರೇಷ್ಠತೆ ಮತ್ತು ಆರ್ಥಿಕ ದೃಷ್ಟಿಯಿಂದ ಸೂಪರ್ ಆಗಿ ಹೊರಹೊಮ್ಮತ್ತಿರುವ ವಿಶೇಷ ಸಂದರ್ಭದಲ್ಲಿ ಭಾರತಕ್ಕೆ ತನ್ನದೇ ದೇಶೀಯ ಮಾನದಂಡಗಳು ಇರಬೇಕು ಎಂದು ನಾನು ಭಾವಿಸುತ್ತೇನೆ.

ಎಕೆ: ನಿಮ್ಮ ಕಾನೂನು ವೃತ್ತಿಜೀವನದ ಬಗ್ಗೆ ತಿಳಿಸಬಹುದೇ?

ಅರ್ನಾಲ್ಡ್ ಡಿಕ್ಸ್
ಅರ್ನಾಲ್ಡ್ ಡಿಕ್ಸ್

ಡಿಕ್ಸ್‌: ನಾನು ಆಸ್ಟ್ರೇಲಿಯಾದ ಹೈಕೋರ್ಟ್‌ನ ಬ್ಯಾರಿಸ್ಟರ್. ವಿಕ್ಟೋರಿಯನ್ ಬಾರ್‌ನ ಸದಸ್ಯನಾಗಿದ್ದೇನೆ ಮತ್ತು ಕಾನೂನು ಸಂಸ್ಥೆ ಡಿಎಲ್‌ಎ ಪೈಪರ್‌ನ ಮಾಜಿ ಪಾಲುದಾರ. ಇತ್ತೀಚಿನವರೆಗೂ, ನಾನು ಪ್ಯಾರಿಸ್‌ನಲ್ಲಿರುವ ಕಾನೂನು ಸಂಸ್ಥೆ ವೈಟ್ & ಕೇಸ್‌ಗೆ ವಿಶೇಷ ಸಲಹೆಗಾರನಾಗಿದ್ದೆ. 

ನಾನು ವಕೀಲನಾಗಿದ್ದು, ವಾಸ್ತವದಲ್ಲಿ ನೈಜ ಎಂಜಿನಿಯರ್‌ ಆಗಿರುವುದನ್ನೂ ನೀವು ನೋಡಿದ್ದೀರಿ. ಹಾಗಾದರೆ ನಾನು ಯಾರು ಎನ್ನುವ ಪ್ರಶ್ನೆ ಮೂಡಬಹುದು.

ನಾನು ಕಾನೂನನ್ನು ಜನರ ಸೇವಕನೆಂದು ಭಾವಿಸುತ್ತೇನೆ. ಮೂಲಸೌಕರ್ಯದಂಥ ವಿಷಯಗಳನ್ನು ಕಾನೂನು ಬಲವರ್ಧನೆಗೊಳಿಸಬೇಕು. ಕಾನೂನು ಎಂಬುದು ಪ್ರರಸ್ಪರರ ವಿರುದ್ಧ ಮೊಕದ್ದಮೆ ಹೂಡಿ ಎಲ್ಲರನ್ನೂ ಜೈಲಿಗೆ ಹಾಕುವಂತಾಗಬಾರದು.

ಕಾನೂನು ಎಂಬುದು ಮಾನದಂಡಗಳನ್ನು ಕಾಯ್ದುಕೊಳ್ಳಲು ಸಾಧನವಾಗಬೇಕು ಹಾಗೂ ಆ ಮೂಲಕ ಒಪ್ಪಂದದ ವ್ಯವಸ್ಥೆಯನ್ನು ಬಲಪಡಿಸಿ, ವಿವಾದಗಳನ್ನುತಗ್ಗಿಸುವ ಮೂಲಕ ದೇಶದ ಆರ್ಥಿಕ ಯಂತ್ರವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದನ್ನು ಖಾತರಿಪಡಿಸಿಕೊಳ್ಳಬೇಕು. ಇಲ್ಲಿನ ಜಲವಿದ್ಯುತ್ ಯೋಜನೆಗಳಲ್ಲಿನ ವಿವಾದಗಳನ್ನು ಗಮನದಲ್ಲಿರಿಸಿಕೊಂಡು ಗುತ್ತಿಗೆ ವ್ಯವಸ್ಥೆಗಳ ಬಗ್ಗೆ ನಾನು ಬಹುಶಃ 15 ವರ್ಷಗಳ ಹಿಂದೆ ಇಂಧನ ಸಚಿವಾಲಯಕ್ಕೆ ಕಾನೂನು ಸಲಹೆ ನೀಡಿದ್ದೇನೆ.

ನಾನು ವಕೀಲನಂತೆ ಕಾಣುವುದಿಲ್ಲ, ವಕೀಲನಂತೆ ವರ್ತಿಸುವುದಿಲ್ಲ, ಆದರೆ ನಾನು ನಿಜವಾಗಿಯೂ ಒಬ್ಬ ವಕೀಲ. ನಾನು ವಾಸ್ತವದಲ್ಲಿ ಮಾನವ ಹಕ್ಕುಗಳ ಕಾನೂನಿನಲ್ಲಿಯೂ ಪ್ರಾಕ್ಟೀಸ್‌ ಮಾಡುತ್ತೇನೆ. ನಾವೆಲ್ಲರೂ ಸಮಾನರಾಗಿ ಜನಿಸಿದ್ದೇವೆ ಮತ್ತು ನಮಗೆ ನ್ಯಾಯ ಪಡೆಯುವ ಅವಕಾಶ ಮುಕ್ತವಾಗಿರಬೇಕು ಎಂದು ನಂಬಿದ್ದೇನೆ.

ಎಕೆ: ರಕ್ಷಣಾ ಕಾರ್ಯಾಚರಣೆಯ ನಂತರ ಅನೇಕ ಜೀವಗಳನ್ನು ಉಳಿಸಲಾಗಿದೆ. ಕಾರ್ಯಾಚರಣೆಯ ಪ್ರಯತ್ನಗಳು ಪ್ರತಿಫಲದಾಯಕವಾದವು ಎನ್ನುವ ಭಾವನೆ ಮೂಡಿದೆಯೇ?

ಡಿಕ್ಸ್: ನನಗೆ ತುಂಬಾ ಸಂತೋಷವಾಗಿದೆ, ಸಂತೃಪ್ತ ಭಾವನೆಯಿದೆ. ನಾನು ತುಂಬಾ ಖುಷಿಯಾಗಿದ್ದೇನೆ. 

ಎಕೆ: ಯಾವ ಹಂತದಲ್ಲಿ ನೀವು ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದೀರಿ? ನೀವು ಇಲ್ಲಿಗೆ ಯಾವಾಗ ಬಂದಿದ್ದೀರಿ?

ಡಿಕ್ಸ್‌: ಮೊದಲು ಕುಸಿತ ಸಂಭವಿಸಿದಾಗ, ಭಾರತದಲ್ಲಿನ ನನ್ನ ಸಹೋದ್ಯೋಗಿಗಳಿಂದ ಈ ವಿಚಾರ ಗಮನಕ್ಕೆ ಬಂದಿತು. ಭೂಗರ್ಭದ ಕಾರ್ಯಾಚರಣೆಗಳಲ್ಲಿ ತೊಡಗುವ ನಮ್ಮ ಬಗ್ಗೆ ಸಂಪೂರ್ಣವಾಗಿ ಗೊತ್ತಿರದ ವಿಷಯವೆಂದರೆ ನಾವೆಲ್ಲರೂ ಪ್ರಪಂಚದಾದ್ಯಂತ ಪರಸ್ಪರ ಒಬ್ಬರನ್ನೊಬ್ಬರು ಅರಿತಿರುತ್ತೇವೆ, ಪರಿಚಿತರಾಗಿರುತ್ತೇವೆ. ನಾವೆಲ್ಲರೂ ಒಬ್ಬರು ಮತ್ತೊಬ್ಬರ ಬಗ್ಗೆ ಕಾಳಜಿ ವಹಿಸುತ್ತೇವೆ. ನಾವು ವಿಚಾರಗಳನ್ನು ಹಂಚಿಕೊಳ್ಳುತ್ತೇವೆ.

ಇಲ್ಲಿನ ಒಕ್ಕೂಟ ಸರ್ಕಾರದಿಂದ ಹಾಗೂ ನನಗೆ ಆಪ್ತರಾದ ನಾನು ನಂಬುವ ವ್ಯಕ್ತಿಯಿಂದ ನನಗೆ ಕರೆ ಬಂತು - ಅವರೊಬ್ಬ ಉತ್ತಮ ಎಂಜಿನಿಯರ್. ಅವರು ಇಲ್ಲಿನ ಸಮಸ್ಯೆಯನ್ನು ವಿವರಿಸಿದರು ಮತ್ತು ರಕ್ಷಣಾ ಕಾರ್ಯಾಚರಣೆ ಹೇಗೆ ಮುಂದುವರಿಯಬಹುದು ಎಂಬುದರ ಬಗ್ಗೆ ನಾವು ಕೆಲವು ತಂತ್ರಗಳ ಕುರಿತು ಚರ್ಚಿಸಿದೆವು, ಅದು ಆರಂಭದ ದಿನ. ಮುಂದೆ ಕೆಲವು ದಿನಗಳ ನಂತರ ಪರಿಹಾರ ಕಾರ್ಯ ನಾವಂದುಕೊಂಡಂತೆ ಸಾಗಲಿಲ್ಲ.

ಈ ವೇಳೆ ನಾನು ನನ್ನ ಸಂಪರ್ಕದಲ್ಲಿದ್ದವರೊಂದಿಗೆ ಮತ್ತು ಇಲ್ಲಿನ ಒಕ್ಕೂಟ ಸರ್ಕಾರದ ಬೇರೊಬ್ಬರೊಂದಿಗೆ ಮಾತನಾಡಿದೆ. ಅವರು ದಯವಿಟ್ಟು ಭಾರತಕ್ಕೆ ಬನ್ನಿ ಎಂದರು. ಅದರಂತೆ ನಾನು ಭಾರತಕ್ಕೆ ಬಂದೆ. ಇಲ್ಲಿ ನಮ್ಮ ನಡುವೆ ಬರವಣಿಗೆಯಲ್ಲಿ ಏನೂ ಇರಲಿಲ್ಲ, ಯಾವುದೇ ಸಂಕೀರ್ಣ ಒಡಂಬಡಿಕೆ ಇರಲಿಲ್ಲ.  ಭೂಗರ್ಭದ ಕೆಲಸದಲ್ಲಿ ನಾವು ಈ ರೀತಿಯೇ ಕೆಲಸ ಮಾಡುತ್ತೇವೆ. ನಾವು ಸದಾ ಒಬ್ಬರ ಬಗ್ಗೆ ಒಬ್ಬರು ಕಾಳಜಿವಹಿಸುತ್ತೇವೆ. 

Dix was in Europe looking at a link between Asia and Europe because of the war in Ukraine when he received a call from India.
Dix was in Europe looking at a link between Asia and Europe because of the war in Ukraine when he received a call from India.https://arnolddix.com/

ಎಕೆ: ಅಪಾಯದಲ್ಲಿರುವ ಜೀವಗಳ ಸಂಖ್ಯೆಯ ಬಗ್ಗೆ ಸುಳಿವು ಇತ್ತೇ?

ಕ್ರಿ.ಶ: ಆರಂಭದಲ್ಲಿ ಇದು 40 ಎಂದಿತ್ತು, ನಂತರ ಅದು 41 ಆಗಿತ್ತು. ಅದು ಹೇಗೆ ಸಂಭವಿಸಿತು ಎಂದು ನನಗೆ ತಿಳಿದಿಲ್ಲ. ಅಲ್ಲಿ ಯಾರೋ ಮಗುವನ್ನು ಹೆತ್ತಿರಬಹುದು ಎಂದು ನಾನು ಭಾವಿಸಿದ್ದೆ! ಆದರೆ ನಂತರ ತಿಳಿದಿದ್ದೆಂದರೆ ನಾವು ಆರಂಭದಲ್ಲಿ ಸರಿಯಾಗಿ ಎಣಿಕೆ ಮಾಡಿರಲಿಲ್ಲ ಎಂಬುದು.

ಈ ಹಂತದಲ್ಲಿಯೇ ನಾವು ತೊಂದರೆಯಲ್ಲಿದ್ದೇವೆ ಎನ್ನುವುದು ಸ್ಪಷ್ಟವಾಗಿ ಅರಿವಾಗಿದ್ದು ಹಾಗಾಗಿಯೇ ನಾನು ಬಂದೆ. ಇಲ್ಲಿ ಅಧಿಕಾರಿಗಳು ಕಾರ್ಯಾಚರಣೆಯ ಕುರಿತು ವಿಭಿನ್ನ ತಂತ್ರೋಪಾಯ, ದೃಷ್ಟಿಕೋನಗಳನ್ನು ಹೊಂದಿರುವ ತಂಡವನ್ನು ಒಟ್ಟುಗೂಡಿಸಲು ಉತ್ಸುಕರಾಗಿದ್ದರು. ನನ್ನನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. 

Dix says the rat miners 'really they saved the day' as had the ability to go millimeter by millimeter gently underneath the avalanche to get to the people.
Dix says the rat miners 'really they saved the day' as had the ability to go millimeter by millimeter gently underneath the avalanche to get to the people.

ಎಕೆ: ರಕ್ಷಣಾ ಕಾರ್ಯಾಚರಣೆಯ ಬಗ್ಗೆ ತಿಳಿಸಿ. 

ಡಿಕ್ಸ್‌: ಸುರಂಗದಲ್ಲಿ ಸಿಲುಕಿದ್ದವರನ್ನು ಹೊರತೆಗೆಯಲು ನಾವು ಅನೇಕ ತಂತ್ರಗಳನ್ನು ಚರ್ಚಿಸಿದೆವು ಮತ್ತು ಪ್ರತಿ ತಂತ್ರವು ವಿಭಿನ್ನ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಹೊಂದಿದ್ದವು. ನಾವು ಯಾವ ತಂತ್ರಗಳನ್ನು ಅನುಸರಿಬೇಕು ಎನ್ನುವುದನ್ನು ಬಹಳ ಎಚ್ಚರಿಕೆಯಿಂದ ತುಲನೆ ಮಾಡುತ್ತಿದ್ದೆವು. ಏಕೆಂದರೆ ಕಾರ್ಯಾಚರಣೆ ವೇಳೆ ಯಾರೂ ಅಪಾಯಕ್ಕೊಳಗಾಗಬಾರದು ಎಂಬುದು ನಮ್ಮ ಉದ್ದೇಶವಾಗಿತ್ತು. 

ಸಮಯ ಕಳೆದಂತೆ ಪರ್ವತದ ಬಗ್ಗೆ ನಮ್ಮ ತಿಳಿವಳಿಕೆಯೂ ಬದಲಾಗತೊಡಗಿತು. ಅದು ಜರುಗುತ್ತಿದೆ ಮತ್ತು ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ ಎಂದು ಕಂಡುಕೊಂಡೆವು. ನಾವು ನಿರಂತರವಾಗಿ ಸಮತೋಲನವನ್ನು ಕಾಯ್ದುಕೊಳ್ಳುತ್ತಿದ್ದೆವು. ಅಂತಿಮವಾಗಿ, ನಮಗೆ ಯಂತ್ರಗಳ ಬಳಸದೆ ಮನುಷ್ಯರೇ ಮಾಡುವ ಇಲಿ-ಗಣಿಗಾರಿಕೆ (ರ್ಯಾಟ್‌ ಮೈನಿಂಗ್) ಅಗತ್ಯವಿತ್ತು. ಏಕೆಂದರೆ ನಮಗೆ ಕೆಲಸವನ್ನು ಸಾಧಿಸುವ ಸೌಮ್ಯ ವಿಧಾನದ ಅಗತ್ಯವಿತ್ತು.

ನಾವು ಯಾವಾಗ ಬೇಕಾದರೂ ಕುಸಿಯುವ ಅಪಾಯವುಳ್ಳ ಸೂಕ್ಷ್ಮ ಪರಿಸರದಲ್ಲಿದ್ದೆವು, ಇಲ್ಲಿ ನಮಗೆ ಬಿಲ ಸ್ವರೂಪಿ ಕಾರ್ಯಾಚರಣೆ ಮಾಡುವ ರ್ಯಾಟ್‌ ಮೈನರ್‌ಗಳು ಅಗತ್ಯವಾಗಿದ್ದರು.. ಉತ್ಖನನವನ್ನು ಮಾಡಲು ಅವರು ನಮಗೆ ಬಹಳ ಸೌಮ್ಯವಾದ ಮಾರ್ಗ ಕಲ್ಪಿಸಿದರು. ಈ ವಿಧಾನವು ಇದು ದೀರ್ಘಕಾಲದಿಂದಲೂ ಚಾಲ್ತಿಯಲ್ಲಿರುವ, ಚಿರಪರಿಚಿತ ತಂತ್ರವಾಗಿದೆ.

ಗಣಿಗಾರಿಕೆಗೆ ಈ ವಿಧಾನ ಬಳಸುವುದು ಇಲ್ಲ ಕಾನೂನುಬಾಹಿರ ಎಂದು ನನಗೆ ಈಗ ತಿಳಿದಿದೆ, ಆದರೆ ನಾವು ಅವುಗಳನ್ನು ದೈನಂದಿನ ಗಣಿಕಾರಿಕೆಯ ಉದ್ದೇಶದಿಂದ ಬಳಸಲಿಲ್ಲ.

ಇದು ತುರ್ತಾಗಿ ನಮಗೆ ಅಗತ್ಯವಿತ್ತು. ಅವರು ಅಂತಿಮವಾಗಿ ನಮ್ಮ ಪ್ರಯತ್ನವನ್ನು ಸಾರ್ಥಕಗೊಳಿಸಿದರು, ಅವರು ನಮಗೆ ಇಂಚಿಂಚೇ ಸಾಗುವ ಸಾಧ್ಯತೆಯನ್ನು ಅನಾವರಣಗೊಳಿಸಿದರು. ಕುಸಿಯುವ ಬೆಟ್ಟದ ಕೆಳಗೆ, ಸುರಕ್ಷಿತವಾಗಿ ಕಾರ್ಮಿಕರನ್ನು ತಲುಪಲು ಅನುವು ಮಾಡಿದರು.

Dix knew the team would rescue all the 41 trapped men, alive.
Dix knew the team would rescue all the 41 trapped men, alive.

ಎಕೆ: ಕಾರ್ಯಾಚರಣೆಯ ಸಾಫಲ್ಯಕ್ಕೆ ಕಾರಣವಾದ ಅಂಶ ಯಾವುದು?

ಡಿಕ್ಸ್‌: ಯಾರಿಗೂ ನೋವು ಮಾಡದೇ 41 ಜನರನ್ನು ರಕ್ಷಿಸುತ್ತೇವೆ ಎಂದು ನನಗೆ ತಿಳಿದಿತ್ತು. ನಾನು ಪರಿಸ್ಥಿತಿಯನ್ನು ಪರಿಶೀಲಿಸಿದ ಕ್ಷಣದಿಂದ ಮತ್ತು ಅಲ್ಲಿನ ಸಂಗತಿಗಳ ಬಗ್ಗೆ ನನಗೆ ಅರಿವಿಗೆ ಬಂದ ಕ್ಷಣದಿಂದ ನಾನು ಅದನ್ನೇ ಹೇಳುತ್ತಿದ್ದೆ. ನಮ್ಮ ಮುಂದೆ ಒಂದು ಗುರಿ ಇತ್ತು. ಎಲ್ಲರನ್ನೂ ಸುರಕ್ಷಿತವಾಗಿ ಮನೆಗೆ ಕರೆತರುವುದು ಅದಾಗಿತ್ತು.

ಎಕೆ: ನೀವು ಎಂದಾದರೂ ಇದೇ ರೀತಿಯ ರಕ್ಷಣಾ ಕಾರ್ಯಾಚರಣೆಯ ಭಾಗವಾಗಿದ್ದೀರಾ?

When good people work together, they can achieve greater things, he feels.
When good people work together, they can achieve greater things, he feels.

ಡಿಕ್ಸ್‌: ಸಾಮಾನ್ಯವಾಗಿ, ನನ್ನ ಕಾರ್ಯಾಚರಣೆಗಳು ದೇಹಗಳನ್ನು ಹೊರತೆಗೆಯುವುದಾಗಿರುತ್ತಿತ್ತು. ಏಕೆಂದರೆ ಈ ರೀತಿಯ ಅವಘಡಗಳು ಸಂಭವಿಸಿದಾಗ ಯಾರೂ ಬದುಕುಳಿದಿರುವುದಿಲ್ಲ.

ಇದು ನನಗೆ ನಿಜವಾಗಿಯೂ ಕಲಿಸಿದ್ದು ಏನೆಂದರೆ, ಉತ್ತಮ ಜನರು ಒಗ್ಗೂಡಿ ಉದಾತ್ತ ಫಲಿತಾಂಶವನ್ನು ಸಾಧಿಸಲು ಒಂದಾಗಿ ಕೆಲಸ ಮಾಡಿದಾಗ - ಈ ಕಾರ್ಮಿರನ್ನು ಸುರಕ್ಷಿತವಾಗಿ ಮನೆಗೆ ಸೇರಿಸಬೇಕು ಎನ್ನುವುದು - ಏನು ಬೇಕಾದರೂ ಸಾಧಿಸಬಹುದು ಎನ್ನುವುದು. ನಾವೆಲ್ಲರೂ ಒಗ್ಗೂಡಿ, ಒಂದೇ ಸಂಕುಲವಾಗಿ ಕೆಲಸ ಮಾಡಿದಾಗ ನಾವು ನಿಜವಾಗಿಯೂ ಉತ್ತಮ ಕೆಲಸ ಮಾಡುತ್ತೇವೆ.

ನಾನು ಕಾರ್ಯಾಚರಣೆಗೆ ಇಲ್ಲಿಗೆ ಬಂದಾಗ ನನಗೆ ಏನಾದರೂ ವಿಶೇಷ ಆಹಾರದ ಅಗತ್ಯವಿದೆಯೇ ಎಂದು ವಿಚಾರಿಸಲಾಯಿತು. ನನಗೆ ವಿಶೇಷ ಆಹಾರ ಏಕೆ ಬೇಕು?  ಇಲ್ಲಿ ಎಲ್ಲರೂ ತಾವು ಏನನ್ನು ತಿಂದು ಜೀವಂತವಾಗಿದ್ದಾರೋ ಅದುವೇ ನನ್ನನ್ನು ಜೀವಂತವಾಗಿಸುತ್ತದೆ. ನನಗೆ ಬೇಕಾಗಿದ್ದುದು ಮಲಗಲು ಕೊಂಚ ಸ್ಥಳವಷ್ಟೆ. ಇಲ್ಲಿ ಪ್ರತಿಯೊಬ್ಬರಿಗೂ ಮಲಗಲು ಎಲ್ಲೋ ಒಂದು ಸ್ಥಳವಿದೆ. ಅವರ ಬಳಿ ಏನಿದೆಯೋ ಅದನ್ನು ನನಗೆ ನೀಡುತ್ತಾರೆ ಎಂದು ನಿರ್ಲಿಪ್ತನಾಗಿದ್ದೆ. 

ನಾನು ಫಲಿತಾಂಶದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದೆ. ನಾವೆಲ್ಲರೂ ಫಲಿತಾಂಶದ ಮೇಲೆ ಕೇಂದ್ರೀಕರಿಸಿದ್ದೆವು. ನಾನು ಯಾವ ದೇವರನ್ನು ಪ್ರಾರ್ಥಿಸಿದೆ. ಇಲ್ಲಿ ನನ್ನ ಚರ್ಮವು ಯಾವ ಬಣ್ಣದಲ್ಲಿದೆ, ನಾನು ಹಿಂದಿ ಮಾತನಾಡಬಲ್ಲೆನೋ ಇಲ್ಲವೋ ಎಂಬುದು ಮುಖ್ಯವಲ್ಲ. ನಾನು ಸಹಾಯ ಮಾಡಲು ಇಲ್ಲಿಗೆ ಬಂದಿದ್ದೇನೆ ಎಂಬುದಷ್ಟೇ ಮುಖ್ಯವಾಗಿತ್ತು.

ವಿಶ್ವದ ಇತರ ಭಾಗಗಳಲ್ಲಿ ಏನಾಗುತ್ತಿದೆಯೋ ಅದಕ್ಕಿಂತ ಉತ್ತಮವಾದದ್ದು ಇಲ್ಲಿ ಆಗಿದೆ. ಅಲ್ಲಿ ಅವರೆಲ್ಲರೂ ಯಾರು ಅತಿ ಹೆಚ್ಚು ದೌರ್ಜನ್ಯವನ್ನು ಮಾಡಿದ್ದಾರೆಂದು ಹೋಲಿಸುವಲ್ಲಿ ನಿರತರಾಗಿದ್ದಾರೆ. ಅದು ತುಂಬಾ ತಪ್ಪು. ಆದರೆ ಇಲ್ಲಿ, ಒಳ್ಳೆಯ ಜನರು ಏನು ಮಾಡಬಹುದು ಮತ್ತು ನಾವು ಇಲ್ಲಿ ಪವಾಡಗಳನ್ನು ಹೇಗೆ ಮಾಡಬಹುದು ಎಂಬುದನ್ನು ಜಗತ್ತಿಗೆ ತೋರಿಸಲಾಯಿತು. 

ಎಕೆ: ಈ ರೀತಿಯ ಮತ್ತೊಂದು ವಿಪತ್ತನ್ನು ತಡೆಗಟ್ಟಲು ಭಾರತೀಯ ಅಧಿಕಾರಿಗಳು ಯಾವ ಸಂಗತಿಗಳ ಬಗ್ಗೆ ಗಮನಹರಿಸಬೇಕು ಎಂದು ನೀವು ಹೇಳ ಬಯಸುತ್ತೀರಿ?

ಡಿಕ್ಸ್‌: ಈಗಾಗಲೇ ವಿಚಾರಣೆ ಪ್ರಾರಂಭವಾಗಿದೆ ಮತ್ತು ಅದರ ಭಾಗವಾಗಲು ಬಯಸುತ್ತೀರಾ ಎಂದು ಸರ್ಕಾರ ನನ್ನನ್ನು ಕೇಳಿದೆ. ನಾನು ದೆಹಲಿಗೆ ತೆರಳಿ ಆ ಕುರಿತು ಚರ್ಚಿಸಲಿದ್ದೇನೆ. ಪ್ರತಿ ಬಾರಿ ವಿಪತ್ತು ಸಂಭವಿಸಿದಾಗ, ಅದು ಜಗತ್ತಿನ ಯಾವುದೇ ಭಾಗದಲ್ಲಿ ಆಗಲಿ, ನೀವು ಯಾವಾಗಲೂ ಹೊಸ ವಿಷಯಗಳನ್ನು ಕಲಿಯುತ್ತೀರಿ.

ಇಲ್ಲಿ ನಾನು ಸಾಕಷ್ಟು ಕಲಿತಿದ್ದೇನೆ ಎಂದು ಭಾವಿಸಿದ್ದೇನೆ. ಈ ಸನ್ನಿವೇಶದಲ್ಲಿ ಯಾರೊಬ್ಬರ ಬಗ್ಗೆಯೂ ಕಠೋರವಾಗಿ ವರ್ತಿಸದಿರುವುದು ಸವಾಲಿನ ವಿಷಯವಾಗಿದೆ. ಏನಾದರೂ ಕೆಟ್ಟದ್ದು ಸಂಭವಿಸಿದಾಗ ಜನರು ಎಲ್ಲರನ್ನೂ ದೂಷಿಸುತ್ತಾರೆ. ಪ್ರತಿಯೊಬ್ಬರೂ ಒಂದೊಂದು ರೀತಿಯಲ್ಲಿ ಸುರಂಗ ನಿರ್ಮಾಣವನ್ನು ಮಾಡುತ್ತಾರೆ. ನಮಗೆ ಇಲ್ಲಿ ವಿಪತ್ತು ಎದುರಾಯಿತು.

ಪ್ರಶ್ನೆಯೆಂದರೆ ಭವಿಷ್ಯದಲ್ಲಿ ನಾವು ಇದನ್ನು ಹೇಗೆ ಮಾಡಲು ಬಯಸುತ್ತೇವೆ ಎನ್ನುವುದು ಹಾಗೂ ನಾವು ಏನನ್ನು ಉತ್ತಮವಾಗಿ ಮಾಡಬಹುದು ಎನ್ನುವುದು. ಇಲ್ಲಿನ ಎಂಜಿನಿಯರ್‌ಗಳು ನಿಜವಾಗಿಯೂ ಉತ್ತಮರು, ಇಲ್ಲಿನ ನಿರ್ಮಾಣ ಉದ್ಯಮವೂ ಅದ್ಭುತವಾಗಿದೆ. ಈ ಘಟನೆಯ ನಂತರ ನಾವು ಕೆಲವು ಮಹತ್ವದ ವಿಷಯಗಳನ್ನು ಕಲಿಯುತ್ತೇವೆ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ಮುಂದೆ ಸಾಗಿ, ಆ ಕಲಿಕೆಯು ಇಲ್ಲಿ ಇನ್ನೂ ಉತ್ತಮವಾಗಿರಲಿದೆ ಎನ್ನುವುದು ನನ್ನ ಭಾವನೆ.

ಎಕೆ: ಇಡೀ ಕಾರ್ಯಾಚರಣೆ ಬಗ್ಗೆ ಏನು ಹೇಳಬಯಸುತ್ತೀರಿ?

ಡಿಕ್ಸ್‌: ಇದು ಒಂದು ಪವಾಡ, ಒಂದು ಆಧುನಿಕ ಪವಾಡ. ಬೇರೆ ಏನು ಹೇಳಬೇಕೆಂದು ನನಗೆ ತಿಳಿದಿಲ್ಲ. ಇಡೀ ಜಗತ್ತು, ಎಲ್ಲಾ ತಜ್ಞರು, ಎಲ್ಲಾ ಏಜೆನ್ಸಿಗಳು, ಇಲ್ಲಿನ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸಶಸ್ತ್ರ ಪಡೆಗಳು, ಎಲ್ಲರೂ ಒಗ್ಗೂಡಿದ್ದರಿಂದ ನಾವು ಅದನ್ನು ಸಾಧಿಸಿ ತೋರಿಸಿದ್ದೇವೆ.

ಕೆಲವು ಅಪಾಯ ನಿರ್ವಹಣಾ ವಲಯಗಳಲ್ಲಿ, ನಾವು ಇಂತಹದ್ದನ್ನು ಬಹುತೇಕ ಅಸಂಭವ ಎಂದೇ ಹೇಳುತ್ತೇವೆ. ಯಾವುದೇ ತಪ್ಪು ಮಾಡದ 41 ಜನರು ಸಾವಿನಂಚಿಗೆ ಸಾಗಿ ಮರಳಿ ಬಂದಿದ್ದಾರೆ. ಆದ್ದರಿಂದ, ಇದು ಒಂದು ವರದಾನ ಎಂದು ನಾನು ಎಣಿಸುತ್ತೇನೆ. ನಾವೆಲ್ಲರೂ ಇದರಿಂದ ಕಲಿಯೋಣ. ಭಾರತದ ಸರ್ಕಾರದ ಎಲ್ಲಾ ಹಂತಗಳೊಂದಿಗಿನ ನನ್ನ ಚರ್ಚೆಗಳಿಂದ ಕಂಡು ಬಂದ ಅಂಶವೆಂದರೆ ಅವರು ಸಹ ಇದನ್ನೊಂದು ವರದಾನವೆಂದೇ ಪರಿಗಣಿಸಿರುವುದು.

Kannada Bar & Bench
kannada.barandbench.com