ಪಾಸ್‌ಪೋರ್ಟ್‌ ಮರಳಿಸುವಂತೆ ಹಾಗೂ ಜಾಮೀನು ಬಾಂಡ್ ರದ್ದುಗೊಳಿಸಲು ಕೋರಿ ಮುಂಬೈ ನ್ಯಾಯಾಲಯಕ್ಕೆ ಆರ್ಯನ್ ಖಾನ್ ಅರ್ಜಿ

ಐಷಾರಾಮಿ ಹಡಗಿನಲ್ಲಿ ಮಾದಕವಸ್ತು ದೊರೆತ ಪ್ರಕರಣದಲ್ಲಿ ತಮಗೆ ಜಾಮೀನು ನೀಡುವ ವೇಳೆ ಬಾಂಬೆ ಹೈಕೋರ್ಟ್ ವಿಧಿಸಿದ್ದ ಷರತ್ತಿಗೆ ಅನುಗುಣವಾಗಿ ಎನ್‌ಡಿಪಿಎಸ್‌ ಕಾಯಿದೆಯಡಿ ವಿಶೇಷ ನ್ಯಾಯಾಲಯಕ್ಕೆ ಆರ್ಯನ್ ಪಾಸ್‌ಪೋರ್ಟ್‌ ಒಪ್ಪಿಸಿದ್ದರು.
ಪಾಸ್‌ಪೋರ್ಟ್‌ ಮರಳಿಸುವಂತೆ ಹಾಗೂ ಜಾಮೀನು ಬಾಂಡ್ ರದ್ದುಗೊಳಿಸಲು ಕೋರಿ ಮುಂಬೈ ನ್ಯಾಯಾಲಯಕ್ಕೆ ಆರ್ಯನ್ ಖಾನ್ ಅರ್ಜಿ
A1
Published on

ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕವಸ್ತು ನಿಯಂತ್ರಣ ದಳ (ಎನ್‌ಸಿಬಿ) ತನ್ನನ್ನು ಆರೋಪ ಮುಕ್ತಗೊಳಿಸಿದ ಹಿನ್ನೆಲೆಯಲ್ಲಿ ತಮ್ಮ ಜಾಮೀನು ಬಾಂಡ್‌ ರದ್ದುಗೊಳಿಸಬೇಕು ಮತ್ತು ನ್ಯಾಯಾಲಯದ ವಶಕ್ಕೆ ಒಪ್ಪಿಸಿರುವ ಪಾಸ್‌ಪೋರ್ಟ್‌ ಮರಳಿಸಬೇಕು ಎಂದು ಕೋರಿ ಬಾಲಿವುಡ್‌ ನಟ ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಮುಂಬೈ ಸೆಷನ್ಸ್‌ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆರ್ಯನ್ ತೆರಳಿದ್ದ ಐಷಾರಾಮಿ ಹಡಗಿನಲ್ಲಿ ಅವರ ಸ್ನೇಹಿತರ ಬಳಿ ಮಾದಕವಸ್ತು ಪತ್ತೆಯಾದ ಪ್ರಕರಣ ಇದಾಗಿದೆ.

ಪ್ರಕರಣದಲ್ಲಿ ತಮಗೆ ಜಾಮೀನು ನೀಡುವ ವೇಳೆ ಬಾಂಬೆ ಹೈಕೋರ್ಟ್‌ ವಿಧಿಸಿದ್ದ ಷರತ್ತಿಗೆ ಅನುಗುಣವಾಗಿ ಎನ್‌ಡಿಪಿಎಸ್‌ ಕಾಯಿದೆಯಡಿ ವಿಶೇಷ ನ್ಯಾಯಾಲಯಕ್ಕೆ ಆರ್ಯನ್‌ ಪಾಸ್‌ಪೋರ್ಟ್‌ ಒಪ್ಪಿಸಿದ್ದರು.

Also Read
ಮಾದಕ ವಸ್ತು ಪ್ರಕರಣ: ಆರ್ಯನ್‌ ಖಾನ್‌ಗೆ ಜಾಮೀನು ಭದ್ರತೆ ನೀಡಿದ ಬಾಲಿವುಡ್‌ ನಟಿ ಜೂಹಿ ಜಾವ್ಲಾ

ಪ್ರಕರಣದ ವಿವರವಾದ ತನಿಖೆ ಬಳಿಕ ಸಾಕ್ಷ್ಯಾಧಾರದ ಕೊರತೆ ಹಿನ್ನೆಲೆಯಲ್ಲಿ ಎನ್‌ಸಿಬಿ ತನ್ನನ್ನು ಆರೋಪ ಮುಕ್ತಗೊಳಿಸಿದ್ದು ಇನ್ನು ಮುಂದೆ ಪ್ರಕರಣದಲ್ಲಿ ತಾನು ಆರೋಪಿಯಲ್ಲ ಎಂದು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಆರ್ಯನ್‌ ವಿವರಿಸಿದ್ದಾರೆ.

ಅಕ್ಟೋಬರ್ 2, 2021 ರಂದು ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದ ಐಷಾರಾಮಿ ಹಡಗಿನ ಮೇಲೆ ಎನ್‌ಸಿಬಿ ದಾಳಿ ನಡೆಸಿದ ನಂತರ ಖಾನ್ ಅವರನ್ನು ಮಾದಕವಸ್ತು ನಿಯಂತ್ರಣ ದಳದ (ಎನ್‌ಸಿಬಿ) ವಶಕ್ಕೆ ತೆಗೆದುಕೊಂಡಿತು. ಹಡಗಿಗೆ ತೆರಳುವ ಟರ್ಮಿನಲ್‌ ಬಳಿ ಆರ್ಯನ್‌ ಅವರನ್ನು ಬಂಧಿಸಲಾಗಿತ್ತು.

Kannada Bar & Bench
kannada.barandbench.com