ಆರ್ಯನ್ ಖಾನ್ ಪಾಸ್‌ಪೋರ್ಟ್‌ ಮರಳಿಸುವಂತೆ ಸೂಚಿಸಿದ ಮುಂಬೈ ನ್ಯಾಯಾಲಯ [ಚುಟುಕು]

Aryan Khan and Mumbai Sessions Court
Aryan Khan and Mumbai Sessions Court

ಐಷಾರಾಮಿ ಹಡಗಿನಲ್ಲಿ ದೊರೆತ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಷರತ್ತಾಗಿ ನ್ಯಾಯಾಲಯದ ವಶಕ್ಕೆ ನೀಡಲಾಗಿದ್ದ ಪಾಸ್‌ಪೋರ್ಟ್ ಹಿಂದಿರುಗಿಸುವಂತೆ ಮತ್ತು ಜಾಮೀನು ಬಾಂಡ್‌ ರದ್ದುಗೊಳಿಸುವಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರು ಮಾಡಿದ್ದ ಕೋರಿಕೆಯನ್ನು ಮುಂಬೈ ನ್ಯಾಯಾಲಯ ಬುಧವಾರ ಪುರಸ್ಕರಿಸಿದೆ. ಆರ್ಯನ್‌ ಅವರಿಗೆ ಪಾಸ್‌ಪೋರ್ಟ್‌ ಮರಳಿಸಲು ಹಾಗೂ ಜಾಮೀನು ಬಾಂಡ್‌ ರದ್ದುಗೊಳಿಸಲು ಅದು ಸೂಚಿಸಿದೆ.

ಆದರೆ ಎನ್‌ಸಿಬಿ ತೀವ್ರ ಆಕ್ಷೇಪಣೆಯಿಂದಾಗಿ ಪ್ರಕರಣದಿಂದ ತಮ್ಮನ್ನು ಬಿಡುಗಡೆ ಮಾಡುವಂತೆ ಆರ್ಯನ್‌ ಮಾಡಿದ್ದ ಮನವಿಯನ್ನು ನ್ಯಾಯಾಲಯ ಮನ್ನಿಸಿಲ್ಲ. ಖಾನ್‌ ಅವರನ್ನು ಪ್ರಕರಣದಿಂದ ಬಿಡುಗಡೆ ಮಾಡಬಾರದು ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅದ್ವೈತ್‌ ಸೆತ್ನಾ ಪಟ್ಟು ಹಿಡಿದರು.

ಹೆಚ್ಚಿನ ಮಾಹಿತಿಗಾಗಿ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ಜಾಲ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com