ಜಗನ್‌ ವಿರುದ್ಧ ನ್ಯಾಯಾಂಗ ನಿಂದನೆ: ಬಿಜೆಪಿ ನಾಯಕನಿಗೆ ಮಾರ್ಗದರ್ಶನ ಮಾಡಿದರೂ ಒಪ್ಪಿಗೆ ನಿರಾಕರಿಸಿದ ಅಟಾರ್ನಿ ಜನರಲ್‌

ವೈ ಎಸ್ ಜಗನ್‌ ಮೋಹನ್‌ ರೆಡ್ಡಿ ಅವರು ಬರೆದ ಪತ್ರದಲ್ಲಿ ತಿರಸ್ಕಾರಾರ್ಹವಾದ ಎಲ್ಲಾ ಆರೋಪಗಳು ಉದ್ಭವಿಸಿವೆ ಎಂದು ಎಜಿ ಗಮನಿಸಿದರು, ಇದು ಪ್ರಸ್ತುತ ಸಿಜೆಐ ಎಸ್ಎ ಬೊಬ್ಡೆ ಅವರ ಮುಂದೆ ಪರಿಗಣನೆಯಲ್ಲಿದೆ.
ಜಗನ್‌ ವಿರುದ್ಧ ನ್ಯಾಯಾಂಗ ನಿಂದನೆ: ಬಿಜೆಪಿ ನಾಯಕನಿಗೆ ಮಾರ್ಗದರ್ಶನ ಮಾಡಿದರೂ ಒಪ್ಪಿಗೆ ನಿರಾಕರಿಸಿದ ಅಟಾರ್ನಿ ಜನರಲ್‌

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ವಿಚಾರಣೆ ಪ್ರಾರಂಭಿಸಲು ಸುಪ್ರೀಂಕೋರ್ಟ್‌ಗೆ ಹೇಗೆ ಮನವಿ ಮಾಡಬಹುದು ಎಂಬ ಕುರಿತಂತೆ ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಅವರಿಗೆ ಆಯ್ಕೆಗಳನ್ನು ನೀಡಿರುವ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ವಿಚಾರಣೆ ನಡೆಸಲು ಮಾತ್ರ ತಮ್ಮ ಒಪ್ಪಿಗೆ ನಿರಾಕರಿಸಿದ್ದಾರೆ.

ನ್ಯಾಯಮೂರ್ತಿ ಎನ್ ವಿ ರಮಣ ಅವರ ವಿರುದ್ಧ ಆರೋಪ ಮಾಡಿ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್‌ ಮೋಹನ್ ರೆಡ್ಡಿ ಪತ್ರ ಬರೆದ್ದರು. ಈ ಹಿನ್ನೆಲೆಯಲ್ಲಿ ಜಗನ್‌ ಮತ್ತು ಅವರ ಪ್ರಧಾನ ಸಲಹೆಗಾರ ಅಜೇಯ ಕಲ್ಲಂ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಒಪ್ಪಿಗೆ ಕೋರಿ ಸುಪ್ರೀಂಕೋರ್ಟ್ ವಕೀಲ ಮತ್ತು ಬಿಜೆಪಿ ನಾಯಕ ಉಪಾಧ್ಯಾಯ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರಿಗೆ ಈ ಹಿಂದೆ ಪತ್ರ ಬರೆದಿದ್ದರು.

ರಾಜಕೀಯ ನ್ಯಾಯಸಮ್ಮತಿಗೆ ಸಂಬಂಧಿಸಿದಂತೆ ಬಾಕಿ ಇರುವ ಉಪಾಧ್ಯಾಯ ಅವರ ಅರ್ಜಿಯ ಮೂಲಕ ಅಥವಾ ಮಾಹಿತಿಯನ್ನು ಆಡಳಿತಾತ್ಮಕ ನೆಲೆಯಿಂದ ಇರಿಸುವ ಮೂಲಕ ಸುಪ್ರೀಂಕೋರ್ಟ್ ಪ್ರಕರಣವನ್ನು ಪರಿಗಣಿಸುವಂತೆ ಒತ್ತಾಯಿಸಬಹುದು ಎಂದು ಎಜಿ ತಮ್ಮ ಕಡೆಯಿಂದ ಮಾಹಿತಿ ನೀಡಿದ್ದಾರೆ.

ತಾವು ಒಪ್ಪಿಗೆ ನಿರಾಕರಿಸಿದ್ದರೂ ಈ ಸಂಗತಿಗಳನ್ನು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳ ಗಮನಕ್ಕೆ ತರುವುದನ್ನು ತಡೆಯದು ಎಂದು ಕೂಡ ಅವರು ಹೇಳಿದ್ದಾರೆ. ರೆಡ್ಡಿ ಅವರು ಸಿಜೆಐ ಬೊಬ್ಡೆ ಅವರಿಗೆ ಬರೆದ ಪತ್ರದಲ್ಲಿ ನ್ಯಾಯಾಂಗ ನಿಂದನೆಗೆ ಸಂಬಂಧಿಸಿದ ನಿರ್ಣಾಯಕ ಅಂಶ ಇದೆ ಎಂದು ಎಜಿ ಪುನರುಚ್ಚರಿಸಿದ್ದು, ಇದನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿದೆ. ನ್ಯಾಯಾಂಗ ನಿಂದನೆ ಎಂಬುದು ನ್ಯಾಯಾಲಯ ಮತ್ತು ನಿಂದನೆ ಮಾಡಿದವರ ನಡುವಿನ ವಿಷಯವಾಗಿದೆ. ಈ ವಿಚಾರದಲ್ಲಿ ನ್ಯಾಯಾಂಗ ವಿಚಾರಣೆ ಆರಂಭಿಸುವಂತೆ ಯಾರೂ ನ್ಯಾಯಾಲಯವನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಕೂಡ ಅವರು ಹೇಳಿದ್ದಾರೆ.

ಅಲ್ಲದೆ ರೆಡ್ಡಿ ಅವರು ಬರೆದ ಪತ್ರ ಈಗಾಗಲೇ ಎಲ್ಲಾ ಕಡೆ ವಿಸ್ತೃತವಾಗಿ ವರದಿಯಾಗಿದೆ. ಇದು ಈಗ ಖಾಸಗಿ ವಿಚಾರವಾಗಿ ಉಳಿದಿಲ್ಲ. ಹೀಗಾಗಿ, ನ್ಯಾಯಾಂಗ ನಿಂದನೆ ವಿಚಾರಣೆ ಆರಂಭಿಸಲು ಒಪ್ಪಿಗೆ ನೀಡುವ ಬಗ್ಗೆ ತಮ್ಮ ಮನಸ್ಸು ಬದಲಿಸಲು ಯಾವುದೇ ಕಾರಣ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com