ಅವಾಂತ ಪ್ರಕರಣ: ಪಿಎಂಎಲ್ಎ ನ್ಯಾಯಾಲಯ ಜಾಮೀನು ನೀಡಿದರೂ ರಾಣಾ ಕಪೂರ್‌ಗೆ ಇಲ್ಲ ಬಿಡುಗಡೆ ಭಾಗ್ಯ [ಚುಟುಕು]

Yes Bank and Rana Kapoor

Yes Bank and Rana Kapoor

ರಿಯಾಲ್ಟಿ ಕಂಪನಿಯೊಂದಿಗೆ ₹ 307 ಕೋಟಿ ವ್ಯವಹಾರವನ್ನು ಒಳಗೊಂಡ ಬ್ಯಾಂಕ್‌ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಮತ್ತು ಅವಾಂತ ರಿಯಾಲ್ಟಿ ಕಂಪೆನಿಯ ಪ್ರವರ್ತಕ ಗೌತಮ್ ಥಾಪರ್‌ ಮತ್ತಿತರ ಏಳು ಮಂದಿಗೆ ಮುಂಬೈನ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿದೆ.

ಆದರೆ ಜಾಮೀನು ಸಿಕ್ಕರೂ ರಾಣಾ ಅವರು ತಕ್ಷಣಕ್ಕೆ ಜೈಲಿನಿಂದ ಹೊರಬರುವಂತಿಲ್ಲ. ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಮತ್ತೊಂದು ಪ್ರಕರಣದಲ್ಲಿ ಅವರನ್ನು ತಿಹಾರ್‌ ಜೈಲಿನಲ್ಲಿ ಇರಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com