[ಚಕ್ರ ಬಡ್ಡಿ ವಿಚಾರ] ಎಕ್ಸ್‌ಗ್ರೇಷಿಯಾ ಯೋಜನೆ ನಿಬಂಧನೆಗಳಿಂದ ಮಾರ್ಗದರ್ಶಿತವಾಗಲು ಬ್ಯಾಂಕುಗಳಿಗೆ ಸೂಚಿಸಿರುವ ಆರ್‌ಬಿಐ

ಕೋವಿಡ್‌ ಹಿನ್ನೆಲೆಯಲ್ಲಿ ನಿರ್ದಿಷ್ಟ ಸಾಲ ಖಾತೆಗಳ ಸಾಲಗಾರರಿಗೆ 6 ತಿಂಗಳ ಅವಧಿಯ ಚಕ್ರ ಬಡ್ಡಿ ಮತ್ತು ಸರಳ ಬಡ್ಡಿ ನಡುವಿನ ವ್ಯತ್ಯಾಸವನ್ನು ಎಕ್ಸ್‌ಗ್ರೇಷಿಯಾ (ಕೃಪಾಧನ) ರೂಪದಲ್ಲಿ ಪಾವತಿಸುವ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
[ಚಕ್ರ ಬಡ್ಡಿ ವಿಚಾರ] ಎಕ್ಸ್‌ಗ್ರೇಷಿಯಾ ಯೋಜನೆ ನಿಬಂಧನೆಗಳಿಂದ ಮಾರ್ಗದರ್ಶಿತವಾಗಲು ಬ್ಯಾಂಕುಗಳಿಗೆ ಸೂಚಿಸಿರುವ ಆರ್‌ಬಿಐ
RBI Supreme Court

ಆರು ತಿಂಗಳಿಗೆ ಮಿತಿಗೊಳಿಸಿ ನಿರ್ದಿಷ್ಟ ಸಾಲ ಖಾತೆಗಳ ಚಕ್ರ ಬಡ್ಡಿ ಮತ್ತು ಸರಳ ಬಡ್ಡಿಯ ನಡುವಿನ ವ್ಯತ್ಯಾಸವನ್ನು ಪಾವತಿಸುವ ಅಕ್ಟೋಬರ್‌ 23ರ ಎಕ್ಸ್‌ಗ್ರೇಷಿಯಾ (ಕೃಪಾಧನ) ಯೋಜನೆಯಿಂದ ಮಾರ್ಗದರ್ಶಿತವಾಗುವಂತೆ ಎಲ್ಲಾ ಬ್ಯಾಂಕುಗಳಿಗೆ ಸೂಚಿಸಿರುವುದಾಗಿ ಆರ್‌ಬಿಐ ಸುಪ್ರೀಂ ಕೋರ್ಟ್‌ ಗೆ ಭಾನುವಾರ ಮಾಹಿತಿ ನೀಡಿದೆ.

ಕೋವಿಡ್‌ -19 ರ ಗಂಭೀರ ಸಂಕಷ್ಟ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಅಕ್ಟೋಬರ್ 23 ರ ಯೋಜನೆ ಜಾರಿಗೆ ತರಲಾಗಿದೆ ಎಂದು ಆರ್‌ಬಿಐನ ಮೇಲ್ವಿಚಾರಣಾ ಇಲಾಖೆಯ (ಬ್ಯಾಂಕಿಂಗ್) ಸಹಾಯಕ ಪ್ರಧಾನ ವ್ಯವಸ್ಥಾಪಕರು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ.

Also Read
[ಮೊರಟೊರಿಯಂ] ಸಾಲದ ಕಂತಿನ ಮೇಲೆ ವಿಧಿಸಿದ್ದ ಚಕ್ರಬಡ್ಡಿ ಸಂಬಂಧ ಎಕ್ಸ್ ಗ್ರೇಷಿಯಾ ಪಾವತಿಸಲು ಮುಂದಾದ ಕೇಂದ್ರ ಸರ್ಕಾರ

ಈ ಯೋಜನೆ ಮಾರ್ಚ್ 1, 2020 ರಿಂದ ಆಗಸ್ಟ್ 31, 2020 ರವರೆಗಿನ 6 ತಿಂಗಳ ಅವಧಿಗೆ ಅನ್ವಯಿಸುತ್ತದೆ. ಕೆಳಗಿನ ವರ್ಗಗಳ ಅಡಿಯಲ್ಲಿ ಸಾಲ ಅಥವಾ ಕಡ ಪಡೆದ ಸಾಲಗಾರರು ಪ್ರಯೋಜನಗಳನ್ನು ಪಡೆಯಲು ಅರ್ಹರಾಗಲಿದ್ದಾರೆ:

 • ಎಂಎಸ್‌ಎಂಇ ಸಾಲ

 • ಶೈಕ್ಷಣಿಕ ಸಾಲ

 • ಗೃಹ ಸಾಲ

 • ಗ್ರಾಹಕ ಉತ್ಪನ್ನಗಳ ಮೇಲಿನ ಸಾಲಗಳು

 • ಕ್ರೆಡಿಟ್ ಕಾರ್ಡ್ ಬಾಕಿ

 • ಆಟೋಮೊಬೈಲ್ ಸಾಲಗಳು

 • ವೃತ್ತಿಪರರಿಗೆ ವೈಯಕ್ತಿಕ ಸಾಲ

 • ಬಳಕೆ ಸಾಲಗಳು

ಎಕ್ಸ್‌ಗ್ರೇಷಿಯಾ ಯೋಜನೆ ನಿಬಂಧನೆಗಳಿಂದ ಮಾರ್ಗದರ್ಶನ ಪಡೆಯುವಂತೆ ಅಕ್ಟೋಬರ್ 26ರ ಸಂದೇಶದ ಮೂಲಕ ಆರ್‌ಬಿಐ ಬ್ಯಾಂಕುಗಳಿಗೆ ಸೂಚಿಸಿದೆ.

ಎಲ್ಲಾ ವಾಣಿಜ್ಯ ಬ್ಯಾಂಕುಗಳು (ಸಣ್ಣ ಹಣಕಾಸು ಬ್ಯಾಂಕುಗಳು, ಸ್ಥಳೀಯ ಪ್ರದೇಶ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಸೇರಿದಂತೆ), ಎಲ್ಲಾ ಪ್ರಾಥಮಿಕ (ನಗರ) ಸಹಕಾರಿ ಬ್ಯಾಂಕುಗಳು / ರಾಜ್ಯ ಸಹಕಾರಿ ಬ್ಯಾಂಕುಗಳು / ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು, ಎಲ್ಲಾ ಅಖಿಲ ಭಾರತ ಹಣಕಾಸು ಸಂಸ್ಥೆಗಳಿಗೆ ಆರ್‌ಬಿಐ ಸಲಹೆ ನೀಡಿದೆ. ಹಣಕಾಸು ಸಂಸ್ಥೆಗಳು ಮತ್ತು ಎಲ್ಲಾ ಬ್ಯಾಂಕೇತರ ಹಣಕಾಸು ಕಂಪನಿಗಳು (ಹೌಸಿಂಗ್ ಫೈನಾನ್ಸ್ ಕಂಪನಿಗಳು ಸೇರಿದಂತೆ) ಯೋಜನೆಯ ನಿಬಂಧನೆಗಳಿಂದ ಮಾರ್ಗದರ್ಶಿತವಾಗಬೇಕು ಮತ್ತು ಅದರಲ್ಲಿರುವಂತೆ ನಿಗದಿತ ಸಮಯದೊಳಗೆ ಅಗತ್ಯ ಕ್ರಮ ಕೈಗೊಳ್ಳಬೇಕು.
ಆರ್‌ಬಿಐ ಸಲ್ಲಿಸಿರುವ ಅಫಿಡವಿಟ್‌

ಯೋಜನೆಯ ಪ್ರಕಾರ, ಅರ್ಹತೆಯು ಈ ಕೆಳಗಿನ ಷರತ್ತುಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ:

 • ಸಾಲ ಖಾತೆ ಫೆಬ್ರವರಿ 29,2020ಕ್ಕೆ ಅನ್ವಯವಾಗುವಂತೆ ಅನುತ್ಪಾದಕ ಆಸ್ತಿಯಾಗಿರಬಾರದು (ಎನ್‌ಪಿಎ).

 • ಸಾಲ ನೀಡುವ ಸಂಸ್ಥೆ ಬ್ಯಾಂಕಿಂಗ್ ಕಂಪನಿ ಅಥವಾ ಸಾರ್ವಜನಿಕ ವಲಯದ ಬ್ಯಾಂಕ್ ಅಥವಾ ಸಹಕಾರಿ ಬ್ಯಾಂಕ್ ಅಥವಾ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಅಥವಾ ಅಖಿಲ ಭಾರತ ಹಣಕಾಸು ಸಂಸ್ಥೆ ಅಥವಾ ಎನ್‌ಬಿಎಫ್‌ಸಿ ಅಥವಾ ನೋಂದಾಯಿತ ಹೌಸಿಂಗ್ ಫೈನಾನ್ಸ್ ಕಂಪನಿಯಾಗಿರಬೇಕು.

 • ಆರ್‌ಬಿಐ ಘೋಷಿಸಿದ ಸಾಲ ಮರುಪಾವತಿ ಮುಂದೂಡಿಕೆ (ಮೊರಟೊರಿಯಂ) ಸೌಲಭ್ಯವನ್ನು ಸಂಬಂಧಪಟ್ಟ ಸಾಲಗಾರ ಪಡೆದುಕೊಂಡಿದ್ದಾನೆಯೇ, ಇಲ್ಲವೇ ಎನ್ನುವುದರ ಹೊರತಾಗಿಯೂ ಯೋಜನೆಯಡಿ ಎಕ್ಸ್‌ಗ್ರೇಷಿಯಾ ಪಾವತಿಗೆ ಸ್ವೀಕಾರಾರ್ಹ.

Related Stories

No stories found.