ಬಾರ್ ಅಂಡ್ ಬೆಂಚ್ ವಿಶೇಷ ವರದಿಗಾರ ದೇಬಯಾನ್ ರಾಯ್ ಅವರಿಗೆ ಕಾನೂನು ತನಿಖಾ ಪತ್ರಕರ್ತ ಪ್ರಶಸ್ತಿ

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅನಿಲ್ ಆರ್ ದವೆ ಅವರಿಂದ ಅವರು ಫೆಬ್ರವರಿ 24ರಂದು ಪ್ರಶಸ್ತಿ ಸ್ವೀಕರಿಸಿದರು.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಅನಿಲ್ ದವೆ ಅವರಿಂದ ಪ್ರಶಸ್ತಿ ಸ್ವೀಕರಿಸಿದ ದೇಬಯಾನ್ ರಾಯ್.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಅನಿಲ್ ದವೆ ಅವರಿಂದ ಪ್ರಶಸ್ತಿ ಸ್ವೀಕರಿಸಿದ ದೇಬಯಾನ್ ರಾಯ್.

ಉತ್ತರ ದೆಹಲಿ ವಕೀಲರ ಸಂಘ ನೀಡುವ 2023-24ನೇ ಸಾಲಿನ ಜಸ್ಟೀಸ್ ಮೀಡಿಯಾ ಕಾನೂನು ತನಿಖಾ ಪತ್ರಕರ್ತ ಪ್ರಶಸ್ತಿಗೆ ಬಾರ್ ಅಂಡ್ ಬೆಂಚ್ ವಿಶೇಷ ವರದಿಗಾರ ದೇಬಯಾನ್ ರಾಯ್ ಅವರು ಭಾಜನರಾಗಿದ್ದಾರೆ.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅನಿಲ್ ಆರ್ ದವೆ ಅವರಿಂದ ಅವರು ಫೆಬ್ರವರಿ 24ರಂದು ಅವರು ಪ್ರಶಸ್ತಿ ಸ್ವೀಕರಿಸಿದರು. ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಎಂ ಎಂ ಕುಮಾರ್ ಮತ್ತು ಹೆಚ್ಚುವರಿ ಕಾನೂನು ಕಾರ್ಯದರ್ಶಿ ಡಾ. ಅಂಜು ರತಿ ರಾಣಾ ಉಪಸ್ಥಿತರಿದ್ದರು.

ದೇಬಯಾನ್ 2023 ರಲ್ಲಿ ಕೂಡ ಅತ್ಯುತ್ತಮ ಕಾನೂನು ವರದಿಗಾರ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದರು. ಕಾನೂನು ಪತ್ರಿಕೋದ್ಯಮ ಕ್ಷೇತ್ರದ ಅನುಪಮ ಸಾಧನೆಗಾಗಿ 2023ರಲ್ಲಿ ಸಂಡೇ ಗಾರ್ಡಿಯನ್ ಪ್ರತಿಷ್ಠಾನದ ಮೊಟ್ಟಮೊದಲ  ರಾಮ್ ಜೇಠ್ಮಲಾನಿ ಪ್ರಶಸ್ತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಪಾತ್ರವಾಗಿತ್ತು.

Related Stories

No stories found.
Kannada Bar & Bench
kannada.barandbench.com