ಕಾನೂನು ಪತ್ರಿಕೋದ್ಯಮಕ್ಕಾಗಿ 'ಬಾರ್‌ ಅಂಡ್‌ ಬೆಂಚ್‌ʼ ಮುಡಿಗೆ ರಾಮ್‌ ಜೇಠ್ಮಲಾನಿ ಪ್ರಶಸ್ತಿಯ ಗರಿ

ನವದೆಹಲಿಯಲ್ಲಿ ಶುಕ್ರವಾರ ನಡೆದ ರಾಮ್‌ ಜೇಠ್ಮಲಾನಿ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಕಾನೂನು ಸಚಿವ ರಾಮ್‌ ಮೇಘ್‌ವಾಲ್‌' ಅವರು ಪ್ರಶಸ್ತಿ ಪ್ರದಾನ ಮಾಡಿದರು.
Union Law Minister Ram Meghwal gave away Ram Jethmalani award to Bar & Bench
Union Law Minister Ram Meghwal gave away Ram Jethmalani award to Bar & Bench

ಕಾನೂನು ಪತ್ರಿಕೋದ್ಯಮದಲ್ಲಿನ ಸಾಧನೆಗಾಗಿ ನೀಡಲಾಗುವ ಖ್ಯಾತ ನ್ಯಾಯವಾದಿ ರಾಮ್‌ ಜೇಠ್ಮಲಾನಿ ಪ್ರಶಸ್ತಿಗೆ 'ಬಾರ್‌ ಅಂಡ್‌ ಬೆಂಚ್‌' ಭಾಜನವಾಗಿದೆ.

ನವದೆಹಲಿಯಲ್ಲಿ ಶುಕ್ರವಾರ ನಡೆದ ರಾಮ್‌ ಜೇಠ್ಮಲಾನಿ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನೆರವೇರಿತು. ಕೇಂದ್ರ ಕಾನೂನು ಸಚಿವ ರಾಮ್‌ ಮೇಘ್‌ವಾಲ್‌ ಅವರಿಂದ ʼಬಾರ್‌ ಅಂಡ್‌ ಬೆಂಚ್‌ʼ ಪ್ರಧಾನ ಸಂಪಾದಕಿ ಪಲ್ಲವಿ ಸಲೂಜಾ ಅವರು ಸಂಸ್ಥೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

'ಬಾರ್‌ ಅಂಡ್‌ ಬೆಂಚ್‌ʼನ ಸುಪ್ರೀಂ ಕೋರ್ಟ್‌ ವರದಿಗಾರ ದೇಬಯಾನ್‌ ರಾಯ್‌, ಹಿರಿಯ ನ್ಯಾಯವಾದಿ ಹಾಗೂ ಜೇಠ್ಮಲಾನಿ ಪುತ್ರ ಮಹೇಶ್‌ ಜೇಠ್ಮಲಾನಿ, ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Kannada Bar & Bench
kannada.barandbench.com