ವಿದೇಶಿ ವಕೀಲರು ಮತ್ತು ಕಾನೂನು ಸಂಸ್ಥೆಗಳಿಗೆ ದೇಶದಲ್ಲಿ ಪ್ರವೇಶಾವಕಾಶ ಕಲ್ಪಿಸಿದ ಬಿಸಿಐ

ಭಾರತೀಯ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳಲ್ಲಿ ವಿದೇಶಿ ವಕೀಲರು ಮತ್ತು ಸಂಸ್ಥೆಗಳು ಹಾಜರಾಗುವಂತಿಲ್ಲ. ಅಲ್ಲದೆ ಭಾರತೀಯ ಕಾನೂನುಗಳ ಬಗ್ಗೆ ಸಲಹೆ ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ ಬಿಸಿಐ ನೂತನ ನಿಯಮಾವಳಿ.
Bar Council of India
Bar Council of IndiaA1

ಕಾನೂನು ಕ್ಷೇತ್ರಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತೀಯ ವಕೀಲರ ಪರಿಷತ್ತು ವಿದೇಶಿ ವಕೀಲರು ಮತ್ತು ಕಾನೂನು ಸಂಸ್ಥೆಗಳು ಪರಸ್ಪರ ವಿನಿಮಯದ ಆಧಾರದಲ್ಲಿ ವಿದೇಶಿ ಕಾನೂನುಗಳನ್ನು ಪ್ರಾಕ್ಟೀಸ್‌ ಮಾಡಲು ಅವಕಾಶ ಕಲ್ಪಿಸಿದೆ.

ಅಂತರರಾಷ್ಟ್ರೀಯ ವಕೀಲರು ಮತ್ತು ಮಧ್ಯಸ್ಥಿಕೆ ಕ್ಷೇತ್ರದಲ್ಲಿ ಪ್ರಾಕ್ಟೀಸ್‌ ಮಾಡುವವರಿಗೆ ಭಾರತದಲ್ಲಿ  ಸಲಹೆ ನೀಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ ವಿದೇಶಿ ವಕೀಲರು ಮತ್ತು ವಿದೇಶಿ ಕಾನೂನು ಸಂಸ್ಥೆಗಳ ನೋಂದಣಿ ಮತ್ತು ನಿಯಂತ್ರಣಕ್ಕಾಗಿ ಬಿಸಿಐ ನಿಯಮಾವಳಿ- 2022ನ್ನು ಜಾರಿಗೆ ತರಲಾಗಿದೆ.

ವಿದೇಶಿ ಕಾನೂನು ಪ್ರಾಕ್ಟೀಸ್‌ ಕ್ಷೇತ್ರದಲ್ಲಿ ಮತ್ತು ವ್ಯಾಜ್ಯವಲ್ಲದ ಪ್ರಕರಣಗಳಲ್ಲಿ ವಿದೇಶಿ ವಕೀಲರಿಗೆ ಭಾರತದಲ್ಲಿ ಕಾನೂನು ಪ್ರಾಕ್ಟೀಸ್‌ ಮಾಡಲು ಅವಕಾಶ ಕಲ್ಪಿಸುವುದರಿಂದ ವೈವಿಧ್ಯಮಯ ಅಂತರರಾಷ್ಟ್ರೀಯ ಕಾನೂನು ವ್ಯಾಜ್ಯಗಳು ಮತ್ತು ಅಂತರಾಷ್ಟ್ರೀಯ ಮಧ್ಯಸ್ಥಿಕೆ ಪ್ರಕರಣಗಳಲ್ಲಿ ಭಾರತದ ವಕೀಲರಿಗೆ ಅನುಕೂಲ ಕಲ್ಪಿಸಲಿದೆ. ಅಲ್ಲದೆ ಕಾನೂನು ಕ್ಷೇತ್ರದ ಬೆಳೆಯಲು ಭವಿಷ್ಯದಲ್ಲಿ ಸಹಾಯ ಮಾಡಲಿದೆ ಎಂದು ಬಿಸಿಐ ಹೇಳಿದೆ.

ವಿದೇಶಿ ವಕೀಲರ ನೋಂದಣಿ ಶುಲ್ಕದ ವಿವರ ಈ ರೀತಿ ಇದೆ:

Foreign lawyers registration fees
Foreign lawyers registration fees

ವಿದೇಶಿ ವಕೀಲರಿಗೆ ನಿರ್ಬಂಧಿತ ಮತ್ತು ನಿಯಂತ್ರಿತ ರೀತಿಯಲ್ಲಿ ಕಾನೂನು ಪ್ರಾಕ್ಟೀಸ್‌ಗೆ ಅವಕಾಶ ಕಲ್ಪಿಸಿದರೆ ದೇಶಕ್ಕೆ ಯಾವುದೇ ಅನಾನುಕೂಲತೆ ಉಂಟಾಗುವ ಸಾಧ್ಯತೆ ಇಲ್ಲ ಎಂದು ಬಿಸಿಐ ಹೇಳಿದೆ.

ಇದೇ ವೇಳೆ ಭಾರತೀಯ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳಲ್ಲಿ ವಿದೇಶಿ ವಕೀಲರು ಮತ್ತು ಸಂಸ್ಥೆಗಳು ಹಾಜರಾಗುವಂತಿಲ್ಲ. ಅಲ್ಲದೆ ಭಾರತೀಯ ಕಾನೂನುಗಳ ಬಗ್ಗೆ ಸಲಹೆ ನೀಡುವಂತಿಲ್ಲ ಎಂದು ನಿಯಮಾವಳಿ ಸ್ಪಷ್ಟಪಡಿಸಿದೆ.

Related Stories

No stories found.
Kannada Bar & Bench
kannada.barandbench.com