[ಭೀಮಾ ಕೋರೆಗಾಂವ್] ಮೂವರು ಆರೋಪಿಗಳ ಡಿಫಾಲ್ಟ್ ಜಾಮೀನು ಅರ್ಜಿಯ ತೀರ್ಪು ಕಾಯ್ದಿರಿಸಿದ ಬಾಂಬೆ ಹೈಕೋರ್ಟ್

Varavara Rao, Arun Ferreira and Vernon Gonsalves - BHIMA KOREGAON & Bombay High Court

Varavara Rao, Arun Ferreira and Vernon Gonsalves - BHIMA KOREGAON & Bombay High Court

Published on

ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮೂವರು ಆರೋಪಿಗಳಾದ ಕ್ರಾಂತಿ ಕವಿ ವರವರ ರಾವ್, ಸಾಮಾಜಿಕ ಕಾರ್ಯಕರ್ತರಾದ ಅರುಣ್ ಫೆರೇರಾ ಮತ್ತು ವೆರ್ನಾನ್ ಗೊನ್ಸಾಲ್ವಿಸ್ ಅವರಿಗೆ ಡಿಫಾಲ್ಟ್ ಜಾಮೀನು ನಿರಾಕರಿಸಿ ಬಾಂಬೆ ಹೈಕೋರ್ಟ್ 2021ರ ಡಿಸೆಂಬರ್‌ನಲ್ಲಿ ನೀಡಿದ್ದ ತೀರ್ಪನ್ನು ಪರಿಶೀಲಿಸುವಂತೆ ಕೋರಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಬಾಂಬೆ ಹೈಕೋರ್ಟ್ ಮಂಗಳವಾರ ಕಾಯ್ದಿರಿಸಿದೆ.

2021ರ ತೀರ್ಪಿನಲ್ಲಿ ವಾಸ್ತವಿಕ ದೋಷವಿದ್ದು ಅದನ್ನು ಸರಿಪಡಿಸದಿದ್ದರೆ ನ್ಯಾಯದಾನದಲ್ಲಿ ಸಮಸ್ಯೆಯಾಗಲಿದೆ ಎಂದು ಈ ಮೂವರೂ ಮರುಪರಿಶೀಲನಾ ಅರ್ಜಿಯಲ್ಲಿ ತಿಳಿಸಿದ್ದರು. ನ್ಯಾಯಾಲಯವು ಎಸಗಿದ ವಾಸ್ತವಿಕ ದೋಷವೇನು ಎನ್ನುವುದನ್ನು ತಿಳಿಸುವಂತೆ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್‌ ಕೇಳಿತ್ತು.

ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್‌‌ ಗಮನಿಸಿ.

Kannada Bar & Bench
kannada.barandbench.com