ಭೂಷಣ್ ಪವರ್ ದಿವಾಳಿತನ: ಮೇಲ್ಮನವಿ ಮುಂದುವರೆಸದೆ ಇರಲು ಇ ಡಿ ನಿರ್ಧಾರ: ಆಸ್ತಿ ಮರಳಿಸಲು ಸುಪ್ರೀಂ ಆದೇಶ

ಭೂಷಣ್ ಪವರ್ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕರಣವನ್ನು ಮುಂದುವರಿಸದೆ ಇರಲು ಇ ಡಿ ನಿರ್ಧರಿಸಿದ ನಂತರ ಸುಪ್ರೀಂ ಕೋರ್ಟ್ ಈ ಆದೇಶ ನೀಡಿತು.
Supreme Court, Enforcement Directorate
Supreme Court, Enforcement Directorate
Published on

ಸಾಲ ವಸೂಲಾತಿ ಮತ್ತು ದಿವಾಳಿತನ ಸಂಹಿತೆ (ಐಬಿಸಿ) ಅಡಿಯಲ್ಲಿ ಭೂಷಣ್‌ ಪವರ್‌ ಅಂಡ್‌ ಸ್ಟೀಲ್‌ ಅನ್ನು ಜೆಎಸ್‌ಡಬ್ಲ್ಯೂ ಸ್ಟೀಲ್‌ ಸ್ವಾಧೀನಪಡಿಸಿಕೊಂಡಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ತಾನು ಸಲ್ಲಿಸಿರುವ ಮೇಲ್ಮನವಿ ಮುಂದುವರೆಸದೆ ಇರಲು ಜಾರಿ ನಿರ್ದೇಶನಾಲಯ ಈಚೆಗೆ ನಿರ್ಧರಿಸಿದೆ [ಕಮಿಟಿ ಆಫ್‌ ಕ್ರೆಡಿಟರ್ಸ್‌ ಮತ್ತು ಜಾರಿ ನಿರ್ದೇಶನಾಲಯ ಇನ್ನಿತರರ ನಡುವಣ ಪ್ರಕರಣ].

ಆ ಮೂಲಕ ಐಬಿಸಿ ಅಡಿಯಲ್ಲಿ ನಡೆದ ದಿವಾಳಿತನ ಪ್ರಕ್ರಿಯೆ ಅನುಸಾರ ಭೂಷಣ್‌ ಪವರ್‌ ಸ್ವಾಧೀನಕ್ಕಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಯಶಸ್ವಿಯಾದ ಜೆಎಸ್‌ಡಬ್ಲ್ಯೂ ಸ್ಟೀಲ್‌ಗೆ ಜೆಎಸ್‌ಡಬ್ಲ್ಯೂ ಸ್ಟೀಲ್‌ಗೆ ₹4,025 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಹಸ್ತಾಂತರಿಸಿದೆ.

Also Read
ರಾಜ್ಯ ಕಾಯಿದೆ ಮೇಲೆ ಐಬಿಸಿ ಅತಿಕ್ರಮಣ: ಡಿಐಐ ವಿರುದ್ದ ರಾಜ್ಯ ಸರ್ಕಾರದ ಸಮಾನಾಂತರ ವಿಚಾರಣೆ ರದ್ದುಪಡಿಸಿದ ಹೈಕೋರ್ಟ್

ಭೂಷಣ್‌ ಪವರ್‌ನಿಂದ ಮುಟ್ಟುಗೋಲು ಹಾಕಿಕೊಂಡಿದ್ದ ಆಸ್ತಿ ಹಸ್ತಾಂತರಿಸುವಂತೆ ಇ ಡಿಗೆ ಡಿ. 11ರಂದು ಸುಪ್ರೀಂ ಕೋರ್ಟ್‌ ಆದೇಶಿಸಿದ ಹಿನ್ನೆಲೆಯಲ್ಲಿ ಆಸ್ತಿ ಮರಳಿಸಲಾಗಿದೆ.

ಭೂಷಣ್ ಪವರ್  ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕರಣವನ್ನು ಮುಂದುವರಿಸದೆ ಇರಲು ಇ ಡಿ ನಿರ್ಧರಿಸಿದ ನಂತರ ಸುಪ್ರೀಂ ಕೋರ್ಟ್ ಈ ಆದೇಶ ನೀಡಿತು.

ಡಿಸೆಂಬರ್ 2019ರಿಂದ ಜಾರಿಗೆ ಬರುವಂತೆ ಸೆಕ್ಷನ್‌ 32 ಎ ಸೇರಿಸಲಾಗಿತ್ತು. ದಿವಾಳಿತನದ ಅಡಿಯಲ್ಲಿ ಕಂಪನಿಯ ರೆಸಲ್ಯೂಶನ್ ಯೋಜನೆಯನ್ನು ಅನುಮೋದಿಸಿದರೆ ಕಾರ್ಪೊರೇಟ್ ಸಾಲಗಾರ ಮತ್ತು ಅದರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದರಿಂದ ಅದು ವಿನಿಯಾತಿ ನೀಡುತ್ತದೆ. ಇದರರ್ಥ ಇಡಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು ರೆಸಲ್ಯೂಷನ್‌ ಪ್ಲಾನ್‌ನ ಅನುಮೋದನೆ ಆಧರಿಸಿರುತ್ತದೆ.

Also Read
ಅನಿಲ್ ಅಂಬಾನಿ ವಿರುದ್ಧದ ಐಬಿಸಿ ಪ್ರಕ್ರಿಯೆಗೆ ತಡೆ ನೀಡಿದ್ದ ಹೈಕೋರ್ಟ್ ಆದೇಶ ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನಕಾರ

ಐಬಿಸಿಗೆ ಸೆಕ್ಷನ್‌ 32 ಎ ಸೇರಿಸುವ ಮುನ್ನವೇ ಇಡಿ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದರಿಂದ ಭೂಷಣ್‌ ಪವರ್‌ ಪ್ರಕರಣಕ್ಕೆ ಅನ್ವಯಿಸಬಾರದು ಎಂದು ಇ ಡಿ ಈ ಹಿಂದೆ ವಾದಿಸಿತ್ತು.

ಆದರೆ, ಡಿಸೆಂಬರ್ 2ರಂದು  ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಇಡಿ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ಬೇಲಾ ತ್ರಿವೇದಿ  ಮತ್ತು  ಸತೀಶ್ ಚಂದ್ರ ಶರ್ಮಾ ಅವರಿದ್ದ ಸುಪ್ರೀಂ ಕೋರ್ಟ್ ಪೀಠಕ್ಕೆ ಸೆಕ್ಷನ್ 32 ಎ ದೃಷ್ಟಿಯಿಂದ ಇಡಿ ಮೇಲ್ಮನವಿ ಸಲ್ಲಿಸಲಾಗದು ಎಂದು ತಿಳಿಸಿದ್ದರು.  

Kannada Bar & Bench
kannada.barandbench.com