ರಿಪಬ್ಲಿಕ್, ಟೈಮ್ಸ್ ನೌ ವಾಹಿನಿಗಳಿಂದ ಅವಹೇಳನಕಾರಿ ಹೇಳಿಕೆ: ದೆಹಲಿ ಹೈಕೋರ್ಟ್ ಮೊರೆ ಹೋದ ‘ಬಾಲಿವುಡ್’

ಬಾಲಿವುಡ್ ಖ್ಯಾತನಾಮರನ್ನು ಪತ್ರಕರ್ತರು ‘ಮಾಧ್ಯಮ ವಿಚಾರಣೆ’ಗೆ ಒಳಪಡಿಸುತ್ತಿರುವುದು ಮತ್ತು ಅವರ ಖಾಸಗಿ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
Arnab Goswami, Pradeep Bhandari, Navika Kumar, Rahul Shivshankar
Arnab Goswami, Pradeep Bhandari, Navika Kumar, Rahul Shivshankar
Published on

ರಿಪಬ್ಲಿಕ್ ಟಿವಿ ಮತ್ತು ಟೈಮ್ಸ್ ನೌ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬಾಲಿವುಡ್ ಮಾದಕವಸ್ತು ಮಾಫಿಯಾ’ ಕುರಿತ ವರದಿಗಳನ್ನು ಪ್ರಶ್ನಿಸಿ 38 ನಿರ್ಮಾಪಕರು ದೆಹಲಿ ಹೈಕೋರ್ಟಿನ ಮೊರೆ ಹೋಗಿದ್ದು ಬೇಜವಾಬ್ದಾರಿ, ಅವಹೇಳನಕಾರಿ ಹಾಗೂ ಮಾನಹಾನಿಕಾರಕ ಹೇಳಿಕೆಗಳಿಗೆ ತಡೆ ನೀಡುವಂತೆ ಕೋರಿದ್ದಾರೆ.

ಬಾಲಿವುಡ್ ವ್ಯಕ್ತಿಗಳ ‘ಮಾಧ್ಯಮ ವಿಚಾರಣೆ’ ನಡೆಸುತ್ತಿರುವ ಮತ್ತು ಅವರ ಖಾಸಗಿ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡಿದ ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ ಮತ್ತು ಪ್ರದೀಪ್ ಭಂಡಾರಿ ಹಾಗೂ ಟೈಮ್ಸ್ ನೌ ವಾಹಿನಿಯ ರಾಹುಲ್ ಶಿವಶಂಕರ್ ಮತ್ತು ನಾವಿಕಾ ಕುಮಾರ್ ಅವರ ಹೆಸರುಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Also Read
ಅಪರಾಧ ತನಿಖೆಗಳ ಸುದ್ದಿ ಪ್ರಸಾರ ಮಾಡದಂತೆ ಅರ್ನಾಬ್ ಮತ್ತು ರಿಪಬ್ಲಿಕ್ ಟಿವಿಗೆ ನಿರ್ದೇಶಿಸಲು ಕೋರಿ ಪಿಐಎಲ್

ಸುಶಾಂತ್ ಸಿಂಗ್ ರಜಪೂತ್ ಅವರ ಸಾವನ್ನು ಹಿನ್ನೆಲೆಯಾಗಿಟ್ಟುಕೊಂಡು ಚಿತ್ರೋದ್ಯಮದಲ್ಲಿ ಇದೆ ಎನ್ನಲಾದ ಮಾದಕವಸ್ತು ಜಾಲವನ್ನು ವಿವರಿಸಲು ನಿರೂಪಕರು ಬಳಸಿರುವ ಪದಪುಂಜಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಗಿದೆ., “ಕೊಳಕು”, “ಹೊಲಸು”, “ಕಲ್ಮಶ”, “ಮಾದಕ ವ್ಯಸನಿಗಳು” ಎಂಬ ಪದಗಳನ್ನು ಬಳಸಲಾಗಿದೆ. ಅಲ್ಲದೆ “ಬಾಲಿವುಡ್ ಕೊಳೆ ತೊಳೆಯಬೇಕಿದೆ’, ‘ಬಾಲಿವುಡ್ ಹೊಟ್ಟೆಯಲ್ಲಡಗಿದ ಹೊಲಸು ಮತ್ತು ಕಲ್ಮಶವನ್ನು ಅರೇಬಿಯಾದ ಯಾವ ಸುಗಂಧ ದ್ರವ್ಯವೂ ಹೋಗಲಾಡಿಸುವುದಿಲ್ಲ’, ‘ದೇಶದಲ್ಲೇ ಇದು ಅತ್ಯಂತ ಕೆಟ್ಟ ಉದ್ಯಮ’, ‘ಕೊಕೇನ್ ಮತ್ತು ಎಲ್‌ಎಸ್‌ಡಿಯಲ್ಲಿ ಬಾಲಿವುಡ್ ಮುಳುಗಿದೆ’ ಎಂಬರ್ಥದ ಮಾತುಗಳನ್ನು ಆಡಲಾಗಿತ್ತು ಎಂದು ಅರ್ಜಿದಾರರು ಹೇಳಿದ್ದಾರೆ.ರಿಪಬ್ಲಿಕ್

Also Read
ಪ್ರಸಾರಕ್ಕೆ ತಡೆ ವಿಧಿಸಲು ಆಪರೇಟರ್‌ಗಳಿಗೆ ಶಿವಸೇನೆ ಬೆದರಿಕೆ ಆರೋಪ: ರಿಪಬ್ಲಿಕ್ ಅರ್ಜಿ ವಿಚಾರಣೆಗೆ ಹೈಕೋರ್ಟ್ ನಕಾರ

ಸುಶಾಂತ್ ಸಿಂಗ್ ರಜಪೂತ್ ಅವರ ಸಾವನ್ನು ಹಿನ್ನೆಲೆಯಾಗಿಟ್ಟುಕೊಂಡು ಚಿತ್ರೋದ್ಯಮದಲ್ಲಿ ಇದೆ ಎನ್ನಲಾದ ಮಾದಕವಸ್ತು ಜಾಲವನ್ನು ವಿವರಿಸಲು ನಿರೂಪಕರು ಬಳಸಿರುವ ಪದಪುಂಜಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಗಿದೆ., “ಕೊಳಕು”, “ಹೊಲಸು”, “ಕಲ್ಮಶ”, “ಮಾದಕ ವ್ಯಸನಿಗಳು” ಎಂಬ ಪದಗಳನ್ನು ಬಳಸಲಾಗಿದೆ. ಅಲ್ಲದೆ “ಬಾಲಿವುಡ್ ಕೊಳೆ ತೊಳೆಯಬೇಕಿದೆ’, ‘ಬಾಲಿವುಡ್ ಹೊಟ್ಟೆಯಲ್ಲಡಗಿದ ಹೊಲಸು ಮತ್ತು ಕಲ್ಮಶವನ್ನು ಅರೇಬಿಯಾದ ಯಾವ ಸುಗಂಧ ದ್ರವ್ಯವೂ ಹೋಗಲಾಡಿಸುವುದಿಲ್ಲ’, ‘ದೇಶದಲ್ಲೇ ಇದು ಅತ್ಯಂತ ಕೆಟ್ಟ ಉದ್ಯಮ’, ‘ಕೊಕೇನ್ ಮತ್ತು ಎಲ್‌ಎಸ್‌ಡಿಯಲ್ಲಿ ಬಾಲಿವುಡ್ ಮುಳುಗಿದೆ’ ಎಂಬರ್ಥದ ಮಾತುಗಳನ್ನು ಆಡಲಾಗಿತ್ತು ಎಂದು ಅರ್ಜಿದಾರರು ಹೇಳಿದ್ದಾರೆ.

ಪತ್ರಕರ್ತರ ವಿರುದ್ಧ ನ್ಯಾಯಾಲಯಗಳು ಹಿಂದೆಯೂ ದಂಡ, ವಾಗ್ದಂಡನೆ ವಿಧಿಸಿವೆ. ಅಲ್ಲದೆ ತಪ್ಪು ಸುದ್ದಿಗಳನ್ನು ಪ್ರಕಟಿಸಿದ್ದಕ್ಕಾಗಿ ಅವರು ತಪ್ಪಿತಸ್ಥರು ಎಂದು ಸಾಬೀತಾಗಿದೆ ಎಂಬುದಾಗಿ ತಿಳಿಸಲಾಗಿದೆ. ಇದಲ್ಲದೆ, 1995ರ ಕೇಬಲ್ ಟೆಲಿವಿಷನ್ ನೆಟ್ವರ್ಕ್ (ನಿಯಂತ್ರಣ) ಕಾಯ್ದೆ, 1994ರ ಕೇಬಲ್ ಟೆಲಿವಿಷನ್ ನೆಟ್ವರ್ಕ್ ನಿಯಮಾವಳಿಗಳನ್ನು ವಾಹಿನಿಗಳು ‘ಬಹಿರಂಗವಾಗಿಯೇ ಉಲ್ಲಂಘಿಸಿವೆ’ ಎಂದು ಆರೋಪಿಸಲಾಗಿದೆ.

Kannada Bar & Bench
kannada.barandbench.com