ಪಾಟ್ನಾ ಸಿವಿಲ್ ನ್ಯಾಯಾಲಯದಲ್ಲಿ ಪುರಾವೆಗಾಗಿ ತಂದಿದ್ದ ಬಾಂಬ್ ಸ್ಫೋಟ: ಪೊಲೀಸ್ ಅಧಿಕಾರಿಗೆ ಗಾಯ

ಸಬ್ ಇನ್ಸ್ಪೆಕ್ಟರ್ ಒಬ್ಬರು ಸ್ಫೋಟಕಗಳನ್ನು ಪೆಟ್ಟಿಗೆಯಲ್ಲಿಟ್ಟು ತಂದು ಸಹಾಯಕ ಪ್ರಾಸಿಕ್ಯೂಷನ್ ಅಧಿಕಾರಿಯ ಮೇಜಿನ ಮೇಲಿಟ್ಟಿದ್ದರು. ಆ ವೇಳೆ ಘಟನೆ ಸಂಭವಿಸಿದೆ.
Patna Civil Court
Patna Civil Courtdistricts.ecourts.gov.in

ಪುರಾವೆಗಾಗಿ ಪಾಟ್ನಾ ನ್ಯಾಯಾಲಯವೊಂದಕ್ಕೆ ತಂದಿದ್ದ ಬಾಂಬ್‌ ಸ್ಫೋಟಗೊಂಡ ಪರಿಣಾಮ ಪೊಲೀಸ್‌ ಅಧಿಕಾರಿಯೊಬ್ಬರು ಗಾಯಗೊಂಡಿರುವ ಘಟನೆ ಮಾಧ್ಯಮಗಳಲ್ಲಿ ವರದಿಯಾಗಿದೆ.

ಪ್ರಕರಣವೊಂದರ ವಿಚಾರಣೆ ವೇಳೆ ಪುರಾವೆಗಾಗಿ ಸಬ್‌ ಇನ್‌ಸ್ಪೆಕ್ಟರ್‌ ಒಬ್ಬರು ಕಡಿಮೆ ತೀವ್ರತೆಯ ಸ್ಫೋಟಕಗಳನ್ನು ಪೆಟ್ಟಿಗೆಯಲ್ಲಿರಿಸಿ ತಂದು ಸಹಾಯಕ ಪ್ರಾಸಿಕ್ಯೂಷನ್‌ ಅಧಿಕಾರಿಯ ಮೇಜಿನ ಮೇಲಿಟ್ಟಿದ್ದರು. ಆ ವೇಳೆ ಬಾಂಬ್‌ ಸ್ಫೋಟಿಸಿದ್ದು ಅದನ್ನು ತಂದಿರಿಸಿದ್ದ ಪೊಲೀಸ್‌ ಅಧಿಕಾರಿಯ ಕೈಗೆ ಗಾಯವಾಗಿದ್ದು ಅವರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

Also Read
ಲೂಧಿಯಾನ ನ್ಯಾಯಾಲಯದಲ್ಲಿ ಸ್ಫೋಟ: ಇಬ್ಬರ ಸಾವು

ಈ ವೇಳೆ, ಅದೇ ಕೋಣೆಯಲ್ಲಿ ಮತ್ತೊಂದು ಪೆಟ್ಟಿಗೆಯಲ್ಲಿರಿಸಲಾಗಿದ್ದ ಬಾಂಬ್ ಮತ್ತಷ್ಟು ಆತಂಕಕ್ಕೆ ಕಾರಣವಾಯಿತು. ಅದನ್ನು ನಿಷ್ಕ್ರಿಯಗೊಳಿಸಲು ತಮಗೆ ಸಾಧ್ಯವಿಲ್ಲ, ಅದಕ್ಕೆ ಭಯೋತ್ಪಾದನಾ ನಿಗ್ರಹ ದಳವೇ ಬರಬೇಕು ಎಂದು ಸ್ಫೋಟಕ ನಿಗ್ರಹ ದಳ ತಿಳಿಸಿದ್ದರಿಂದ ಎರಡು ಗಂಟೆಗಳ ಕಾಲ ಆ ಬಾಂಬ್‌ ಕೋಣೆಯಲ್ಲೇ ಉಳಿಯುವಂತಾಗಿ ಬಿಗುವಿನ ವಾತಾವರಣ ಸೃಷ್ಟಿಸಿತ್ತು.

ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಬಾಂಬ್‌ಗಳನ್ನು ಸೂಕ್ತ ರೀತಿಯಲ್ಲಿ ನಿಷ್ಕ್ರಿಯಗೊಳಿಸಲಾಗಿದೆಯೇ, ಇಲ್ಲವೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Stories

No stories found.
Kannada Bar & Bench
kannada.barandbench.com