![ಹೈಕೋರ್ಟ್ ನ್ಯಾಯಮೂರ್ತಿಗಳ ಹುದ್ದೆ ಭರ್ತಿ: ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಬಾಂಬೆ ಹೈಕೋರ್ಟ್ ಸಿಜೆ ದತ್ತ [ಚುಟುಕು]](http://media.assettype.com/barandbench-kannada%2F2022-06%2Fe11b8352-a758-457a-b0cf-cdfc2b9b5f45%2F0a261108-b732-4c7a-8ec9-ab4befd204b2.jpg?w=480&auto=format%2Ccompress&fit=max)
ಹೈಕೋರ್ಟ್‌ನಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆ ಭರ್ತಿ ಮಾಡಲು ಶಾಶ್ವತ ಕಾರ್ಯವಿಧಾನ ಜಾರಿಗೆ ತರುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಿಂದ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆ) ದೀಪಂಕರ್ ದತ್ತ ಸೋಮವಾರ ಹಿಂದೆ ಸರಿದಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳು ಹೈಕೋರ್ಟ್‌ನ ಆಡಳಿತಾತ್ಮಕ ಮುಖ್ಯಸ್ಥರು ಮಾತ್ರವಲ್ಲ, ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಗೆ ಶಿಫಾರಸು ಮಾಡುವ ನ್ಯಾಯಮೂರ್ತಿಗಳ ಮಂಡಳಿಯಾದ ಕೊಲಿಜಿಯಂನ ಮುಖ್ಯಸ್ಥರೂ ಆಗಿರುತ್ತಾರೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿಯಲಾಗಿದೆ.
ಬಾಂಬೆ ವಕೀಲರ ಸಂಘವು ವಕೀಲ ಏಕನಾಥ್ ಧೋಕಲೆ ಅವರ ಮೂಲಕ ಮಾರ್ಚ್ 2022ರಲ್ಲಿ ಸಲ್ಲಿಸಿದ ಮನವಿ ಇದಾಗಿದೆ.
ಹೆಚ್ಚಿನ ಮಾಹಿತಿಗೆ ಬಾರ್ ಅಂಡ್ ಬೆಂಚ್ ಇಂಗ್ಲಿಷ್ ಜಾಲತಾಣದ ʼಲಿಂಕ್ʼ ಗಮನಿಸಿ.