[ಚುಟುಕು] ಗಂಗೂಲಿ ವ್ಯಾಜ್ಯ: ನ್ಯಾಯಾಲಯದ ಆದೇಶ ಪಾಲಿಸದ ಎರಡು ಕಂಪನಿಗಳಿಗೆ ಶೋಕಾಸ್ ನೋಟಿಸ್ ನೀಡಿದ ಬಾಂಬೆ ಹೈಕೋರ್ಟ್

Sourav Ganguly and Bombay High Court

Sourav Ganguly and Bombay High Court

Published on

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರೊಂದಿಗೆ ಮಧ್ಯಸ್ಥಿಕೆ ವ್ಯಾಜ್ಯ ಹೊಂದಿರುವ ಎರಡು ಮ್ಯಾನೇಜ್‌ಮೆಂಟ್ ಕಂಪನಿಗಳಿಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಶೋಕಾಸ್‌ ನೋಟಿಸ್ ಜಾರಿ ಮಾಡಿದ್ದು, ಅವುಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಏಕೆ ತೆಗೆದುಕೊಳ್ಳಬಾರದು ಎಂದು ಕೇಳಿದೆ. ಮ್ಯಾನೇಜ್‌ಮೆಂಟ್‌ ಕಂಪೆನಿಗಳಾದ ಪರ್ಸೆಪ್ಟ್‌ ಟ್ಯಾಲೆಂಟ್‌ ಮ್ಯಾನೇಜ್‌ಮೆಂಟ್‌ ಲಿಮಿಟೆಡ್‌ ಮತ್ತು ಪರ್ಸೆಪ್ಟ್‌ ಡಿ ಮಾರ್ಕ್‌ (ಇಂಡಿಯಾ) ಲಿಮಿಟೆಡ್‌ಗಳು ₹ 35 ಕೋಟಿ ಮೊತ್ತವನ್ನು ಸೌರವ್‌ ಗಂಗೂಲಿ ಅವರಿಗೆ ಪಾವತಿಸುವಂತೆ ಮಧ್ಯಸ್ಥಿಕೆ ನ್ಯಾಯಮಂಡಳಿಯೊಂದು ನೀಡಿದ್ದ ತೀರ್ಪನ್ನು ಜಾರಿಗೆ ತರದೇ ಇರುವುದರಿಂದ ಈ ನೋಟಿಸ್‌ ನೀಡಲಾಗಿದೆ.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com