ಮುಂಬೈ ವಿಮಾನ ನಿಲ್ದಾಣದ ಸುತ್ತಲಿನ 48 ಕಟ್ಟಡಗಳ ಅನಧಿಕೃತ ಅಂತಸ್ತು, ನಿರ್ಮಿತಿಗಳ ಕೆಡವಲು ಬಾಂಬೆ ಹೈಕೋರ್ಟ್‌ ಆದೇಶ

ನಿಯಮಗಳನ್ನು ಉಲ್ಲಂಘಿಸಿರುವ ಬಹುತೇಕ ಕಟ್ಟಡಗಳು ವಿಲೆ ಪಾರ್ಲೆ ಪೂರ್ವದ ವ್ಯಾಪ್ತಿಗೆ ಒಳಪಟ್ಟಿವೆ. ಮುಂಬೈ ವಿಮಾನ ನಿಲ್ದಾಣವು ಸಾಂತಾ ಕ್ರೂಜ್, ಅಂಧೇರಿ ಮತ್ತು ವಿಲೇ ಪಾರ್ಲೆ ಪೂರ್ವಕ್ಕೆ ವ್ಯಾಪಿಸಿಕೊಂಡಿದೆ.
Mumbai airport
Mumbai airport

ವೈಮಾನಿಕ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲಿನ 48 ಕಟ್ಟಡಗಳು ಹೊಂದಿರುವ ಅನಧಿಕೃತ ಅಂತಸ್ತು/ ನಿರ್ಮಿತಿಗಳನ್ನು ತೆರವುಗೊಳಿಸುವಂತೆ ಬಾಂಬೆ ಹೈಕೋರ್ಟ್‌ ಶುಕ್ರವಾರ ಆದೇಶಿಸಿದೆ. ಈ ಸಂಬಂಧ ಮುಂಬೈನ ಉಪನಗರ ಜಿಲ್ಲಾಧಿಕಾರಿ ಅವರು ಕ್ರಮಕ್ಕೆ ಕೈಗೊಳ್ಳುವಂತೆ ಅದು ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ದೀಪಾಂಕರ್ ದತ್ತ ಮತ್ತು ನ್ಯಾ. ಎಂ ಎಸ್‌ ಕಾರ್ನಿಕ್‌ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಅನಧಿಕೃತ ನಿರ್ಮಿತಿಗಳ ಕುರಿತಾಗಿ ಜಿಲ್ಲಾಧಿಕಾರಿಯವರು ಯಾವುದೇ ಕ್ರಮಕ್ಕೆ ಮುಂದಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ತರಾಟೆಗೆ ತೆಗೆದುಕೊಂಡಿತು. ಅಲ್ಲದೆ, ಆಗಸ್ಟ್‌ 22ರ ಒಳಗೆ ಎತ್ತರದ ನಿರ್ಬಂಧಗಳ ಕುರಿತಾದ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಕಟ್ಟಡಗಳನ್ನು ಕೆಡವಲು ಕೈಗೊಂಡಿರುವ ಕ್ರಮಗಳ ಕುರಿತು ಅಫಿಡವಿಟ್‌ ಸಲ್ಲಿಸಲು ಸೂಚಿಸಿದೆ.

ನಿಯಮಗಳನ್ನು ಉಲ್ಲಂಘಿಸಿರುವ ಬಹುತೇಕ ಕಟ್ಟಡಗಳು ವಿಲೆ ಪಾರ್ಲೆ ಪೂರ್ವದ ವ್ಯಾಪ್ತಿಗೆ ಒಳಪಟ್ಟಿವೆ. ಮುಂಬೈ ವಿಮಾನ ನಿಲ್ದಾಣವು ಸಾಂತಾ ಕ್ರೂಜ್, ಅಂಧೇರಿ ಮತ್ತು ವಿಲೇ ಪಾರ್ಲೆ ಉತ್ತರದಲ್ಲಿ ವ್ಯಾಪಿಸಿಕೊಂಡಿದೆ.

"48 ತಡೆಗಳಿಗೆ (ಕಟ್ಟಡ ನಿರ್ಮಾಣಗಳು) ಸಂಬಂಧಿಸಿದಂತೆ ಡಿಜಿಸಿಎಯು ಹೊರಡಿಸಿರುವ ಅಂತಿಮ ಆದೇಶವನ್ನು ಅನುಷ್ಠಾನಗೊಳಿಸುವಂತೆ ನಾವು ಮುಂಬೈ ಉಪನಗರದ ಜಿಲ್ಲಾಧಿಕಾರಿಯವರಿಗೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶಿಸುತ್ತೇವೆ. ಈ ಆದೇಶದ ಅನುಷ್ಠಾನಕ್ಕೆ ತೆಗೆದುಕೊಳ್ಳಲಾಗಿರುವ ಕ್ರಮಗಳ ಕುರಿತಾದ ಅಫಿಡವಿಟ್‌ ಅನ್ನು ಮುಂದಿನ ವಿಚಾರಣಾ ದಿನಾಂಕದೊಳಗೆ ಸಲ್ಲಿಸಬೇಕು," ಎಂದು ನ್ಯಾಯಾಲಯವು ಹೇಳಿದೆ.

ಇದೇ ವೇಳೆ, ಜಿಲ್ಲಾಧಿಕಾರಿಯು ತನ್ನ ಜವಾಬ್ದಾರಿಯನ್ನು ಬೃಹನ್ಮುಂಬೈ ಮಹಾನಗರ ಪಾಲಿಕೆಗೆ ವರ್ಗಾಯಿಸಲು ಪ್ರಯತ್ನಿಸಿ ಅಫಿಡವಿಟ್‌ ಸಲ್ಲಿಸಿದ್ದ ಬಗ್ಗೆ ನ್ಯಾಯಾಲಯವು ತನ್ನ ಅಸಮಾಧಾನವನ್ನು ಹೊರಹಾಕಿತು.

Related Stories

No stories found.
Kannada Bar & Bench
kannada.barandbench.com