![ಲೈಂಗಿಕ ದೌರ್ಜನ್ಯ ಪ್ರಕರಣ: ʼತೆಹೆಲ್ಕಾʼ ತೇಜ್‌ಪಾಲ್ ಆಕ್ಷೇಪಣೆ ತಿರಸ್ಕರಿಸಿದ ಬಾಂಬೆ ಹೈಕೋರ್ಟ್ [ಚುಟುಕು]](https://gumlet.assettype.com/barandbench-kannada%2F2022-04%2F662937f3-0fec-4675-9756-c0daf1c708bb%2FScreenshot_2022_04_23_185342.png?auto=format%2Ccompress&fit=max)
ತಮ್ಮ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಗೋವಾ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ತೆಹಲ್ಕಾ ನಿಯತಕಾಲಿಕದ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ಎತ್ತಿದ್ದ ಆಕ್ಷೇಪಗಳನ್ನು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ತಿರಸ್ಕರಿಸಿದೆ.
ತೇಜ್‌ಪಾಲ್ ಅವರನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. “ಮೇಲ್ನೋಟಕ್ಕೆ ಪ್ರಕರಣವು ಅರ್ಹವಾಗಿದ್ದು ವಾದಯೋಗ್ಯ ಸಂಗತಿಗಳು ರೂಪುಗೊಂಡಿವೆ” ಎಂದು ನ್ಯಾಯಮೂರ್ತಿಗಳಾದ ಎಂ ಎಸ್ ಸೋನಕ್ ಮತ್ತು ಆರ್ ಎನ್ ಲಡ್ಡಾ ಅವರಿದ್ದ ಪೀಠ ತಿಳಿಸಿತು.
ಇದೇ ವೇಳೆ ನ್ಯಾಯಾಲಯವು, ವಿಚಾರಣಾ ನ್ಯಾಯಾಲಯವು ತನ್ನ ಆದೇಶವನ್ನು ಆಳವಾದ ಪರಿಶೀಲನೆಗೆ ಒಡ್ಡಬೇಕಿದೆ. ಇದು ಬಹುಶಃ ವಿಚಾರಣಾ ನ್ಯಾಯಾಲಯವು ಮಾಡಿರುವ ಅವಲೋಕನಗಳನ್ನೂ ಸಹ ಮರುಪರಿಶೀಲನೆಗೆ ಒಡ್ಡಬೇಕಾದ ಅಗತ್ಯ ಉಂಟುಮಾಡಬಹುದು ಎಂದು ಹೇಳಿತು.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.