ರಾಜ್ಯದ ಎಲ್ಲಾ ಅಂಗಡಿ ಮತ್ತು ಸಂಸ್ಥೆಗಳ ಫಲಕಗಳಲ್ಲಿ ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ. ಮಹಾರಾಷ್ಟ್ರ ಅಂಗಡಿ ಮತ್ತು ಸಂಸ್ಥೆಗಳ (ಉದ್ಯೋಗದ ನಿಯಂತ್ರಣ ಮತ್ತು ಸೇವಾ ಷರತ್ತು) ನಿಯಮ 35ಕ್ಕೆ ತಿದ್ದುಪಡಿ ತಂದು ಮರಾಠಿ ನಾಮಫಲಕ ಕಡ್ಡಾಯಗೊಳಿಸಿದ್ದನ್ನು ಚಿಲ್ಲರೆ ವ್ಯಾಪಾರಿಗಳ ಕಲ್ಯಾಣ ಸಂಘ ವಿರೋಧಿಸಿತ್ತು. "ನಾಮಫಲಕಗಳಲ್ಲೇನೂ ಬೇರೆ ಭಾಷೆಗಳನ್ನು ನಿಷೇಧಿಸಿಲ್ಲ. ಮರಾಠಿಯಲ್ಲಿ ಕೂಡ ನಾಮಫಲಕ ಇರಬೇಕು ಎಂದಷ್ಟೇ ನಿಯಮ ಹೇಳುತ್ತದೆ" ಎಂದು ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ಮಾಧವ್ ಜಾಮದಾರ್ ಅವರಿದ್ದ ಪೀಠ ತಿಳಿಸಿತು.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.