ಪತ್ರಕರ್ತನ ಫೋನ್ ಕಸಿದ ಪ್ರಕರಣ: ಸಲ್ಮಾನ್ ಖಾನ್‌ಗೆ ಸಮನ್ಸ್ ನೀಡಿದ್ದ ಆದೇಶಕ್ಕೆ ಬಾಂಬೆ ಹೈಕೋರ್ಟ್ ತಡೆ

ನೀವು ಪತ್ರಕರ್ತರಾಗಿದ್ದು, ನಿಮ್ಮ ಮೇಲೆ ಹಲ್ಲೆ ನಡೆದಿದ್ದರೆ ಹಲ್ಲೆ ನಡೆಸಿದವರ ಹೆಸರು ಉಲ್ಲೇಖಿಸದೆ ಇರುತ್ತಿರಲಿಲ್ಲ ಎಂದ ನ್ಯಾಯಾಲಯ
ಪತ್ರಕರ್ತನ ಫೋನ್ ಕಸಿದ ಪ್ರಕರಣ: ಸಲ್ಮಾನ್ ಖಾನ್‌ಗೆ ಸಮನ್ಸ್ ನೀಡಿದ್ದ ಆದೇಶಕ್ಕೆ ಬಾಂಬೆ ಹೈಕೋರ್ಟ್ ತಡೆ
Salman Khan Facebook

2019 ರಲ್ಲಿ ಪತ್ರಕರ್ತರೊಬ್ಬರು ಸಲ್ಲಿಸಿದ ಕ್ರಿಮಿನಲ್ ಬೆದರಿಕೆ ದೂರಿನ ಮೇರೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ಅಂಗರಕ್ಷಕ ನವಾಜ್ ಶೇಖ್ ಅವರಿಗೆ ಸಮನ್ಸ್ ನೀಡಿದ್ದ ಅಂಧೇರಿ ನ್ಯಾಯಾಲಯದ ಆದೇಶಕ್ಕೆ ಬಾಂಬೆ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ.

ಘಟನೆಯ ದಿನ ತೀವ್ರ ವಾಗ್ವಾದದ ನಂತರ ಖಾನ್ ಅವರು ಬೆದರಿಕೆ ಹಾಕಿ ಫೋನ್‌ ಕಸಿದುಕೊಂಡರು ಎಂದು ಪತ್ರಕರ್ತರು ದೂರು ದಾಖಲಿಸಿದ್ದರು. ಆದರೆ, ಘಟನೆ ನಡೆದ ದೂರಿನಲ್ಲಿ ಸಲ್ಮಾನ್‌ ಖಾನ್‌ ಹೆಸರನ್ನು ದಾಖಲಿಸಿರಲಿಲ್ಲ, ನಂತರ ಜೂನ್‌ನಲ್ಲಿ ನೀಡಿದ ದೂರಿನಲ್ಲಿ ಸಲ್ಮಾನ್ ಹೆಸರನ್ನು ದಾಖಲಿಸಲಾಗಿತ್ತು.

ಘಟನೆ ನಡೆದ ದಿನದಂದು ಪತ್ರಕರ್ತ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದರು, ಹಾಗಾಗಿ ನಟನ ಹೆಸರನ್ನು ದಾಖಲಿಸಿರಲಿಲ್ಲ ಎನ್ನುವ ಪತ್ರಕರ್ತನ ಪರ ವಕೀಲರ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ. ನೀವು ಪತ್ರಕರ್ತರಾಗಿದ್ದು, ನಿಮ್ಮ ಮೇಲೆ ಹಲ್ಲೆ ನಡೆದಿದ್ದರೆ ಹಲ್ಲೆ ನಡೆಸಿದವರ ಹೆಸರು ಉಲ್ಲೇಖಿಸದೆ ಇರುತ್ತಿರಲಿಲ್ಲ ಎಂದ ನ್ಯಾಯಾಲಯವು ಕೆಳ ನ್ಯಾಯಾಲಯದ ಸಮನ್ಸ್‌ಗೆ ತಡೆ ನೀಡಿತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.