ಜೀತದಾಳುಗಳು ಬಂಧಿತರಲ್ಲ, ಅವರದು ಹಣ ಮಾಡುವ ದಂಧೆ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹೇಮಂತ್ ಗುಪ್ತಾ

"ಅವರು ಹಿಂದುಳಿದ ಪ್ರದೇಶಗಳಿಂದ ಬಂದವರು, ದುಡ್ಡು ನುಂಗಿ ನಂತರ ಕೆಲಸದಿಂದ ಬಿಟ್ಟುಹೋಗುತ್ತಾರೆ. ಇದು ದಂಧೆ" ಎಂದು ನ್ಯಾಯಾಲಯ ಹೇಳಿತು.
Justice Hemant Gupta and Supreme Court
Justice Hemant Gupta and Supreme Court
Published on

ದೇಶದಲ್ಲಿ ಜೀತದಾಳುಗಳ ಹೆಸರಿನಲ್ಲಿ ದಂಧೆ ನಡೆಯುತ್ತಿದ್ದು ಅಂತಹ ಜನ ತಾವು ಜೀತದಾಳುಗಳು ಎಂಬುದರ ಲಾಭ ಪಡೆದು ಹಣ ಕಸಿಯುತ್ತಾರೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.

ಜೀತದಾಳುಗಳು ವಾಸ್ತವವಾಗಿ ಬಂಧಿತರಲ್ಲ. ಅವರು ತಮ್ಮ ಕೆಲಸಕ್ಕೆ ಮುಂಗಡವಾಗಿ ಹಣ ಪಡೆದು ನಂತರ ಬಿಟ್ಟುಹೋಗುತ್ತಾರೆ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹೇಮಂತ್‌ ಗುಪ್ತಾ ತಿಳಿಸಿದರು.

“ಜೀತದಾಳುಗಳು ಯಾರೆಂದು ನಿಮಗೆ ಗೊತ್ತೆ. ಅವರು ಬಂಧಿತರಲ್ಲ. ಅವರು ಮುಂಚಿತವಾಗಿಯೇ ಹಣ ಪಡೆದು ಅಲ್ಲಿಗೆ ಬಂದು ಇಟ್ಟಿಗೆ ಭಟ್ಟಿಗಳಲ್ಲಿ ಕೆಲಸ ಮಾಡುತ್ತಾರೆ. ಅವರು ಹಿಂದುಳಿದ ಪ್ರದೇಶಗಳಿಂದ ಬಂದವರು, ದುಡ್ಡು ನುಂಗಿ (ಹಣವನ್ನು ಪಡೆದು ಬಳಸಿಕೊಂಡ ನಂತರ) ಕೆಲಸ ಬಿಡುತ್ತಾರೆ. ಇದು ದಂಧೆ. ಈ ಜನ ತಾವು ಜೀತದಾಳುಗಳು ಎಂಬ ಹೆಸರಿನಲ್ಲಿ ಜೀತಮುಕ್ತಿಯ ಲಾಭವನ್ನು ಪಡೆಯುತ್ತಾರೆ” ಎಂದು ಅವರು ಹೇಳಿದರು.

ಜೀತದಾಳುಗಳು ಯಾರೆಂದು ನಿಮಗೆ ಗೊತ್ತೆ. ಅವರು ಬಂಧಿತರಲ್ಲ. ಅವರು ದುಡ್ಡು ನುಂಗಿ ಕೆಲಸ ಬಿಡುತ್ತಾರೆ. ಇದು ಜೀತದ ಹೆಸರಲ್ಲಿ ನಡೆಯುವ ದಂಧೆ.
- ನ್ಯಾಯಮೂರ್ತಿ ಹೇಮಂತ್ ಗುಪ್ತಾ

ಜಮ್ಮು ಮತ್ತು ಕಾಶ್ಮೀರದ ಜೀತದಾಳುಗಳನ್ನು ರಕ್ಷಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಈ ಅವಲೋಕನ ಮಾಡಿದರು. ಜೀತದಾಳುಗಳಲ್ಲಿ ಅನೇಕರು ಲೈಂಗಿಕ ಕಿರುಕುಳಕ್ಕೆ ಬಲಿಯಾಗಿದ್ದು, 10 ವರ್ಷಗಳು ಕಳೆದರೂ ಅವರಿಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ಅರ್ಜಿದಾರರ ಪರ ವಕೀಲರು ಹೇಳಿದರು.

ಅಂತಿಮವಾಗಿ ನ್ಯಾಯಾಲಯವು, ಹಲವುಅಂಶಗಳನ್ನು ಉಲ್ಲೇಖಿಸಿ ಸರ್ಕಾರ ವಿವರವಾದ ಪ್ರತಿಕ್ರಿಯೆ ಸಲ್ಲಿಸಿದೆ. "ಅಗತ್ಯವಿದ್ದರೆ ಕಾನೂನಿನ ಪ್ರಕಾರ ಸರ್ಕಾರ ಪರಿಹಾರ ಕ್ರಮ ತೆಗೆದುಕೊಳ್ಳಬೇಕು" ಎಂದು ಹೇಳಿತು.

Kannada Bar & Bench
kannada.barandbench.com