ಏಷ್ಯನ್ ಗೇಮ್ಸ್‌ಗೆ ಬಜರಂಗ್, ವಿನೇಶಾ ನೇರ ಪ್ರವೇಶ ಪ್ರಶ್ನಿಸಿ ಅರ್ಜಿ: ಡಬ್ಲ್ಯೂಎಫ್ಐಗೆ ದೆಹಲಿ ಹೈಕೋರ್ಟ್ ನೋಟಿಸ್‌

ಇಂದೇ ಪ್ರತಿಕ್ರಿಯೆ ಸಲ್ಲಿಸುವಂತೆ ಭಾರತ ಕುಸ್ತಿ ಒಕ್ಕೂಟಕ್ಕೆ ನ್ಯಾಯಾಲಯ ಸೂಚಿಸಿದ್ದು, ನಾಳೆ (21 ಜುಲೈ) ವಿಚಾರಣೆ ನಡೆಸಲಿದೆ.
Vinesh phogat and Bajrang punia
Vinesh phogat and Bajrang punia

ಪ್ರಸಕ್ತ ಸಾಲಿನ ಏಷ್ಯನ್‌ ಗೇಮ್ಸ್‌ನಲ್ಲಿ ಸ್ಪರ್ಧಿಸಲು ಕುಸ್ತಿಪಟುಗಳಾದ ಬಜರಂಗ್ ಪುನಿಯಾ ಮತ್ತು ವಿನೇಶಾ ಫೋಗಟ್ ಅವರಿಗೆ ನೇರ ಪ್ರವೇಶಾವಕಾಶ ಕಲ್ಪಿಸಿರುವುದನ್ನು ಪ್ರಶ್ನಿಸಿ ಕುಸ್ತಿಪಟುಗಳಾದ ಅಂತಿಮ್‌ ಪಂಘಲ್‌ ಮತ್ತು ಸುಜೀತ್‌ ಕಲ್ಕಲ್‌ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಅರ್ಜಿ ಸಂಬಂಧ ಭಾರತೀಯ ಕುಸ್ತಿ ಒಕ್ಕೂಟಕ್ಕೆ (ಡಬ್ಲ್ಯುಎಫ್‌ಐ) ನೋಟಿಸ್‌ ನೀಡಿರುವ ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಅವರು ಇಂದೇ ನೋಟಿಸ್‌ಗೆ ಪ್ರತಿಕ್ರಿಯಿಸುವಂತೆ ಸೂಚಿಸಿದ್ದು ನಾಳೆ ಪ್ರಕರಣದ ವಿಚಾರಣೆ ನಡೆಯಲಿದೆ.

ಏಷ್ಯನ್‌ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಭಾಗವಹಿಸುವುದರಿಂದ ಪೂನಿಯಾ ಮತ್ತು ಫೋಗಟ್‌ಗೆ ವಿನಾಯಿತಿ ನೀಡಿರುವುದನ್ನು ಪಂಘಲ್‌ ಮತ್ತು ಕಲ್ಕಲ್ ಪ್ರಶ್ನಿಸಿದ್ದಾರೆ.

ಪ್ರಸಕ್ತ ಸಾಲಿನ ಏಷ್ಯನ್‌ ಗೇಮ್ಸ್‌ ಚೀನಾದ ಹ್ಯಾಂಗ್‌ಝೌನಲ್ಲಿ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 8ರ ನಡುವೆ ನಡೆಯಲಿದೆ. 2022ರ ಸೆಪ್ಟೆಂಬರ್‌ 10ರಿಂದ 25ರವರೆಗೆ ನಡೆಯಬೇಕಿದ್ದ ಕ್ರೀಡಾಕೂಟವನ್ನು ಕೋವಿಡ್‌ ಕಾರಣದಿಂದ ಮುಂದೂಡಲಾಗಿತ್ತು.

Related Stories

No stories found.
Kannada Bar & Bench
kannada.barandbench.com