ನೀಟ್‌ ಪಿಜಿ 2022 ಪರೀಕ್ಷೆಯನ್ನು 6 ರಿಂದ 8 ವಾರಗಳ ಕಾಲ ಮುಂದೂಡಿದ ಕೇಂದ್ರ ಸರ್ಕಾರ

ನೀಟ್‌ ಪಿಜಿ 2021 ಪರೀಕ್ಷೆಯ ಕೌನ್ಸೆಲಿಂಗ್ ದಿನಗಳೊಂದಿಗೆ ನೀಟ್‌ ಪಿಜಿ 2022ರ ಪರೀಕ್ಷಾ ದಿನವು ತಳಕು ಹಾಕಿಕೊಂಡಿದ್ದ ಪರಿಣಾಮ ಅನೇಕ ಅಭ್ಯರ್ಥಿಗಳು ಸಮಸ್ಯೆ ಎದುರಿಸುತ್ತಿದ್ದು ಪರೀಕ್ಷೆಯನ್ನು ಮುಂದೂಡಲು ಮನವಿ ಸಲ್ಲಿಸಿದ್ದರು.
Supreme Court, NEET PG 2022

Supreme Court, NEET PG 2022

ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವ ನೀಟ್‌ ಪಿಜಿ 2022 ಪರೀಕ್ಷೆಯನ್ನು (ಸ್ನಾತಕೋತ್ತರ ಪದವಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ - 2022) ಆರರಿಂದ ಎಂಟು ವಾರಗಳ ಕಾಲ ಮುಂದೂಡಲು ಕೇಂದ್ರ ಸರ್ಕಾರವು ನಿರ್ಧರಿಸಿದೆ.

ನೀಟ್‌ ಪಿಜಿ 2021 ಪರೀಕ್ಷೆಯ ಕೌನ್ಸೆಲಿಂಗ್ ದಿನಗಳೊಂದಿಗೆ ನೀಟ್‌ ಪಿಜಿ 2022ರ ಪರೀಕ್ಷಾ ದಿನವು ತಳಕು ಹಾಕಿಕೊಂಡಿದ್ದ ಪರಿಣಾಮ ಅನೇಕ ಅಭ್ಯರ್ಥಿಗಳು ಸಮಸ್ಯೆ ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡುವಂತೆ ಅನೇಕರು ಮನವಿ ಸಲ್ಲಿಸಿದ್ದರು.

ಅಲ್ಲದೆ, ನೀಟ್‌ ಪಿಜಿ ಪರೀಕ್ಷೆ ತೆಗೆದುಕೊಳ್ಳಲು ಕಡ್ಡಾಯವಾದ ಇಂಟರ್ನ್‌ಶಿಪ್‌ ತರಬೇತಿಯ ಅವಧಿಯು ವಿಳಂಬವಾಗಿರುವುದರಿಂದಲೂ ಸಹ ಅನೇಕ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ರಾಷ್ಟ್ರೀಯ ಪರೀಕ್ಷಾ ಮಂಡಳಿಯು (ಎನ್‌ಬಿಇ) ಮೇಲಿನ ಕಾರಣಗಳ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು 6ರಿಂದ 8 ವಾರಗಳ ಕಾಲ ಮುಂದೂಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದೆ.

ಆಸಕ್ತಿಕರ ಸಂಗತಿಯೆಂದರೆ, ನೀಟ್‌ ಪಿಜಿ ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ದಾಖಲಾಗಿದ್ದು ಅದರ ವಿಚಾರಣೆ ಕೂಡ ಇಂದು ಬರುವುದಿದೆ. ಅರ್ಜಿದಾರರು ಸಹ ಪರೀಕ್ಷೆಯ ಮುಂದೂಡಿಕೆ ನಿರ್ದೇಶಿಸುವಂತೆ ಕೋರಿ ಮೇಲಿನ ಕಾರಣಗಳನ್ನೇ ನೀಡಿದ್ದಾರೆ.

Related Stories

No stories found.
Kannada Bar & Bench
kannada.barandbench.com