ಸಿಎಲ್ಎಟಿ 2026 ಫಲಿತಾಂಶ ಪ್ರಕಟ

ಸಾಮಾನ್ಯ ಕಾನೂನು ಪ್ರವೇಶಾತಿ ಪರೀಕ್ಷೆಯು ಡಿಸೆಂಬರ್ 7ರಂದು ನಡೆದಿತ್ತು.
CLAT 2026
CLAT 2026
Published on

ಪ್ರಸಕ್ತ ಸಾಲಿನ ಸಾಮಾನ್ಯ ಕಾನೂನು ಪ್ರವೇಶಾತಿ ಪರೀಕ್ಷೆಯ (ಸಿಎಲ್‌ಎಟಿ- 2026) ಫಲಿತಾಂಶಗಳನ್ನು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟದ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

ಸಿಎಲ್‌ಎಟಿ ಪದವಿ ಮತ್ತು ಸ್ನಾತಕೋತ್ತರ ಅಭ್ಯರ್ಥಿಗಳು ಜಾಲತಾಣದಲ್ಲಿ ತಮ್ಮ ಪ್ರವೇಶ ಪತ್ರ ಸಂಖ್ಯೆ ಬಳಸಿ ಲಾಗ್- ಇನ್ ಆಗುವ ಮೂಲಕ ಅಧಿಕೃತ ಜಾಲತಾಣ ಅಥವಾ ಅದರ ಪ್ರತಿಕೃತಿ ತಾಣದಲ್ಲಿ ಅಂಕಗಳ ಮಾಹಿತಿ ಪಡೆಯಬಹುದು.

Also Read
ಭಾರತೀಯ ಸೇನೆಯ ಜೆಎಜಿ ವಿಭಾಗದ ಹುದ್ದೆಗೆ ಸಿಎಲ್‌ಎಟಿ-ಪಿಜಿ ಕಡ್ಡಾಯ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಹೈಕೋರ್ಟ್‌ ನಕಾರ

ಫಲಿತಾಂಶ ಕುರಿತಾದ ಅಧಿಸೂಚನೆಯಲ್ಲಿ ಸಿಎಲ್‌ಎಟಿ ಫಲಿತಾಂಶದ ಆಧಾರದಲ್ಲಿ 2026-27ನೇ ಶೈಕ್ಷಣಿಕ ವರ್ಷದಲ್ಲಿ 25 ಕಾನೂನು ವಿಶ್ವವಿದ್ಯಾಲಯಗಳು ಹಾಗೂ ಐಐಯುಎಲ್‌ಇಆರ್‌ ದಾಖಲಾತಿ ಪ್ರಕ್ರಿಯೆ ಆರಂಭಿಸಲಿವೆ ಎಂದು ತಿಳಿಸಲಾಗಿದೆ.

“ಪಾಲ್ಗೊಳ್ಳುವ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು 2026–27ನೇ ಶೈಕ್ಷಣಿಕ ಸಾಲಿನ ಐದು ವರ್ಷದ ಸಮಗ್ರ ಪದವಿ ಮತ್ತು ಸ್ನಾತಕೋತ್ತರ  ಕೋರ್ಸ್‌ಗಳಿಗೆ ಸಿಎಲ್‌ಎಟಿ 2026 ಅಂಕಗಳ ಆಧಾರದ ಮೇಲೆ ಪ್ರವೇಶ ಪ್ರಕ್ರಿಯೆ ಆರಂಭಿಸಲಿವೆ. ಪ್ರವೇಶ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆಯ ಹೆಚ್ಚಿನ ವಿವರಗಳನ್ನು 2025 ಡಿಸೆಂಬರ್ 16ರಂದು ರಾತ್ರಿ 8:00 ಗಂಟೆಗೆ ಪ್ರಕಟಿಸಲಾಗುತ್ತದೆ” ಎಂದು ಅಧಿಸೂಚನೆ ತಿಳಿಸಿದೆ.

Also Read
ಸಿಎಲ್‌ಎಟಿ: ಕುಂದುಕೊರತೆ ಪರಿಹಾರ ಸಮಿತಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ; ಕೌನ್ಸೆಲಿಂಗ್ ತಡೆಗೆ ನಿರಾಕರಿಸಿದ ಸುಪ್ರೀಂ

ಸಿಎಲ್‌ಎಟಿ 2026 ಪದವಿ ಕೋರ್ಸ್‌ನಲ್ಲಿ ಪಡೆದ ಗರಿಷ್ಠ ಅಂಕ 112.75, ಹಾಗೂ ಸಿಎಲ್‌ಎಟಿ 2026 ಸ್ನಾತಕೋತ್ತರ ಪ್ರವೇಶ ಪರೀಕ್ಷೆಯಲ್ಲಿ ಪಡೆದ ಗರಿಷ್ಠ ಅಂಕ 104.25 ಆಗಿದೆ.

ಸಿಎಲ್‌ಎಟಿ 2026 ಪದವಿ ಮತ್ತು ಸ್ನಾತಕೋತ್ತರ ಪದವಿ ಎರಡರಿಂದಲೂ ಒಂದು ಪ್ರಶ್ನೆ ಹಿಂತೆಗೆದುಕೊಳ್ಳಲಾಗಿದ್ದು, ಪ್ರಮಾಣಿತ 120 ಅಂಕಗಳಿಗೆ ಬದಲು 119 ಅಂಕಗಳಲ್ಲಿ ಎರಡೂ ಪತ್ರಿಕೆಗಳಿಗೆ ಮೌಲ್ಯಮಾಪನ ಮಾಡಲಾಗಿದೆ.

[ಫಲಿತಾಂಶ ಅಧಿಸೂಚನೆಯ ಪ್ರತಿ]

Attachment
PDF
CLAT_2026_Result_Notification
Preview
Kannada Bar & Bench
kannada.barandbench.com