ನ್ಯಾಯಾಂಗ ನಿಂದನೆ: ಹಿರಿಯ ವಕೀಲ ಯತಿನ್ ಓಝಾ ತಪ್ಪಿತಸ್ಥ ಎಂದು ಘೋಷಿಸಿದ ಗುಜರಾತ್ ಹೈಕೋರ್ಟ್

ಗುಜರಾತ್ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷರಾಗಿರುವ ಓಝಾ ಅವರ ಶಿಕ್ಷೆಯ ಪ್ರಮಾಣವನ್ನು ಬುಧವಾರ ನಿಗದಿಗೊಳಿಸುವುದಾಗಿ ನ್ಯಾಯಾಲಯ ಪ್ರಕಟಿಸಿದೆ.
ಯತಿನ್ ಓಝಾ
ಯತಿನ್ ಓಝಾ

ನ್ಯಾಯಾಲಯ ರಿಜೆಸ್ಟ್ರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಫೇಸ್‌ಬುಕ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದ ಗುಜರಾತ್ ಹೈಕೋರ್ಟ್ ವಕೀಲರ ಸಂಘದ (ಜಿಎಚ್‌ಸಿಎಎ) ಅಧ್ಯಕ್ಷ ಯತಿನ್ ಓಝಾ ಅವರನ್ನು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಗುಜರಾತ್ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಸೋನಿಯಾ ಗೋಕಣಿ ಮತ್ತು ಎನ್ ವಿ ಅಂಜಾರಿಯಾ ಅವರಿದ್ದ ವಿಭಾಗೀಯ ಪೀಠ ಘೋಷಿಸಿದೆ.

ಈ ವರ್ಷದ ಜೂನ್‌ನಲ್ಲಿ, ಯತಿನ್ ಓಝಾ ವಿರುದ್ಧ ಗುಜರಾತ್ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಕ್ರಿಮಿನಲ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿತ್ತು. ಓಝಾ ಅವರು ಫೇಸ್‌ಬುಕ್ ನೇರ ಪ್ರಸಾರದ ಮೂಲಕ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ಗುಜರಾತ್ ನ್ಯಾಯಾಂಗ ರಿಜೆಸ್ಟ್ರಿಯ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದು ಬೇಜಾವಾಬ್ದಾರಿಯುತ, ಉದ್ರೇಕಕಾರಿ ಹಾಗೂ ಅಸಮರ್ಥನೀಯ ಕ್ರಮವಾಗಿತ್ತು ಎಂದು ಕೋರ್ಟ್ ಹೇಳಿದೆ.

ಓಝಾ ಅವರಿಗೆ ನೀಡಲಾಗುವ ಶಿಕ್ಷೆಯ ಪ್ರಮಾಣವನ್ನು ಬುಧವಾರ ಘೋಷಿಸಲಾಗುವುದು ಎಂದು ಕೋರ್ಟ್ ತಿಳಿಸಿದೆ.

Kannada Bar & Bench
kannada.barandbench.com