ಜಿಯಾ ಖಾನ್ ಆತ್ಮಹತ್ಯೆ: ನಟ ಸೂರಜ್ ಪಾಂಚೋಲಿಯನ್ನು ಖುಲಾಸೆಗೊಳಿಸಿದ ಮುಂಬೈ ನ್ಯಾಯಾಲಯ

ಜಿಯಾ ಸಾವಿನ ಒಂದು ತಿಂಗಳ ಬಳಿಕ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ಜುಲೈ 2013 ರಲ್ಲಿ ಮುಂಬೈ ಪೊಲೀಸರು ಪಾಂಚೋಲಿ ಅವರನ್ನು ಬಂಧಿಸಿದರು.
ಜಿಯಾ ಖಾನ್ ಆತ್ಮಹತ್ಯೆ: ನಟ ಸೂರಜ್ ಪಾಂಚೋಲಿಯನ್ನು ಖುಲಾಸೆಗೊಳಿಸಿದ ಮುಂಬೈ ನ್ಯಾಯಾಲಯ
A1

ರೂಪದರ್ಶಿ ಹಾಗೂ ನಟಿ ಜಿಯಾ ಖಾನ್‌ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸೂರಜ್‌ ಪಾಂಚೋಲಿ ಅವರನ್ನು ಮುಂಬೈನ ವಿಶೇಷ ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.

 ಏಪ್ರಿಲ್ 20 ರಂದು ಪ್ರಕರಣದ ತೀರ್ಪು ಕಾಯ್ದಿರಿಸಿದ್ದ ವಿಶೇಷ ನ್ಯಾಯಾಧೀಶ ಎ ಎಸ್‌ ಸಯ್ಯದ್ ಅವರು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪಾಂಚೋಲಿ ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ಇಂದು ತೀರ್ಪು ನೀಡಿದರು.

ಜೂನ್ 3, 2013 ರಂದು, ನೇಣು ಬಿಗಿದ ಸ್ಥಿತಿಯಲ್ಲಿ ಜಿಯಾ ಅವರ ದೇಹ ಪತ್ತೆಯಾಗಿತ್ತು ಎಂದು ಆಕೆಯ ತಾಯಿ ರಬಿಯಾ ಖಾನ್‌ ಆರೋಪಿಸಿದ್ದರು. ತಮ್ಮ ಸಾವಿಗೂ ಮುಂಚೆ ಜಿಯಾ ಜಿಯಾ 6 ಪುಟಗಳ ಪತ್ರ ಬರೆದಿದ್ದು ಅದರಲ್ಲಿ ಪಾಂಚೋಲಿ ಜೊತೆಗಿನ ಸಂಬಂಧ ಬಿಗಡಾಯಿಸಿದ್ದರ ಬಗ್ಗೆ ವಿವರಿಸಿದ್ದರು.

ಇದನ್ನು ಆಧರಿಸಿ ಜಿಯಾ ಸಾವಿನ ಒಂದು ತಿಂಗಳ ಬಳಿಕ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿತ್ತು. ತದನಂತರ ಬಾಂಬೆ ಹೈಕೋರ್ಟ್‌ ಜುಲೈ 1, 2013ರಂದು ಜಾಮೀನಿನ ಮೇಲೆ ಪಾಂಚೋಲಿ ಅವರನ್ನು ಬಿಡುಗಡೆ ಮಾಡಿತ್ತು.

ಪ್ರಕರಣವನ್ನು ಎಸ್‌ಐಟಿ ಅಥವಾ ಸಿಬಿಐಗೆ ವರ್ಗಾಯಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ ಜಿಯಾ ಅವರ ತಾಯಿ ಅರ್ಜಿ ಸಲ್ಲಿಸಿದ್ದರು. ಮಗಳದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು ಅವರು ಅಳಲು ತೋಡಿಕೊಂಡಿದ್ದರು.

2014ರಲ್ಲಿ ಹೈಕೋರ್ಟ್ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತ್ತು. ನಂತರ ಪ್ರಕರಣದ ವಿಚಾರಣೆ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನಡೆದಿತ್ತು. ವಿಚಾರಣೆ ಮಾರ್ಚ್ 2019 ರಲ್ಲಿ ಪ್ರಾರಂಭವಾಗಿತ್ತು. ಡಿಸೆಂಬರ್ 2015 ರಲ್ಲಿ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ ಐಪಿಸಿ ಸೆಕ್ಷನ್‌ ಸೆಕ್ಷನ್ 306 ರ ಅಡಿ ಪಾಂಚೋಲಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮಾಡಿದ ಆರೋಪ ನಿಗದಿಪಡಿಸಲಾಗಿತ್ತು.

ಪಾಂಚೋಲಿ ಪರ ವಕೀಲ ಪ್ರಶಾಂತ್ ಪಾಟೀಲ್ ಅವರು 2023 ರ ಜನವರಿಯಲ್ಲಿ ವಿಶೇಷ ನ್ಯಾಯಾಲಯಕ್ಕೆ ಸಾಕ್ಷಿಗಳನ್ನು ಕರೆಸುವ ಮೂಲಕ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಕೋರಿದ್ದರು. ಸಿಬಿಐ ಕೇವಲ 14 ಸಾಕ್ಷಿಗಳನ್ನು ಮಾತ್ರ ಹಾಜರುಪಡಿಸಿದೆ. ಅಲ್ಲದೆ 2014 ರಿಂದ ಪ್ರಕರಣ ಬಾಕಿ ಉಳಿದಿದೆ ಎಂದು ಅವರು ವಾದಿಸಿದ್ದರು. ವಿಚಾರಣೆಯ ವಿಳಂಬದಿಂದಾಗಿ ಪಾಂಚೋಲಿ ಅವರಿಗೆ ತೊಂದರೆಯಾಗುತ್ತಿರುವ ಬಗ್ಗೆ ನ್ಯಾಯಾಲಯದ ಗಮನಸೆಳೆದಿದ್ದರು. ವಿಚಾರಣೆಯನ್ನು ಜನವರಿ 21, 2023 ರಂದು ತ್ವರಿತಗೊಳಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com