ಪರಮ್ ಬೀರ್ ಸಿಂಗ್ ವಿರುದ್ಧದ ತನಿಖೆ ಸಿಬಿಐಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್ [ಚುಟುಕು]

Param Bir Singh, Supreme Court

Param Bir Singh, Supreme Court

A1

ಮುಂಬೈ ಪೊಲೀಸ್ ಕಮಿಷನರ್ ಆಗಿದ್ದ ಪರಮ್ ಬೀರ್ ಸಿಂಗ್ ಅವರ ವಿರುದ್ಧ ಮಹಾರಾಷ್ಟ್ರ ಪೊಲೀಸರು ನಡೆಸುತ್ತಿರುವ ತನಿಖೆಯನ್ನು ಸುಪ್ರೀಂ ಕೋರ್ಟ್‌ ಸಿಬಿಐಗೆ ಒಪ್ಪಿಸಿದೆ. ಆ ಮೂಲಕ ತಮ್ಮ ವಿರುದ್ಧ ಸರ್ಕಾರ ನಡೆಸಿರುವ ಎರಡು ಪ್ರಾಥಮಿಕ ತನಿಖೆಗಳನ್ನು ಪ್ರಶ್ನಿಸಿ ಸಿಂಗ್‌ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಬಾಂಬೆ ಹೈಕೋರ್ಟ್‌ ತೀರ್ಪನ್ನು ನ್ಯಾಯಾಲಯ ರದ್ದುಗೊಳಿಸಿತು.

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ ಎಂ ಸುಂದರೇಶ್‌ ಅವರಿದ್ದ ಪೀಠ, “ಸಹಜ ನ್ಯಾಯ ತತ್ವದ ತುರ್ತಿನ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವ ಅಗತ್ಯವಿದೆ. ನಾವು ಮೇಲ್ಮನವಿದಾರರನ್ನು ಹಗರಣ ಬಯಲು ಮಾಡುವ ಸಿಳ್ಳೆಗಾರರು ಎಂದಾಗಲೀ ಅಥವಾ ಈ ಪ್ರಕರಣದಲ್ಲಿ ಭಾಗಿಯಾಗಿರುವ ಯಾರನ್ನಾದರೂ (ಈ ತನಿಖೆಯು) ಹಾಲಿನಿಂದ ಶುಭ್ರಗೊಳಿಸಲಾಗುತ್ತದೆ ಎಂದಾಗಲಿ ಹೇಳುತ್ತಿಲ್ಲ." ಎಂದು ನ್ಯಾಯಾಲಯ ಇದೇ ಸಂದರ್ಭದಲ್ಲಿ ತಿಳಿಸಿತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com