ಕೋವಿಡ್ ಹಿನ್ನೆಲೆ: ಪ್ರಕರಣಗಳ ದಾಖಲಾತಿಗೆ ಇರುವ ಕಾಲಮಿತಿಯನ್ನು ಫೆ. 28ರವರೆಗೆ ವಿಸ್ತರಿಸಿದ ಸುಪ್ರೀಂಕೋರ್ಟ್

ದೇಶದೆಲ್ಲೆಡೆ ಕೋವಿಡ್ ಪ್ರಕರಣಗಳ ಉಲ್ಬಣ ಗಮನಿಸಿ ಕಾಲಮಿತಿ ಸಡಿಲಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಷನ್ (ಎಸ್‌ಸಿಎಒಆರ್‌ಎ) ಮಾಡಿದ ಮನವಿಯ ಮೇರೆಗೆ ಈ ಆದೇಶ ಜಾರಿಗೊಳಿಸಲಾಗಿದೆ.
CJI NV Ramana, Justices L Nageswara Rao and Surya Kant

CJI NV Ramana, Justices L Nageswara Rao and Surya Kant


Published on

ದೇಶಾದ್ಯಂತ ಕೋವಿಡ್‌ ಪ್ರಕರಣಗಳು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸಾಮಾನ್ಯ ಮತ್ತು ವಿಶೇಷ ಕಾನೂನುಗಳಡಿಯ ಪ್ರಕರಣಗಳನ್ನು ದಾಖಲಿಸಲು ಇರುವ ಕಾಲಮಿತಿಯನ್ನು ಫೆಬ್ರವರಿ 28, 2022ರವರೆಗೆ ಸುಪ್ರೀಂಕೋರ್ಟ್‌ ಸಡಿಲಿಸಿದೆ.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಎಲ್ ನಾಗೇಶ್ವರ ರಾವ್ ಅವರಿದ್ದ ಪೀಠ ಈ ನಿಟ್ಟಿನಲ್ಲಿ ಮಾರ್ಚ್ 23, 2020ರಂದು ನೀಡಲಾಗಿದ್ದ ಆದೇಶವನ್ನು ಮರಳಿ ಜಾರಿಗೆ ತಂದಿದೆ. ಆ ಮೂಲಕ ಎಲ್ಲಾ ನ್ಯಾಯಾಂಗ ಅಥವಾ ಅರೆ-ನ್ಯಾಯಾಂಗ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಯಾವುದೇ ಸಾಮಾನ್ಯ ಅಥವಾ ವಿಶೇಷ ಕಾನೂನುಗಳ ಅಡಿಯಲ್ಲಿ ಸೂಚಿಸಲಾದ ಕಾಲಮಿತಿಯ ಉದ್ದೇಶಗಳಿಗೆ ಮಾರ್ಚ್ 15, 2020 ರಿಂದ ಫೆಬ್ರವರಿ 28, 2022 ರವರೆಗಿನ ಅವಧಿಯು ಅನ್ವಯವಾಗುವುದಿಲ್ಲ ಎಂದಿತು.

Also Read
ಕೋವಿಡ್ ಹಿನ್ನೆಲೆ: ಪ್ರಕರಣಗಳ ದಾಖಲಿಸಲು ಇರುವ ಕಾಲಮಿತಿ ವಿಸ್ತರಿಸಲು ಸುಪ್ರೀಂ ಸಮ್ಮತಿ

ದೇಶದೆಲ್ಲೆಡೆ ಕೋವಿಡ್ ಪ್ರಕರಣಗಳ ಉಲ್ಬಣಿಸಿರುವುದನ್ನು ಗಮನಿಸಿ ಕಾಲಮಿತಿ ಸಡಿಲಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಷನ್ ​​(ಎಸ್‌ಸಿಎಒಆರ್‌ಎ) ಮಾಡಿದ ಮನವಿಯ ಮೇರೆಗೆ ಈ ಆದೇಶ ಜಾರಿಗೊಳಿಸಲಾಗಿದೆ. ಕೋವಿಡ್ ಉಲ್ಬಣದಿಂದಾಗಿ ಅನೇಕ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ಗಳು ಸೀಮಿತ ವಿಚಾರಣೆಗಳೊಂದಿಗೆ ಪೂರ್ಣ ವರ್ಚುವಲ್ ವಿಧಾನದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಆದೇಶವನ್ನು ಇಲ್ಲಿ ಓದಿ:

Attachment
PDF
Extension_of_Limitation_order_2022.pdf
Preview
Kannada Bar & Bench
kannada.barandbench.com