ಭಾರತೀಯ ಷೇರು ಮತ್ತು ವಿನಿಮಯ ಮಂಡಳಿಯ (ಸೆಬಿ) ನ್ಯಾಯಿಕ ಅಧಿಕಾರಿಯೊಬ್ಬರಿಗೆ ಷೇರು ಮೇಲ್ಮನವಿ ನ್ಯಾಯಮಂಡಳಿ (ಎಸ್‌ಎಟಿ) ನೀಡಿದ್ದ ನಿರ್ದೇಶನಕ್ಕೆ ಸುಪ್ರೀಂಕೋರ್ಟ್ ಸೋಮವಾರ ತಡೆ ನೀಡಿದೆ. 'ನ್ಯಾಯಾಂಗ ಅವಿಧೇಯತೆ' ತೋರಲಾಗಿದೆ ಎಂದು ಸೆಬಿ ವಿರುದ್ಧ ಎಸ್‌ಎಟಿ ಮಾಡಿದ್ದ ಅವಲೋಕನಗಳನ್ನು ಸೆಬಿ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಸಮಸ್ಯೆ ಎದುರಿಸುತ್ತಿರುವ ಪಕ್ಷಕಾರರ ನಿರ್ದಿಷ್ಟ ವಾದದ ಕುರಿತು ಮಾರುಕಟ್ಟೆ ನಿಯಂತ್ರಕರು ಏಕೆ ಗಾಂಭೀರ್ಯರಹಿತವಾಗಿ ವ್ಯವಹರಿಸಿದ್ದಾರೆ ಎಂಬುದನ್ನು ವಿವರಿಸುವ ಅಫಿಡವಿಟ್ ಸಲ್ಲಿಸಬೇಕು ಎಂದು ಎಸ್‌ಎಟಿ ನೀಡಿದ್ದ ನಿರ್ದೇಶನಕ್ಕೂ ನ್ಯಾಯಾಲಯ ತಡೆ ನೀಡಿತು.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.