ಸಿನಿಮಾ ‘83’ ಪ್ರಸಾರ ಹಕ್ಕು: ನೆಟ್‌ಫ್ಲಿಕ್ಸ್‌, ಹಾಟ್‌ಸ್ಟಾರ್‌, ರಿಲಯನ್ಸ್ ಪರ ಬಾಂಬೆ ಹೈಕೋರ್ಟ್ ತೀರ್ಪು [ಚುಟುಕು]

83

83


Twitter/RanveerSingh

Published on

ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಸ್ಟುಡಿಯೋಸ್‌ಗೆ ಸಂಬಂಧಿಸಿದ ಎಕ್ಸ್‌ಪ್ಲಾಯ್ಟೇಷನ್‌ ರೈಟ್ಸ್‌ ಎತ್ತಿ ಹಿಡಿದಿರುವ ಬಾಂಬೆ ಹೈಕೋರ್ಟ್‌ ಈ ವಾರ ಸ್ಟಾರ್ ಇಂಡಿಯಾ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಬಾಲಿವುಡ್ ಚಲನಚಿತ್ರ '83' ಪ್ರಸಾರ ಮಾಡುವುದಕ್ಕೆ ತಡೆ ನೀಡಲು ನಿರಾಕರಿಸಿದೆ. [ಮ್ಯಾಡ್ ಮ್ಯಾನ್ ಫಿಲ್ಮ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ ಮತ್ತು ರಿಲಯನ್ಸ್ ಎಂಟರ್‌ಟೈನ್ಮೆಂಟ್ ಸ್ಟುಡಿಯೋಸ್ ಪ್ರೈವೇಟ್ ಲಿಮಿಟೆಡ್ ಮತ್ತಿತರರ ನಡುವಣ ಪ್ರಕರಣ].

ರಿಲಯನ್ಸ್ ಎಂಟರ್‌ಟೈನ್‌ಮೆಂಟ್‌ನ ಬೌದ್ಧಿಕ ಆಸ್ತಿ ಹಕ್ಕುಗಳ ಮೂಲಕ ನೆಟ್‌ಫ್ಲಿಕ್ಸ್ ಮತ್ತು ಸ್ಟಾರ್ ಇಂಡಿಯಾ ಬಾಲಿವುಡ್ ಚಲನಚಿತ್ರ '83' ಬಿಡುಗಡೆ ಮಾಡುವುದಕ್ಕೆ ಮತ್ತು ಅದರಿಂದ ಲಾಭಗಳಿಸುವುದಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಮ್ಯಾಡ್ ಮ್ಯಾನ್ ಫಿಲ್ಮ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್‌ ದಾವೆ ಹೂಡಿತ್ತು. ಬೌದ್ಧಿಕ ಆಸ್ತಿ ಹಕ್ಕಿನ ಪಾಲಿಗೆ ಸಂಬಂಧಿಸಿದಂತೆ ತನಗೆ ಅನ್ಯಾಯವಾಗಿದೆ ಎಂಬುದು ಅದರ ವಾದವಾಗಿತ್ತು.

ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com