![[ಚುಟುಕು] ಬುಲ್ಲಿ ಬಾಯ್: ಆರೋಪಿ ನೀರಜ್ ಸಿಂಗ್‌ನನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದ ಮುಂಬೈ ನ್ಯಾಯಾಲಯ](http://media.assettype.com/barandbench-kannada%2F2022-01%2F2d6cc02e-1d92-4ffb-b68d-99a501161595%2Fbarandbench_2022_01_296e6cc3_43b6_4f75_9d7d_eed86362e5b0_32.jpg?w=480&auto=format%2Ccompress&fit=max)
ಮುಸ್ಲಿಂ ಮಹಿಳೆಯರನ್ನು ಅವಹೇಳನಕಾರಿಯಾಗಿ ಬಿಂಬಿಸುತ್ತಿದ್ದ ಬುಲ್ಲಿ ಬಾಯ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ನೀರಜ್ ಸಿಂಗ್‌ನನ್ನು ಮುಂಬೈನ ನ್ಯಾಯಾಲಯವೊಂದು ಶನಿವಾರ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಎಂಬಿಎ ಪದವಿ ಪಡೆದಿರುವ 28 ವರ್ಷದ ನೀರಜ್‌ನನ್ನು ಮುಂಬೈ ಪೊಲೀಸರು ಒಡಿಶಾದಲ್ಲಿ ಬಂಧಿಸಿದ್ದು, ಜನವರಿ 27, 2022 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆರೋಪಿಯನ್ನು ಶನಿವಾರ ಬಾಂದ್ರಾದಲ್ಲಿರುವ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿತರಾಗಿರುವ ಬೆಂಗಳೂರಿನ ವಿದ್ಯಾರ್ಥಿ ವಿಶಾಲ್ ಝಾ, ಉತ್ತರಾಖಂಡದ ಮಯಾಂಕ್ ರಾವತ್ ಹಾಗೂ ಶ್ವೇತಾ ಸಿಂಗ್, ನೀರಜ್ ಬಿಷ್ಣೋಯ್ ಮತ್ತು ಓಂಕಾರೇಶ್ವರ ಠಾಕೂರ್ ಅವರನ್ನು ತನಿಖೆಗೊಳಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.