[ಬುಲ್ಲಿ ಬಾಯ್‌] ಆರೋಪಿಗಳ ನಡತೆ ಜಾತ್ಯತೀತತೆಗೆ ವಿರುದ್ಧ: ವಿಶಾಲ್‌ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ದೆಹಲಿ ಕೋರ್ಟ್

ಬುಲ್ಲಿ ಬಾಯ್‌ ಅಪ್ಲಿಕೇಶನ್‌ ಅವಮಾನಕರವಾಗಿದ್ದು, ಅದು ಸಂವಿಧಾನದ ಅಂತಸತ್ವಗಳಾದ ಜಾತ್ಯತೀತತೆ, ಭ್ರಾತೃತ್ವ ಮತ್ತು ಮಹಿಳೆಯ ಘನತೆಯನ್ನು ಎತ್ತಿಹಿಡಿಯುವ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ.
Bulli Bai case

Bulli Bai case

ಬುಲ್ಲಿ ಬಾಯ್‌ ಅಪ್ಲಿಕೇಶನ್‌ ರೂಪಿಸಿರುವ ಆರೋಪಿಗಳ ನಡತೆಯು ಮಹಿಳೆಯ ಘನತೆಯನ್ನು ಎತ್ತಿ ಹಿಡಿಯುವ ಸಂವಿಧಾನದ ಅಂತಃಸತ್ವವಾದ ಜಾತ್ಯತೀತತೆ ಮತ್ತು ಭ್ರಾತೃತ್ವಕ್ಕೆ ವಿರುದ್ಧವಾಗಿದೆ ಎಂದಿರುವ ದೆಹಲಿ ನ್ಯಾಯಾಲಯವು ಆರೋಪಿ ವಿಶಾಲ್‌ ಝಾಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.

ಬುಲ್ಲಿ ಬಾಯ್‌ ಅಪ್ಲಿಕೇಶನ್‌ ನಿರ್ದಿಷ್ಟ ಸಮುದಾಯದ ಮಹಿಳೆಯರ ಮೇಲಿನ ನೇರ ದಾಳಿಯಾಗಿದೆ ಎಂದಿರುವ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಧರ್ಮೇಂದ್ರ ರಾಣಾ ಹೇಳಿದ್ದಾರೆ

Also Read
ಬುಲ್ಲಿ ಬಾಯ್‌ ಪ್ರಕರಣ: ಮುಂಬೈ ನ್ಯಾಯಾಲಯ ಮೂವರು ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದೇಕೆ?

ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮತ್ತು ಮುಂಬೈನಲ್ಲಿ ದಾಖಲಿಸಿರುವ ಎಫ್‌ಐಆರ್‌ಗೆ ಸಂಬಂಧಿಸಿದ ವ್ಯತ್ಯಾಸ ತಿಳಿಸುವಂತೆ ದೆಹಲಿ ಪೊಲೀಸ್‌ನ ಉಪ ಆಯುಕ್ತರಿಗೆ ಶುಕ್ರವಾರ ನ್ಯಾ. ರಾಣಾ ತಿಳಿಸಿದ್ದರು. ಮುಂಬೈ ಪೊಲೀಸರು ಎಫ್‌ಐಆರ್‌ ದಾಖಲಿಸುವುದಕ್ಕೂ ಮುನ್ನ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಇಂದು ಡಿಸಿಪಿಯು ನ್ಯಾಯಾಲಯಕ್ಕೆ ತಿಳಿಸಿದರು.

ವಾದ-ಪ್ರತಿವಾದವನ್ನು ಆಲಿಸಿದ ಪೀಠವು “ಬುಲ್ಲಿ ಬಾಯ್‌ ಅಪ್ಲಿಕೇಶನ್‌ ಸಂವಿಧಾನದ ಅಂತಸತ್ವಗಳಾದ ಜಾತ್ಯತೀತತೆ, ಭ್ರಾತೃತ್ವ ಮತ್ತು ಮಹಿಳೆಯ ಘನತೆಯನ್ನು ಎತ್ತಿಹಿಡಿಯುವ ನೀತಿಗೆ ವಿರುದ್ಧವಾಗಿದೆ” ಎಂದು ನ್ಯಾಯಾಲಯ ಹೇಳಿದೆ. ಅಲ್ಲದೇ, ಆರೋಪಿ ಝಾ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವುದು ಅಗತ್ಯ ಎಂಬ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಇರ್ಫಾನ್‌ ಅಹ್ಮದ್‌ ಅವರ ವಾದಕ್ಕೆ ಸಮ್ಮತಿಸಿದೆ.

Related Stories

No stories found.
Kannada Bar & Bench
kannada.barandbench.com