
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಭಾಗಿಯಾಗಲಿರುವ, ನಾಳೆ ಕೊಲ್ಕತ್ತಾದಲ್ಲಿ ನಡೆಯಲಿರುವ ಸಮಾವೇಶಕ್ಕೆ ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.
ಮಾಧ್ಯಮಿಕ ಶಾಲೆ ಪರೀಕ್ಷೆ ನಡೆಯಲಿರುವು ಕಾರಣಕ್ಕೆ ಧ್ವನಿವರ್ಧಕ ಬಳಕೆಗೆ ಅನುಮತಿ ನಿರಾಕರಿಸಿದ್ದ ರಾಜ್ಯ ಸರ್ಕಾರದ ನಿರ್ಧಾರವನ್ನು ನ್ಯಾಯಮೂರ್ತಿ ಅಮೃತ ಸಿನ್ಹಾ ರದ್ದುಗೊಳಿಸಿದರು.
ಕಾರ್ಯಕ್ರಮ ಭಾನುವಾರ ನಡೆಯುತ್ತಿದ್ದು ಕೇವಲ 1 ಗಂಟೆ 15 ನಿಮಿಷಗಳ ಕಾಲ ಇರುತ್ತದೆ. ಅಲ್ಲದೆ ಸಮಾವೇಶ ನಡೆಯುವ ಸ್ಥಳ ಸ್ಥಳೀಯ ಶಾಲೆಯಿಂದ 500 ಮೀಟರ್ ದೂರದಲ್ಲಿದೆ. ಹೀಗಾಗಿ ಪರೀಕ್ಷಾರ್ಥಿಗಳಿಗೆ ತೊಂದರೆಯಾಗದು ಎಂದು ತಿಳಿಸಿದ ನ್ಯಾಯಾಲಯ ಸಮಾವೇಶಕ್ಕೆ ಅನುಮತಿಸಿತು.
ಆದರೆ ಪರೀಕ್ಷೆಗೆ ತೊಂದರೆಯಾಗದಂತೆ ಧ್ವನಿವರ್ಧಕದ ಶಬ್ದದ ಮಟ್ಟವನ್ನು ಕಡಿಮೆ ಮಾಡಿರಬೇಕು ಎಂದು ನ್ಯಾಯಾಲಯ ಅರ್ಜಿ ಸಲ್ಲಿಸಿದ್ದ ಆರ್‌ಎಸ್‌ಎಸ್ ಜಿಲ್ಲಾ ಕಾರ್ಯವಾಹ ಅವರಿಗೆ ಸೂಚಿಸಿತು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]