ಟ್ರೇಡ್‌ಮಾರ್ಕ್ ಪ್ರಕರಣ: ಅಪ್ರಾಮಾಣಿಕ ಉದ್ದೇಶದಿಂದ ಒಂದೇ ರೀತಿಯ ಪದಗಳ ಬಳಸುವಂತಿಲ್ಲ ಎಂದ ದೆಹಲಿ ಹೈಕೋರ್ಟ್‌ [ಚುಟುಕು]

Baazi, Delhi High Court

Baazi, Delhi High Court

ಟ್ರೇಡ್‌ಮಾರ್ಕ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಟಿಕ್‌ಟೋಕ್‌ ಗೇಮ್ಸ್‌ ಪ್ರೈ. ಲಿ ಮತ್ತಿತರರ ವಿರುದ್ಧ ಪ್ರತಿಬಂಧಕಾದೇಶ ಕೋರಿದ್ದ ಬಾಜಿ ಸಮೂಹ ಸಂಸ್ಥೆಗಳ ಭಾಗವಾದ ಮೂನ್‌ಶೈನ್‌ ಟೆಕ್ನಾಲಜೀಸ್‌ ಪ್ರೈ. ಲಿ.ಗೆ ಪರಿಹಾರ ಒದಗಿಸಿರುವ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಆಶಾ ಮೆನನ್‌ ನೇತೃತ್ವದ ಏಕಸದಸ್ಯ ಪೀಠವು ಬಾಜಿಗೆ ಸೇರಿದ ಯಾವುದೇ ಟ್ರೇಡ್‌ಮಾರ್ಕ್‌ಗಳನ್ನು ಬಳಸದಂತೆ ಪ್ರತಿವಾದಿಗಳಿಗೆ ಆದೇಶ ಮಾಡಿದೆ. ಒಂದೇ ರೀತಿಯ ಪದವನ್ನು ಪ್ರತಿಸ್ಪರ್ಧಿಗಳು ಅಪ್ರಾಮಾಣಿಕವಾಗಿ ಹಾಗೂ ದುರುದ್ದೇಶದಿಂದ ಬಳಸುವುದು ಅವರನ್ನು ಅಂತಹ ಕೃತ್ಯದಿಂದ ನಿರ್ಬಂಧಿಸಲು ಕಾರಣವಾಗುತ್ತದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

ಹೆಚ್ಚಿನ ವಿವರಗಳಿಗೆ 'ಬಾರ್‌ ಅಂಡ್‌ ಬೆಂಚ್‌' ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com