ಸರ್ಕಾರಕ್ಕೆ ಯಾವುದೇ ಆದಾಯ ನಷ್ಟ ಉಂಟು ಮಾಡಿಲ್ಲ ಎಂಬ ಕಾರಣಕ್ಕೆ ನಕಲಿ ಮತ್ತು ತಿರುಚಿದ ದಾಖಲೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ರದ್ದು ಮಾಡಲಾಗದು ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಹೇಳಿದೆ. ಆಂಧ್ರಪ್ರದೇಶ ಹೈಕೋರ್ಟ್ 2011ರಲ್ಲಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ ಎಂ ಸುಂದರೇಶ್ ಅವರಿದ್ದ ವಿಭಾಗೀಯ ಪೀಠ ತೀರ್ಪು ನೀಡಿತು.
“ಈ ತರ್ಕದ ಪರಿಣಾಮ ಎಂದರೆ ಆದಾಯಕ್ಕೆ ನಷ್ಟ ಉಂಟು ಮಾಡದಿದ್ದರೆ ದಾಖಲೆಗಳ ತಿರುಚುವಿಕೆಗೆ ಅನುಮತಿ ನೀಡಿ ಎಂದಾಗುತ್ತದೆ!” ಆದ್ದರಿಂದ (ಹೈಕೋರ್ಟ್‌ನ) ದೋಷಪೂರಿತ ಆದೇಶವನ್ನು ಬದಿಗೆ ಸರಿಸುತ್ತಿರುವುದಾಗಿ ನ್ಯಾಯಾಲಯ ವಿವರಿಸಿತು.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.