ಮಕ್ಕಳ ಪಾಲನೆಗೆ ಸಂಬಂಧಿಸಿದ ಪ್ರಕರಣಗಳು ಆದ್ಯತೆ ಮೇಲೆ ನಿರ್ಧಾರವಾಗಬೇಕು: ಮದ್ರಾಸ್ ಹೈಕೋರ್ಟ್ [ಚುಟುಕು]

Child custody
Child custody
Published on

ಸುದೀರ್ಘ ಅವಧಿಯ ವಿಚಾರಣೆಯಿಂದ ಮಕ್ಕಳ ಹಿತಾಸಕ್ತಿ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ ಅಪ್ರಾಪ್ತ ಮಕ್ಕಳ ಪಾಲನೆಗೆ ಸಂಬಂಧಿಸಿದ ಪ್ರಕರಣಗಳನ್ನು ನ್ಯಾಯಾಲಯಗಳು ಆದಷ್ಟು ಬೇಗ ಇತ್ಯರ್ಥಪಡಿಸಬೇಕೆಂದು ಮದ್ರಾಸ್‌ ಹೈಕೋರ್ಟ್‌ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ [ಸಿ ಶಾಮಿಲಕುಮಾರಿ ಮತ್ತು ಪಿ ಚಂದ್ರಶೇಖರ್ ನಡುವಣ ಪ್ರಕರಣ].

ವಿಚಾರಣಾ ನ್ಯಾಯಾಲಯವೊಂದು ಮಕ್ಕಳ ಸುಪರ್ದಿ ವ್ಯಾಜ್ಯವನ್ನು ಆರು ವರ್ಷಗಳ ಅವಧಿಯ ನಂತರ ಇತ್ಯರ್ಥಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎಸ್‌ ಎಂ ಸುಬ್ರಮಣ್ಯಂ ಮತ್ತು ಜೆ ಸತ್ಯನಾರಾಯಣ ಪ್ರಸಾದ್ ಅವರಿದ್ದ ಪೀಠ ಮಕ್ಕಳನ್ನು ಸುಪರ್ದಿಗೆ ಒಪ್ಪಿಸುವ ಪ್ರಕರಣಗಳನ್ನು ಮಾಮೂಲಿ ಪ್ರಕರಣಗಳಂತೆ ವಿಚಾರಣೆ ನಡೆಸದೆ ಮಕ್ಕಳ ಮನಸ್ಥಿತಿಯ ಬಗ್ಗೆ ಆಳವಾದ ತನಿಖೆ ನಡೆಸಬೇಕು ಎಂದು ಕೂಡ ಸಲಹೆ ನೀಡಿತು.

ಹೆಚ್ಚಿನ ಮಾಹಿತಿಗಾಗಿ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ʼಲಿಂಕ್‌ʼ ಗಮನಿಸಿ.

Kannada Bar & Bench
kannada.barandbench.com