ಸಿಪ್ಪಿ ಸಿಧು ಹತ್ಯೆ ಪ್ರಕರಣ: ಹಿಮಾಚಲ ಪ್ರದೇಶ ಹೈಕೋರ್ಟ್ ಹಂಗಾಮಿ ಸಿಜೆ ಪುತ್ರಿಯನ್ನು ಬಂಧಿಸಿದ ಸಿಬಿಐ [ಚುಟುಕು]

Himachal Pradesh High Court
Himachal Pradesh High CourtA1

ಏಳು ವರ್ಷಗಳ ಹಿಂದೆ ನಡೆದ ಸಿಪ್ಪಿ ಸಿಧು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸಬೀನಾ ಅವರ ಪುತ್ರಿ ಕಲ್ಯಾಣಿ ಸಿಂಗ್ ಅವರನ್ನು ಸಿಬಿಐ ಬಂಧಿಸಿದೆ ಎಂದು ವರದಿಯಾಗಿದೆ. ಕಲ್ಯಾಣಿ ಅವರನ್ನು ನಾಲ್ಕು ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಿ ವಿಶೇಷ ನ್ಯಾಯಾಧೀಶ ಸುಖದೇವ್ ಸಿಂಗ್ ಆದೇಶ ಹೊರಡಿಸಿದ್ದಾರೆ.

ಸೆಪ್ಟೆಂಬರ್‌ 2015ರಲ್ಲಿ ಚಂಡೀಗಢದಲ್ಲಿ ರಾಷ್ಟ್ರಮಟ್ಟದ ಶೂಟಿಂಗ್‌ ಕ್ರೀಡಾಪಟು ಹಾಗೂ ವಕೀಲ ಸುಖಮನ್‌ಪ್ರೀತ್ ಸಿಂಗ್ ಸಿಧು ಅಲಿಯಾಸ್ ಸಿಪ್ಪಿ ಸಿಧು ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಘಟನೆ ವೇಳೆ ಮಹಿಳೆಯೊಬ್ಬರು ಸಿದ್ದು ಜೊತೆಗಿದ್ದರು. ಸಿಬಿಐ ಆರಂಭದಲ್ಲಿ ಮಹಿಳೆಯೇ ಮುಂದೆ ಬಂದು ಹೇಳಿಕೆ ನೀಡಬೇಕು. ಇಲ್ಲದೇ ಹೋದರೆ ಕೃತ್ಯದಲ್ಲಿ ಆಕೆಯ ಪಾತ್ರವಿದೆ ಎಂಬುದಾಗಿ ಭಾವಿಸಲಾಗುತ್ತದೆ ಎಂದು ಹೇಳಿತ್ತು.

Related Stories

No stories found.
Kannada Bar & Bench
kannada.barandbench.com