ಐಪಿಸಿ, ಸಿಆರ್‌ಪಿಸಿ, ಭಾರತೀಯ ಸಾಕ್ಷ್ಯ ಕಾಯಿದೆ ಬದಲಾವಣೆಗೆ ಮಸೂದೆ ಮಂಡಿಸಿದ ಕೇಂದ್ರ ಸರ್ಕಾರ

ಬ್ರಿಟಿಷರು 1860ರಲ್ಲಿ ಭಾರತೀಯ ದಂಡ ಸಂಹಿತೆ ರೂಪಿಸಿದ್ದು, ಇದನ್ನು ಭಾರತೀಯ ನ್ಯಾಯ ಸಂಹಿತಾ 2023 ಬದಲಾಯಿಸಲಿದೆ.
IPC, CrPC
IPC, CrPC

ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) 1860, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) 1973 ಮತ್ತು ಭಾರತೀಯ ಸಾಕ್ಷ್ಯ ಕಾಯಿದೆ 1872 ಅನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಭಾರತೀಯ ನ್ಯಾಯ ಸಂಹಿತೆ 2023 ಮಸೂದೆ ಮಂಡನೆ ಮಾಡಿದೆ. ಗೃಹ ಸಚಿವ ಅಮಿತ್‌ ಶಾ ಅವರು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದರು.

ಬ್ರಿಟಿಷರು 1860ರಲ್ಲಿ ಐಪಿಸಿ ರೂಪಿಸಿದ್ದು, ಕಳೆದ 160 ವರ್ಷಗಳಿಂದ ದೇಶದಲ್ಲಿ ಅಪರಾಧ ನ್ಯಾಯದಾನ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಇದಕ್ಕೆ ಪರ್ಯಾಯವಾಗಿ ಭಾರತೀಯ ನ್ಯಾಯ ಸಂಹಿತೆ 2023 ಜಾರಿಗೆ ಬರಲಿದೆ.

1973ರಲ್ಲಿ ಸಿಆರ್‌ಪಿಸಿ ಜಾರಿಗೆ ಬಂದಿದ್ದು, ಅದಕ್ಕೆ ಬದಲಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಬರಲಿದೆ. 1872ರ ಭಾರತೀಯ ಸಾಕ್ಷ್ಯ ಕಾಯಿದೆಗೆ ಬದಲಾಗಿ ಭಾರತೀಯ ಸಾಕ್ಷ್ಯ ಮಸೂದೆ 2023 ಮಂಡಿಸಲಾಗುತ್ತದೆ. 

Attachment
PDF
The Bharatiya Nyaya Sanhita 2023.pdf
Preview
Attachment
PDF
The Bharatiya Nagarik Suraksha Sanhita 2023.pdf
Preview
Attachment
PDF
The Bharatiya Sakshya Bill 2023.pdf
Preview

Related Stories

No stories found.
Kannada Bar & Bench
kannada.barandbench.com