ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ವಿಜಯಕುಮಾರ್‌ ಪಾಟೀಲ್, ರಾಜೇಶ್‌ ರೈ ನೇಮಕ

Vijaykumar Adagouda Patil
Vijaykumar Adagouda Patil

ರಾಜ್ಯ ಸರ್ಕಾರದ ವಕೀಲರಾಗಿದ್ದ ವಿಜಯಕುಮಾರ್‌ ಎ. ಪಾಟೀಲ್‌ ಮತ್ತು ವಕೀಲ ರಾಜೇಶ್‌ ರೈ ಕಲ್ಲಂಗಳ ಅವರನ್ನು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ನೇಮಿಸಿ ಕೇಂದ್ರ ಸರ್ಕಾರವು ಸೋಮವಾರ ಅಧಿಸೂಚನೆ ಹೊರಡಿಸಿದೆ.

ವಕೀಲ ತಾಜಾಲಿ ಮೌಲಾಸಾಬ್‌ ನಡಾಫ್‌ ಅವರ ಹೆಸರನ್ನೂ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಜನವರಿ 19ರಂದು ಶಿಫಾರಸ್ಸು ಮಾಡಿತ್ತು. ಆದರೆ, ತಾಜಾಲಿ ಅವರ ಹೆಸರನ್ನು ಸರ್ಕಾರವು ಅಧಿಸೂಚನೆಯಲ್ಲಿ ಸೇರ್ಪಡೆ ಮಾಡಿಲ್ಲ.

Also Read
ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳ ಹುದ್ದೆಗೆ ಮೂವರು ವಕೀಲರ ಹೆಸರು ಶಿಫಾರಸ್ಸು ಮಾಡಿದ ಕೊಲಿಜಿಯಂ

ಕರ್ನಾಟಕ ಹೈಕೋರ್ಟ್‌ನಲ್ಲಿ ಒಟ್ಟು 62 ನ್ಯಾಯಮೂರ್ತಿಗಳ ಹುದ್ದೆಗಳಿದ್ದು, ಇಬ್ಬರು ನ್ಯಾಯಮೂರ್ತಿಗಳ ನೇಮಕಾತಿಯೊಂದಿಗೆ ಪ್ರಸ್ತುತ 49 ಹುದ್ದೆಗಳು ಭರ್ತಿಯಾದಂತಾಗಿದೆ. 13 ಹುದ್ದೆಗಳು ಖಾಲಿ ಇವೆ.

Kannada Bar & Bench
kannada.barandbench.com