ಕೋವಿಡ್ ಪೀಡಿತರಿಗೆ ಮತ್ತೆ ನಾಗರಿಕ ಸೇವಾ ಮುಖ್ಯ ಪರೀಕ್ಷೆ ನೀಡುವಂತೆ ಸುಪ್ರೀಂನಲ್ಲಿ ಮನವಿ: ಕೇಂದ್ರ ವಿರೋಧ [ಚುಟುಕು]
ramesh sogemane

ಕೋವಿಡ್ ಪೀಡಿತರಿಗೆ ಮತ್ತೆ ನಾಗರಿಕ ಸೇವಾ ಮುಖ್ಯ ಪರೀಕ್ಷೆ ನೀಡುವಂತೆ ಸುಪ್ರೀಂನಲ್ಲಿ ಮನವಿ: ಕೇಂದ್ರ ವಿರೋಧ [ಚುಟುಕು]

Published on

2022ರ ಜನವರಿಯಲ್ಲಿ ನಡೆದ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯಲ್ಲಿ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.

ಇಂತಹ ಅವಕಾಶ ನೀಡಿದರೆ ಬೇರೆ ವರ್ಗದ ಅಭ್ಯರ್ಥಿಗಳೂ ಕೂಡ ಇಂತಹುದೇ ಬೇಡಿಕೆ ಇಡುತ್ತಾರೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಸಿ ಎ ಪರೀಕ್ಷೆಯಲ್ಲಿ ಹೀಗೆ ಮತ್ತೆ ಅವಕಾಶ ನೀಡದ ಹೈಕೋರ್ಟ್‌ ಒಂದರ ತೀರ್ಪನ್ನು ಕೇಂದ್ರ ಉಲ್ಲೇಖಿಸಿದೆ. ಪರೀಕ್ಷೆ ಆಯೋಜಿಸುವ ಯುಪಿಎಸ್‌ಸಿ ಕೂಡ ಹಿಂದಿನ ವಿಚಾರಣೆ ವೇಳೆ ಈ ಕೋರಿಕೆಗೆ ಆಕ್ಷೇಪ ಎತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com