84 ದಿನಗಳ ಮೊದಲು ಕೋವಿಶೀಲ್ಡ್ ಎರಡನೇ ಡೋಸ್: ಕೇರಳ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಕೇಂದ್ರ ಸರ್ಕಾರ

ಕೋವಿಶೀಲ್ಡ್ ಲಸಿಕೆ ಪಡೆಯುವ ಗಡುವಿನ ಸಂಬಂಧ ಕೇರಳ ಹೈಕೋರ್ಟ್ ಏಕಸದಸ್ಯ ಪೀಠ ಇತ್ತೀಚೆಗೆ ನೀಡಿದ್ದ ತೀರ್ಪನ್ನು ಕೇಂದ್ರ ಸರ್ಕಾರ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿದೆ.
vaccine, Kerala high court
vaccine, Kerala high court

ಹಣಪಾವತಿಸಿ ಕೋವಿಶೀಲ್ಡ್‌ ಪಡೆದವರಿಗೆ ಮೊದಲ ಡೋಸ್‌ ಪಡೆದ 84 ದಿನಗಳು ಮೀರದಂತೆ ಪ್ರಥಮ ಡೋಸ್‌ ಪಡೆದ ನಾಲ್ಕು ವಾರಗಳ ನಂತರ ಯಾವ ಸಮಯದಲ್ಲಿ ಎರಡನೇ ಡೋಸ್ ಪಡೆಯಬೇಕು ಎಂದು ಆಯ್ಕೆ ಮಾಡುವ ಹಕ್ಕಿದೆ ಎಂಬುದಾಗಿ ಕೇರಳ ಹೈಕೋರ್ಟ್‌ನ ನ್ಯಾ. ಪಿ ಬಿ ಸುರೇಶ್‌ ಕುಮಾರ್‌ ನೇತೃತ್ವದ ಏಕಸದಸ್ಯ ಪೀಠ ಇತ್ತೀಚೆಗೆ ತೀರ್ಪು ನೀಡಿತ್ತು. ಏಕಸದಸ್ಯ ಪೀಠದ ಈ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದೆ.

ಮೇಲ್ಮನವಿಯ ಪ್ರಮುಖಾಂಶಗಳು

  • ಸರ್ಕಾರದ ನೀತಿಯಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸುವುದಿಲ್ಲ ಎಂದು ಈಗಾಗಲೇ ಇತ್ಯರ್ಥವಾಗಿರುವ ನಿರ್ಧಾರಕ್ಕೆ ಏಕಸದಸ್ಯ ಪೀಠ ನೀಡಿರುವ ತೀರ್ಪು ವಿರುದ್ಧವಾಗಿದೆ.

  • ಇದಕ್ಕೆ ಅನುಮತಿಸಿದರೆ ಲಸಿಕೆ ನೀಡುವ ರಾಷ್ಟ್ರೀಯ ನೀತಿ ನಿಷ್ಫಲವಾಗುತ್ತದೆ. ಬಹುದೊಡ್ಡ ವಲಯದಲ್ಲಿ ಪೂರ್ವಗ್ರಹಕ್ಕೆ ಕಾರಣವಾಗಲಿದೆ.

  • ರೂಪುಗೊಳ್ಳುತ್ತಿದ್ದ ವೈಜ್ಞಾನಿಕ ಪುರಾವೆಗಳನ್ನು ಆಧರಿಸಿ ರಾಷ್ಟ್ರೀಯ ಕೋವಿಡ್‌ 19 ಲಸಿಕೆ ನೀಡಿಕೆ ತಜ್ಞರ ಗುಂಪಿನ (NEGVAC) ಸಲಹೆ ಆಧರಿಸಿ ಲಸಿಕೆ ನೀಡಿಕೆ ಅವಧಿಯ ಅಂತರವನ್ನು ಹಲವು ಬಾರಿ ಪರಿಷ್ಕರಿಸಲಾಗಿದೆ.

  • ಎರಡು ಡೋಸ್‌ಗಳ ನಡುವೆ 84 ದಿನಗಳ ಅಂತರವಿದ್ದರೆ ವೈರಸ್‌ನಿಂದ ಉತ್ತಮ ರಕ್ಷಣೆ ಪಡೆಯುವುದು ಸಾಧ್ಯ ಎಂಬ NEGVACನ ತಾಂತ್ರಿಕ ಅಭಿಪ್ರಾಯದ ಮೇಲೆ ಈಗಿನ ಲಸಿಕೆ ನೀಡಿಕೆ ಅವಧಿಯ ಅಂತರವನ್ನು ನಿಗದಿಪಡಿಸಲಾಗಿದೆ.

  • ನ್ಯಾಷನಲ್ ಕೋವಿಡ್ -19 ಲಸಿಕೆ ಕಾರ್ಯಕ್ರಮವು ವಿಶ್ವದಲ್ಲೇ ಅತ್ಯಂತ ದೊಡ್ಡದಾಗಿದ್ದು, ವೈಜ್ಞಾನಿಕ ಮತ್ತು ಡೊಮೇನ್ ತಜ್ಞರು ಮಾರ್ಗದರ್ಶನ ಮಾಡುತ್ತಿದ್ದಾರೆ.

  • ಏಕಸದಸ್ಯ ಪೀಠದ ಆದೇಶಕ್ಕೆ ಅನುಮತಿ ನೀಡಿದರೆ ಅಕಾಲಿಕವಾಗಿ ಹೆಚ್ಚಿನ ಪ್ರಮಾಣದ ಲಸಿಕೆ ನೀಡಬೇಕಾಗುತ್ತದೆ ಅದು ಸೂಕ್ತವಲ್ಲದ ನಿರ್ವಹಣೆಗೆ ಕಾರಣವಾಗಲಿದ್ದು ಇನ್ನೂ ಲಸಿಕೆಯ ನಿರೀಕ್ಷೆಯಲ್ಲಿರುವ ಜನರ ಮೇಲೆ ಪರಿಣಾಮ ಬೀರಬಹುದು.

  • ಅರ್ಜಿದಾರರು ಮತ್ತು ಅಂತಹುದೇ ಕೈಗಾರಿಕಾ ಸಮೂಹಗಳ ಹಕ್ಕುಗಳನ್ನು ಸರ್ಕಾರ ಗೌರವಿಸಬೇಕು ಎಂದರೆ ಆಗ ಲಸಿಕೆ ನಿರ್ವಹಣೆಯ ನಿಯಂತ್ರಿತ ಮಾದರಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ.

  • ದೊಡ್ಡ ಮಟ್ಟದ ಸಾರ್ವಜನಿಕ ಹಿತಾಸಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಕಾರಣದ ಹಿನ್ನೆಲೆಯಲ್ಲಿ ಶೀಘ್ರ ರಕ್ಷಣೆ ಪಡೆಯುವ ವ್ಯಕ್ತಿಯ ಹಕ್ಕನ್ನು ಉತ್ತಮ ರಕ್ಷಣೆಯ ಆಯ್ಕೆಯ ಜೊತೆಗೆ ಹೋಲಿಸಿ ನೋಡಬೇಕು.

  • ವೈಜ್ಞಾನಿಕವಾಗಿ ನಿರ್ಧರಿಸಿದ 12 ವಾರಗಳ ಮೊದಲು ಎರಡನೇ ಡೋಸ್‌ ಪಡೆಯುವ ಯಾವುದೇ ಒತ್ತಾಯ ವಾಸ್ತವವಾಗಿ ಪ್ರತಿರೋಧಕತೆಯ ಬೆಳವಣಿಗೆಯನ್ನು ತಡೆಯುತ್ತದೆ.

ಈ ಅಂಶಗಳ ಆಧಾರದಲ್ಲಿ ಏಕಸದಸ್ಯ ಪೀಠದ ಆದೇಶ ಕಾರ್ಯಗತಗೊಳಿಸುವುದನ್ನು ತಡೆಯಬೇಕೆಂದು ಕೇಂದ್ರ ಸರ್ಕಾರ ಮನವಿ ಮಾಡಿದೆ.

Related Stories

No stories found.
Kannada Bar & Bench
kannada.barandbench.com