ಕರ್ನಾಟಕ, ತೆಲಂಗಾಣ ಹೈಕೋರ್ಟ್‌ಗಳಿಗೆ ಎಎಸ್‌ಜಿಗಳಾಗಿ ಅರವಿಂದ್‌ ಕಾಮತ್‌, ನರಸಿಂಹ ಶರ್ಮಾರನ್ನು ನೇಮಿಸಿದ ಕೇಂದ್ರ

ನೇಮಕಾತಿಗಳು ಮೂರು ವರ್ಷಗಳು ಅಥವಾ ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿವೆ ಎಂದು ಹೇಳಲಾಗಿದೆ.
ಕರ್ನಾಟಕ, ತೆಲಂಗಾಣ ಹೈಕೋರ್ಟ್‌ಗಳಿಗೆ ಎಎಸ್‌ಜಿಗಳಾಗಿ ಅರವಿಂದ್‌ ಕಾಮತ್‌, ನರಸಿಂಹ ಶರ್ಮಾರನ್ನು ನೇಮಿಸಿದ ಕೇಂದ್ರ

ಕರ್ನಾಟಕ (ಬೆಂಗಳೂರು ಪೀಠ) ಮತ್ತು ತೆಲಂಗಾಣ ಹೈಕೋರ್ಟ್‌ಗಳಿಗೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ಗಳಾಗಿ ಇಬ್ಬರು ಹಿರಿಯ ವಕೀಲರನ್ನು ಮಂಗಳವಾರ ಕೇಂದ್ರ ಸರ್ಕಾರ ನೇಮಕ ಮಾಡಿದೆ.

ಕರ್ನಾಟಕ ಹೈಕೋರ್ಟ್‌ನ ಬೆಂಗಳೂರು ಪೀಠದಲ್ಲಿ ಹಿರಿಯ ವಕೀಲ ಅರವಿಂದ್‌ ಕಾಮತ್‌ ಅವರು ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿ ಕೆಲಸ ಮಾಡಲಿದ್ದಾರೆ. ಹೈದರಾಬಾದ್‌ನಲ್ಲಿರುವ ತೆಲಂಗಾಣ ಹೈಕೋರ್ಟ್‌ನಲ್ಲಿ ಹಿರಿಯ ವಕೀಲ ಬಿ ನರಸಿಂಹ ಶರ್ಮಾ ಅವರು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಲಿದ್ದಾರೆ ಎಂದು ಕೇಂದ್ರ ಕಾನೂನು ಇಲಾಖೆಯು ಅಧಿಸೂಚನೆ ಹೊರಡಿಸಿದೆ.  

ನೇಮಕಾತಿಗಳು ಮೂರು ವರ್ಷಗಳು ಅಥವಾ ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿವೆ ಎಂದು ಹೇಳಲಾಗಿದೆ.

Related Stories

No stories found.
Kannada Bar & Bench
kannada.barandbench.com