
ಕೇರಳ ಹೈಕೋರ್ಟ್ ನ್ಯಾಯಮೂರ್ತಿ ದಿನೇಶ್ ಕುಮಾರ್ ಸಿಂಗ್ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಲಾಗಿದೆ.
2023ರಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾ. ಸಿಂಗ್ ಅವರನ್ನು ಕೇರಳ ಹೈಕೋರ್ಟ್‌ಗೆ ವರ್ಗಾಯಿಸಿತ್ತು. ಹೀಗೆ ಮಾಡುವ ಮೂಲಕ ತನ್ನ ಮಾತೃ ಹೈಕೋರ್ಟ್‌ನಲ್ಲಿ ಮುಂದುವರಿಸುವಂತೆ ಅಥವಾ ಸಮೀಪದ ತನ್ನ ಇಚ್ಛೆಯ ಹೈಕೋರ್ಟ್‌ಗೆ ವರ್ಗಾಯಿಸುವಂತೆ ನ್ಯಾ. ಸಿಂಗ್ ಅವರ ಕೋರಿಕೆಯನ್ನು ಕೊಲಿಜಿಯಂ ತಿರಸ್ಕರಿಸಿದೆ.
ಅಲಾಹಾಬಾದ್ ಹೈಕೋರ್ಟ್‌ನ ಅವಾಧ್ ವಕೀಲರ ಸಂಘದ ಕಾರ್ಯಕಾರಿ ಸಮಿತಿಯು ನ್ಯಾ. ಸಿಂಗ್ ಅವರ ಗೌರವಾರ್ಥ ಬೀಳ್ಕೊಡುಗೆ ಆಯೋಜಿಸಲು ನಿರಾಕರಿಸಿದೆ. ನ್ಯಾ. ಸಿಂಗ್ ಅವರು ತಮ್ಮ ಅವಧಿಯಲ್ಲಿ ವಕೀಲರ ಕಡೆಗಿನ ಅವರ ನಡತೆಯು ಅಗೌರವಯುತವಾಗಿತ್ತು ಎಂದು ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸದಸ್ಯರು ಹೇಳಿದ್ದಾರೆ.