ಸಂವಿಧಾನ ಮೂಲರಚನೆಯ ಉಲ್ಲಂಘನೆ ಶಾಸನ ರದ್ದತಿಗೆ ಆಧಾರವಾಗದು: ನ್ಯಾಯಮಂಡಳಿ ಸುಧಾರಣಾ ಕಾಯಿದೆ ಸಮರ್ಥಿಸಿಕೊಂಡ ಕೇಂದ್ರ

ಕಾಯಿದೆಯ ಸಾಂವಿಧಾನಿಕತೆ ಪ್ರಶ್ನಿಸಿ ಮದ್ರಾಸ್ ವಕೀಲರ ಸಂಘ, ಜೈರಾಮ್ ರಮೇಶ್ ಮತ್ತಿತರರು ಸಲ್ಲಿಸಿದ ಅರ್ಜಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿತು.
ಸಂವಿಧಾನ ಮೂಲರಚನೆಯ ಉಲ್ಲಂಘನೆ ಶಾಸನ ರದ್ದತಿಗೆ ಆಧಾರವಾಗದು: 
ನ್ಯಾಯಮಂಡಳಿ ಸುಧಾರಣಾ ಕಾಯಿದೆ ಸಮರ್ಥಿಸಿಕೊಂಡ ಕೇಂದ್ರ

ನ್ಯಾಯಮಂಡಳಿ ಸುಧಾರಣಾ ಕಾಯಿದೆ- 2021ರ ಸಿಂಧುತ್ವವನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದ್ದು ಸಂವಿಧಾನದ ಮೂಲ ರಚನೆಯ ಉಲ್ಲಂಘನೆಯಾಗಿದ್ದರೂ ಅದು ಶಾಸನ ರದ್ದುಗೊಳಿಸಲು ಆಧಾರವಾಗಬಾರದು ಎಂದು ಹೇಳಿದೆ.

ಸಂವಿಧಾನದ ಮೂಲ ರಚನೆಯ ತತ್ವ ಉಲ್ಲಂಘನೆ ವಿಚಾರವನ್ನು ಸಂವಿಧಾನದ ತಿದ್ದುಪಡಿ ರದ್ದುಗೊಳಿಸಲು ಬಳಸಬಹುದೇ ವಿನಾ ಶಾಸನ ರದ್ದುಗೊಳಿಸಲು ಅಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ವಿವರಿಸಿದೆ.

ಕಾಯಿದೆಯ ಸಾಂವಿಧಾನಿಕತೆ ಪ್ರಶ್ನಿಸಿ ಮದ್ರಾಸ್ ವಕೀಲರ ಸಂಘ, ಜೈರಾಮ್ ರಮೇಶ್ ಮತ್ತಿತರರು ಸಲ್ಲಿಸಿದ ಅರ್ಜಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿತು. ಸಂವಿಧಾನದ 14, 21 ಹಾಗೂ 50ನೇ ವಿಧಿಯನ್ನು ನ್ಯಾಯಮಂಡಳಿ ಸುಧಾರಣಾ ಕಾಯಿದೆ-2021ರ ಕಲಂ 3 (7), 5 ಮತ್ತು 7 (1) ಹಾಗೂ ಸೆಕ್ಷನ್ 3 (1) ಉಲ್ಲಂಘಿಸಿವೆ ಎಂದು ಅರ್ಜಿಗಳು ಪ್ರತಿಪಾದಿಸಿದ್ದವು.

ಸರ್ಕಾರದ ಪ್ರತಿಕ್ರಿಯೆಯ ಪ್ರಮುಖ ಅಂಶಗಳು:

  • ಸಂವಿಧಾನದ ತಿದ್ದುಪಡಿಯ ಸಿಂಧುತ್ವ ಪರೀಕ್ಷಿಸಲು ಮಾತ್ರ ಸಂವಿಧಾನದ ಮೂಲ ರಚನೆಯನ್ನು ಬಳಸಬಹುದೇ ವಿನಾ ಶಾಸನದ ಸಿಂಧುತ್ವದ ಪ್ರಶ್ನೆ ಬಂದಾಗ ಅದಕ್ಕೆ ಯಾವುದೇ ಪ್ರಸ್ತುತತೆ ಇರದು.

  • ಈ ಅಂಶವನ್ನು ಎರಡು ಸಾಂವಿಧಾನಿಕ ಪೀಠದ ತೀರ್ಪುಗಳು ಮತ್ತು ಸುಪ್ರೀಂಕೋರ್ಟ್‌ನ 7 ನ್ಯಾಯಾಧೀಶರ ಪೀಠ ಈಗಾಗಲೇ ಹೇಳಿದೆ.

  • ನ್ಯಾಯಾಂಗದ ಸ್ವಾತಂತ್ರ್ಯ ಎಂಬುದು ಕಾನೂನುಗಳನ್ನು ಪರೀಕ್ಷಿಸಲು ಬಳಸಬಹುದಾದ ಮೈದಾನವಲ್ಲ.

  • ಯಾವುದೇ ಕಾರಣಕ್ಕೆ ನ್ಯಾಯಾಂಗದ ಸ್ವಾತಂತ್ರ್ಯವನ್ನು ಆಧಾರವಾಗಿ ಪರಿಗಣಿಸಿದರೆ ಸ್ವಾತಂತ್ರ್ಯ ತೆಗೆದುಹಾಕಲಾಗಿದೆ ಎಂದು ಘೋಷಿಸುವ ಮೂಲಕ ನಿಬಂಧನೆಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಅದಕ್ಕಿಂತ ಹೆಚ್ಚಾಗಿ ಶಾಸನಗಳನ್ನು ಪರೀಕ್ಷೆಗೆ ಒಳಪಡಿಸಲು ನ್ಯಾಯಾಂಗದ ಸ್ವಾತಂತ್ರ್ಯ ಆಧಾರವಾಗಬಾರದು.

  • ನೀತಿಯ ಸಮಸ್ಯೆಗಳನ್ನು ಒಳಗೊಂಡಿದ್ದರಿಂದ ಮದ್ರಾಸ್ ವಕೀಲರ ಸಂಘ IV ತೀರ್ಪಿನಲ್ಲಿ ರದ್ದುಗೊಳಿಸಲಾದ ಸುಗ್ರೀವಾಜ್ಞೆಯ ಪ್ರತಿಯೊಂದು ಅಂಶವನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿಯಬೇಕಿತ್ತು ಏಕೆಂದರೆ ಅದು ನೀತಿಯ ಸಮಸ್ಯೆಗಳನ್ನು ಒಳಗೊಂಡಿದ್ದು ಇದರಿಂದ ರಾಜ್ಯದ ಮೂರು ಅಂಗಗಳ ನಡುವೆ ಒಡನಾಟವಿರಬಹುದು ಮತ್ತು ಸಂಸತ್ತಿನೊಳಗೆ ಗೊಂದಲ ಇಲ್ಲದಿರಬಹುದು. ಈ ಅಂಶಗಳನ್ನು ನ್ಯಾಯಾಂಗದ ಸ್ವಾತಂತ್ರ್ಯದೊಂದಿಗೆ ತಳಕು ಹಾಕಲಾಗದು.

  • ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ಯಾವುದು ಉತ್ತಮ ನೀತಿ ಎಂದು ನಿರ್ಧರಿಸುವ ವಿಶೇಷ ನ್ಯಾಯಿಕವ್ಯಾಪ್ತಿಯನ್ನು ಅಧಿಕಾರ ವಿಭಜನೆಯಡಿ ಸಂಸತ್ತು ಹಾಗೂ ಕಾರ್ಯಾಂಗಕ್ಕೆ ನೀಡಲಾಗಿರುವಾಗ ಅದರಲ್ಲಿ ನ್ಯಾಯಾಂಗವು ಮಧ್ಯಪ್ರವೇಶಿಸಿ ತಾನು ಉತ್ತಮ ಎಂದು ಭಾವಿಸಿದ ನೀತಿಯನ್ನು ಬದಲಿಯಾಗಿ ಸೇರಿಸಿದರೆ ಅದು ಅಧಿಕಾರ ವಿಭಜನೆಯ ತತ್ವವನ್ನೇ ಉಲ್ಲಂಘಿಸಿದಂತಾಗುತ್ತದೆ.

  • ಶುದ್ಧ ನೀತಿನಿರೂಪಣೆಯ ಭಾಗವಾಗಿ ಸಂಸತ್ತು ಮತ್ತು ಕಾರ್ಯಾಂಗವು ಮಾಡಿದ ಕಾನೂನು ಮತ್ತು ಶಾಸನ ನಿಬಂಧನೆಗಳನ್ನು "ಅವು ಸಂವಿಧಾನದ ಯಾವುದೇ ನಿಬಂಧನೆಗಳು ಹಾಗೂ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಿರುವಾಗ, ಸಂಪೂರ್ಣ ಸಕ್ಷಮವಾಗಿರುವಾಗಲೂ ಸಹ ನ್ಯಾಯಾಂಗದ ಸ್ವಾತಂತ್ರ್ಯವನ್ನು ಬಳಸಿ ಅಸಿಂಧುಗೊಳಿಸುವುದು" ನೋವುಂಟು ಮಾಡುತ್ತದೆ.

  • ಉದಾಹರಣೆಗೆ ನ್ಯಾಯಾಧೀಶರ ಸದಸ್ಯರಾಗಿ ನೇಮಕಗೊಳ್ಳಲು ಅರ್ಹರಾಗಿರುವ ಇತರ ವೃತ್ತಿಪರರಿಗೆ ಅದೇ ಪ್ರಯೋಜನ ವಿಸ್ತರಿಸದೆ ವಕೀಲರಂತಹ ವೃತ್ತಿಪರರ ಸಂದರ್ಭದಲ್ಲಿ ಅನುಭವವನ್ನು ಹತ್ತು ವರ್ಷಗಳಿಗೆ ಸೀಮಿತಗೊಳಿಸುವುದು ಮೇಲ್ನೋಟಕ್ಕೆ ತರತಮದಿಂದ ಕೂಡಿದ್ದು ಅದು ರದ್ದುಗೊಳಿಸಲು ಅರ್ಹವಾಗಿದೆ.

  • MBA-Ill ಮತ್ತು MEA-IYನಲ್ಲಿ ನ್ಯಾಯಾಲಯವು ವ್ಯಕ್ತಪಡಿಸಿದ ವಿವಿಧ ಅಭಿಪ್ರಾಯಗಳನ್ನು ಒಳಗೊಳ್ಳಲು ಸಂಸತ್ತು ತನ್ನನ್ನು ತಾನೇ ವಿಸ್ತರಿಸಿಕೊಂಡಿದೆ ಎಂದೂ ಉತ್ತರದಲ್ಲಿ ಹೇಳಲಾಗಿದೆ.

Related Stories

No stories found.
Kannada Bar & Bench
kannada.barandbench.com