ಪರಿಶಿಷ್ಟ ಜಾತಿ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ಆರೋಪಿ ಪಿಎಸ್ಐ ಅರ್ಜುನ್ ಹೊರಕೇರಿ ಬಂಧನ

ಯುವಕನ ಪರವಾಗಿ ಮೊಹಮ್ಮದ್ ಆಸೀಫ್ ಸಾದುಲ್ಲಾ, ಎಸ್. ಶಿವಮಣಿದನ್ ಹಾಗೂ ಬಸವಪ್ರಸಾದ್ ಕುನಾಲೆ ವಾದಿಸಿದ್ದರು. ರಾಜ್ಯ ಹೈಕೋರ್ಟ್ ಅರ್ಜುನ್ ಅವರಿಗೆ ಈ ಹಿಂದೆ ಜಾಮೀನು ನಿರಾಕರಿಸಿತ್ತು.
Accused PSI Arjun Horakeri
Accused PSI Arjun Horakeri
Published on

ಪರಿಶಿಷ್ಟ ಜಾತಿಗೆ ಸೇರಿದ ಯುವಕನೊಬ್ಬನನ್ನು ಠಾಣೆಗೆ ಎಳೆದೊಯ್ದು ಅಮಾನವೀಯವಾಗಿ ಹಲ್ಲೆ ನಡೆಸಿ, ಮೂತ್ರ ನೆಕ್ಕಿಸಿದ ಪ್ರಕರಣದಲ್ಲಿ ಆರೋಪಿಯಾಗಿ ಅಮಾನತುಗೊಂಡ ಚಿಕ್ಕಮಗಳೂರು ಜಿಲ್ಲೆ ಗೋಣಿಬೀಡು ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ ಕೆ. ಅರ್ಜುನ್ ಹೊರಕೇರಿ ಅವರನ್ನು ಸಿಐಡಿ ಪೊಲೀಸರು ಬುಧವಾರ ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Also Read
[ಮೂತ್ರ ಕುಡಿಸಿದ ಪ್ರಕರಣ] ಆರೋಪಿ ಪಿಎಸ್ಐ ಅರ್ಜುನ್ ನಿರೀಕ್ಷಣಾ ಜಾಮೀನಿಗೆ ಅರ್ಹರಲ್ಲ ಎಂದ ಪಬ್ಲಿಕ್ ಪ್ರಾಸಿಕ್ಯೂಟರ್

ಪಿಎಸ್‌ಐ ಅರ್ಜುನ್‌ ಅವರ ಜಾಮೀನು ಅರ್ಜಿ ಚಿಕ್ಕ,ಮಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ತಿರಸ್ಕೃತವಾಗಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜುನ್‌ ಪರವಾಗಿ ಹಿರಿಯ ವಕೀಲ ಸಿ ಎಚ್‌ ಹನುಮಂತರಾಯ ವಾದ ಮಂಡಿಸಿದ್ದರು. ಯುವಕನ ಪರವಾಗಿ ಮೊಹಮ್ಮದ್‌ ಆಸೀಫ್‌ ಸಾದುಲ್ಲಾ, ಎಸ್‌. ಶಿವಮಣಿದನ್‌ ಹಾಗೂ ಬಸವಪ್ರಸಾದ್‌ ಕುನಾಲೆ ವಾದಿಸಿದ್ದರು. ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರಿದ್ದ ಹೈಕೋರ್ಟ್‌ ಏಕಸದಸ್ಯ ಪೀಠ ಅರ್ಜುನ್‌ ಅವರಿಗೆ ಜಾಮೀನು ನಿರಾಕರಿಸಿತ್ತು.

Also Read
ಮೂತ್ರ ನೆಕ್ಕಿಸಿದ ಪ್ರಕರಣ: ಆರೋಪಿ ಪಿಎಸ್ಐ ಅರ್ಜುನ್ ಹೊರಕೇರಿ ಅರ್ಜಿ ವಜಾಗೊಳಿಸಿದ ರಾಜ್ಯ ಹೈಕೋರ್ಟ್‌

ಇಷ್ಟಾದರೂ ತಲೆ ಮರೆಸಿಕೊಂಡಿದ್ದ ಅರ್ಜುನ್‌ ಅವರನ್ನು ಬಂಧಿಸದೇ ಇರುವುದಕ್ಕೆ ಜಿಲ್ಲೆಯಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಕೆಲವು ಸಂಘಟನೆಗಳು ಮೂಡಿಗೆರೆ ತಾಲೂಕು ಬಂದ್‌ಗೆ ಒತ್ತಾಯಿಸಿದ್ದವು. ಈ ಎಲ್ಲಾ ಬೆಳವಣಿಗೆಗಳ ನಡುವೆ ಬುಧವಾರ ಸಿಐಡಿ ಪೊಲೀಸರು ಅರ್ಜುನ್‌ ಅವರನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.

Kannada Bar & Bench
kannada.barandbench.com