ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದ್ದರೂ ವಿವಾದದ ಬಗ್ಗೆ ನಾಗರಿಕರು ಪ್ರತಿಭಟನೆ ನಡೆಸಬಹುದು: ಆಂಧ್ರ ಹೈಕೋರ್ಟ್ [ಚುಟುಕು]

Andhra Pradesh High Court

Andhra Pradesh High Court

Published on

ಸಾಂವಿಧಾನಿಕ ನ್ಯಾಯಾಲಯದಲ್ಲಿ ಈಗಾಗಲೇ ಬಾಕಿ ಉಳಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುವ ಹಕ್ಕು ನಾಗರಿಕರಿಗೆ ಇದೆ ಎಂದು ಆಂಧ್ರಪ್ರದೇಶ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ.

“ನ್ಯಾಯ ನಿರ್ಣಯಕ್ಕೆ ನಿರ್ಧರಿಸಲ್ಪಟ್ಟ ಮಾನದಂಡಗಳನ್ನು ಆಧರಿಸಿ ನಾವು ವಿವಾದಿತ ವಿಷಯವನ್ನು ಕಾನೂನು ಕಣ್ಣಿನಿಂದ ಮಾತ್ರ ಪರಿಶೀಲಿಸುತ್ತೇವೆ. ಆದರೆ, ಸಮಸ್ಯೆಯೊಂದ ಬಗ್ಗೆ ಸರ್ಕಾರದ ಗಮನ ಸೆಳೆಯುವುದು ಪ್ರತಿಭಟನೆಯ ಉದ್ದೇಶವಾಗಿರುತ್ತದೆ" ಎಂದು ನ್ಯಾಯಾಲಯ ಹೇಳಿದೆ. ಸಮಸ್ಯೆ ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರೆ ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟಿಸುವುದನ್ನು ನ್ಯಾಯಾಲಯ ತಡೆಯದು ಎಂದು ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಬಿ ಎಸ್ ಭಾನುಮತಿ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Kannada Bar & Bench
kannada.barandbench.com