ವಿದೇಶಗಳು ಭಾರತದ ಮೇಲಿರಿಸಿರುವ ಗೌರವವನ್ನು ಜನತೆ ಸಾಮಾಜಿಕ ಮಾಧ್ಯಮಗಳ ಮೂಲಕ ತಗ್ಗಿಸುತ್ತಿದ್ದಾರೆ: ಮದ್ರಾಸ್ ಹೈಕೋರ್ಟ್

ತಪ್ಪು ಮಾಹಿತಿಯ ಮತ್ತು ವಂಚನೆಯಿಂದ ಕೂಡಿದ ಪೋಸ್ಟ್‌ಗಳ ಕುರಿತ ದೂರುಗಳನ್ನು ಒಂದೆಡೆ ತನಿಖೆ ನಡೆಸಲು ಹಾಗೂ ಪರಿಶೀಲಿಸದ ಸುದ್ದಿಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ವಿಶೇಷ ಘಟಕ ರಚಿಸಲು ಸೂಚಿಸಿದ ನ್ಯಾಯಾಲಯ.
Social Media
Social Media

ಡಿಜಿಟಲ್‌ ಮಾಧ್ಗಮಗಳ ಸೃಷ್ಟಿಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಪರಿಶೀಲನೆ ಮಾಡದೆ, ಮನಸೋಇಚ್ಛೆ ಪೋಸ್ಟ್‌ಗಳನ್ನು ಹರಿಯಬಿಡುವ ಪ್ರವೃತ್ತಿಯಿಂದಾಗಿ ದೇಶದ ವಿಶ್ವಾಸಾರ್ಹತೆಗೆ ಕುಂದಾಗುತ್ತಿದ್ದು, ಪ್ರಪಂಚದೆಲ್ಲೆಡೆ ಇತರ ದೇಶಗಳು ʼಭಾರತ ಮಾತೆʼಯ ಬಗ್ಗೆ ಇರಿಸಿಕೊಂಡಿರುವ ಗೌರವಕ್ಕೆ ಚ್ಯುತಿಯಾಗುತ್ತದೆ ಎಂದು ಮದ್ರಾಸ್‌ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ.

ತಪ್ಪು ಮಾಹಿತಿಯ ಮತ್ತು ವಂಚನೆಯಿಂದ ಕೂಡಿದ ಪೋಸ್ಟ್‌ಗಳ ಕುರಿತ ದೂರುಗಳನ್ನು ಒಂದೆಡೆ ತನಿಖೆ ನಡೆಸಲು ಹಾಗೂ ಪರಿಶೀಲಿಸದ ಸುದ್ದಿಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ವಿಶೇಷ ಘಟಕ ರಚಿಸುವಂತೆ ತಮಿಳುನಾಡು ಸರ್ಕಾರಕ್ಕೆ ನ್ಯಾಯಮೂರ್ತಿ ಎಂ ದಂಡಪಾಣಿ ಅವರು ಅಕ್ಟೋಬರ್ 18ರಂದು ಹೊರಡಿಸಿದ ಆದೇಶದಲ್ಲಿ ನಿರ್ದೇಶನ ನೀಡಿದ್ದಾರೆ.

“ಸಂವಿಧಾನ ತಮಗೆ ನೀಡಿರುವ ಹಕ್ಕಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಅವುಗಳನ್ನು ದುರುಪಯೋಗ ಪಡಿಸಿಕೊಳ್ಳುವ ನಾಗರಿಕರು ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ಹಾನಿ ಉಂಟು ಮಾಡುತ್ತಿದ್ದಾರೆ. ದೇಶದಲ್ಲಿರುವವರು ಮತ್ತು ಪ್ರಪಂಚದೆಲ್ಲೆಡೆಯ ಇತರೆ ದೇಶಗಳು ಭಾರಮಾತೆಯ ಮೇಲೆ ಇರಿಸಿರುವ ವಿಶ್ವಾಸ ಮತ್ತು ಗೌರವವನ್ನು ಕುಂದಿಸುತ್ತಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.

Also Read
ಸಾಮಾಜಿಕ ಮಾಧ್ಯಮ ಖಾತೆಗಳ ಶಾಶ್ವತ ಅಮಾನತು ಮಾರ್ಗಸೂಚಿ ಬರಲಿದೆ: ದೆಹಲಿ ಹೈಕೋರ್ಟ್‌ಗೆ ಕೇಂದ್ರದ ಮಾಹಿತಿ

“ಸರ್ಕಾರಿ ಅಧಿಕಾರಿಗಳು, ಸಾಂವಿಧಾನಿಕ ಹುದ್ದೆಯಲ್ಲಿರುವವರು, ಜನಸಾಮಾನ್ಯರ  ಮಾನನಷ್ಟ ಮಾಡುವ ಸಲುವಾಗಿ "ಅಸಹ್ಯಕರ ಮತ್ತು ಅವಹೇಳನಕಾರಿ" ಸಂದೇಶಗಳನ್ನು ಅಥವಾ  ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್‌ ಮಾಡುವ ಅಪರಾಧಿಗಳನ್ನು ಪತ್ತೆ ಹಚ್ಚಲು ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಪ್ರತಿ ಪೊಲೀಸ್‌ ಠಾಣೆಗಳಿಗೊಂದರಂತೆ ವಿಶೇಷ ತನಿಖಾ ಘಟಕ ರಚಿಸಬೇಕು” ಎಂದು ತಮಿಳುನಾಡು ಪೊಲೀಸ್‌ ಮಹಾನಿರ್ದೇಶಕರಿಗೆ ಜನವರಿ 2020ರಲ್ಲಿ, ನ್ಯಾಯಾಲಯ ಸೂಚಿಸಿತ್ತು.  

ಅಕ್ಟೋಬರ್ 18ರಂದು  ಪ್ರಕರಣದ ವಿಚಾರಣೆ ನಡೆದಾಗ, ಸಾಮಾಜಿಕ ಮಾಧ್ಯಮಗಳ ಕಣ್ಗಾವಲಿಗಾಗಿ ಉಪಕರಣಗಳನ್ನು ಖರೀದಿಸಲು ಟೆಂಡರ್‌  ಕರೆಯಲಾಗಿದ್ದು ಒಂದು ವಾರದೊಳಗೆ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ತಮಿಳುನಾಡು ಎಲೆಕ್ಟ್ರಾನಿಕ್ಸ್ ಕಾರ್ಪೊರೇಶನ್ ನ್ಯಾಯಾಲಯಕ್ಕೆ ತಿಳಿಸಿತು.

ಈ ಹೇಳಿಕೆಗೆ ಸಮ್ಮತಿ ಸೂಚಿಸಿದ ನ್ಯಾಯಾಲಯ ಅಂತಹ ಉಪಕರಣ ಖರೀದಿಗೆ ಮತ್ತು ವಿಶೇಷ ತಂಡದ ರಚನೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಹೇಳಿತು.

 [ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Order_on_social_media (1).pdf
Preview

Related Stories

No stories found.
Kannada Bar & Bench
kannada.barandbench.com