ನ್ಯಾಯಮೂರ್ತಿಗಳ ಬೀಳ್ಕೊಡುಗೆ: ಸುಪ್ರೀಂ ಕೋರ್ಟ್ ಸಭಾಂಗಣ ಬಳಸಲು ಎಸ್‌ಸಿಬಿಎಗೆ ಅವಕಾಶ ಕಲ್ಪಿಸಿದ ಸಿಜೆಐ [ಚುಟುಕು]

ನ್ಯಾಯಮೂರ್ತಿಗಳ ಬೀಳ್ಕೊಡುಗೆ: ಸುಪ್ರೀಂ ಕೋರ್ಟ್ ಸಭಾಂಗಣ ಬಳಸಲು ಎಸ್‌ಸಿಬಿಎಗೆ ಅವಕಾಶ ಕಲ್ಪಿಸಿದ ಸಿಜೆಐ [ಚುಟುಕು]
A1

ಸೇವೆಯಿಂದ ನಿವೃತ್ತರಾಗಲಿರುವ ನ್ಯಾ. ವಿನೀತ್‌ ಸರಣ್‌ ಅವರ ಬೀಳ್ಕೊಡುಗೆ ಸಮಾರಂಭಕ್ಕಾಗಿ ಸುಪ್ರೀಂ ಕೋರ್ಟ್‌ನ ನೂತನ ಸಭಾಂಗಣ ಬಳಸಲು ಸುಪ್ರೀಂ ಕೋರ್ಟ್ ವಕೀಲರ ಸಂಘಕ್ಕೆ ​​(ಎಸ್‌ಸಿಬಿಎ) ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅನುಮತಿ ನೀಡಿದ್ದಾರೆ.

ಸುಪ್ರೀಂ ಕೋರ್ಟ್‌ ಹುಲ್ಲುಹಾಸಿನ ಬದಲಿಗೆ ಪ್ರಗತಿ ಮೈದಾನದ ಹೊಸ ಹೆಚ್ಚುವರಿ ಕಟ್ಟಡ ಸಿ ಬ್ಲಾಕ್‌ನಲ್ಲಿರುವ ಸಭಾಂಗಣದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲು ವಕೀಲರ ಸಂಘಕ್ಕೆ ಅನುಮತಿ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಸಿಜೆಐ ಅವರಿಗೆ ಎಸ್‌ಸಿಬಿಎ ತನ್ನ ಸುತ್ತೋಲೆಯಲ್ಲಿ ಧನ್ಯವಾದ ತಿಳಿಸಿದೆ. ಹೊಸ ಸಭಾಂಗಣ ಬಳಸಲು ಅನುಮತಿ ಕೋರಿ ಎಸ್‌ಸಿಬಿಎ ಅಧ್ಯಕ್ಷ ವಿಕಾಸ್ ಸಿಂಗ್ ಕಳೆದ ವಾರ ಸಿಜೆಐ ರಮಣ ಅವರಿಗೆ ಪತ್ರ ಬರೆದಿದ್ದರು.

Kannada Bar & Bench
kannada.barandbench.com