ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಮತ್ತು ಅಡ್ವೋಕೇಟ್ಸ್‌ ಆನ್‌ ರೆಕಾರ್ಡ್‌ ನಡುವಿನ ಕ್ರಿಕೆಟ್ ಪಂದ್ಯ ರೋಚಕ ಡ್ರಾ

ಕೊನೆಯ ಎಸೆತದಲ್ಲಿ ಕೇವಲ ಒಂದು ರನ್ ಅಗತ್ಯವಿತ್ತು. ಆಗ ಎಸ್‌ಸಿಎಒಆರ್‌ಎ ತಂಡದ ಬ್ಯಾಟ್ಸ್ಮನ್‌ ನಾಟಕೀಯ ರೀತಿಯಲ್ಲಿ ರನೌಟ್ ಆದದ್ದು ವಕೀಲರ ತಂಡಕ್ಕೆ ಆಘಾತಕಾರಿಯಾಗಿ ಪರಿಣಮಿಸಿತು.
ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಮತ್ತು ಅಡ್ವೋಕೇಟ್ಸ್‌ ಆನ್‌ ರೆಕಾರ್ಡ್‌ ನಡುವಿನ ಕ್ರಿಕೆಟ್ ಪಂದ್ಯ ರೋಚಕ ಡ್ರಾ
Published on

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಇಲೆವೆನ್ (CJI XI) ಮತ್ತು ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ XI (SCAORA XI) ತಂಡಗಳ ನಡುವೆ ನವದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನವಾರ ನಡೆದ ಎಸ್‌ಸಿಎಒಆರ್‌ಎ ಪ್ರೀಮಿಯರ್ ಲೀಗ್ ಕ್ರಿಕೆಟ್ ಉದ್ಘಾಟನಾ ಪಂದ್ಯ  ಡ್ರಾನಲ್ಲಿ ಅಂತ್ಯಗೊಂಡಿತು.

ಕೊನೆಯ ಎಸೆತದಲ್ಲಿ ಕೇವಲ ಒಂದು ರನ್ ಅಗತ್ಯವಿತ್ತು. ಆಗ ಎಸ್‌ಸಿಎಒಆರ್‌ಎ ತಂಡದ ಬ್ಯಾಟ್ಸ್‌ಮನ್‌ ನಾಟಕೀಯ ರೀತಿಯಲ್ಲಿ ರನೌಟ್ ಆದದ್ದು ವಕೀಲರ ತಂಡಕ್ಕೆ ಆಘಾತಕಾರಿಯಾಗಿ ಪರಿಣಮಿಸಿತು.

Also Read
ದಕ್ಷಿಣ ವಲಯ ಫ್ರೆಟರ್ನಿಟಿ ಕಪ್‌ ಜಯಗಳಿಸಿದ ಕರ್ನಾಟಕ ನ್ಯಾಯಮೂರ್ತಿಗಳ ಕ್ರಿಕೆಟ್‌ ತಂಡ

ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ, ಸೌರಭ್ ಬ್ಯಾನರ್ಜಿ ಅವರ ಆರಂಭಿಕ ಕೊಡುಗೆಗಳಿಂದಾಗಿ ಸಿಜೆಐ ಸಂಜೀವ್ ಖನ್ನಾ ನಾಯಕತ್ವದ ಸಿಜೆಐ ಇಲೆವೆನ್ ತಂಡ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ ಒಟ್ಟು 126 ರನ್ ಗಳಿಸಿತು. ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರ ಆಟ ಸಿಜೆಐ ಇಲೆವೆನ್ ಇನ್ನಿಂಗ್ಸ್‌ಗೆ ಕೊನೆಯವರೆಗೂ ಚೇತೋಹಾರಿಯಾಗಿತ್ತು.

ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ನ್ಯಾಯಮೂರ್ತಿ ಜಸ್‌ಪ್ರೀತ್‌ ಸಿಂಗ್ ನೇತೃತ್ವದ ಸಿಜೆಐ ಇಲೆವೆನ್ ತಂಡದ ಬೌಲಿಂಗ್ ದಾಳಿಯ ಪರಿಣಾಮ ನಿಯಮಿತ ಅಂತರದಲ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೂ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನೇತೃತ್ವದ ಎಸ್‌ಸಿಎಒಆರ್‌ಎ XI ತಂಡ ರನ್‌ಗಳ ಬೆನ್ನತ್ತಿ ಉತ್ತಮ ಪ್ರದರ್ಶನ ನೀಡಿತು.

ಹಿರಿಯ ವಕೀಲರಾದ ರಾಜೀವ್ ಶಕ್ತೇರ್ ಮತ್ತು ಪಿ.ಬಿ. ಸುರೇಶ್ ಅವರ ದೃಢ ಪ್ರಯತ್ನಗಳ ಹೊರತಾಗಿಯೂ , ಅಗತ್ಯವಿರುವ ರನ್ ದರ ಏರುತ್ತಲೇ ಇತ್ತು. ಇಷ್ಟಾದರೂ ಎಸ್‌ಸಿಎಒಆರ್‌ಎ XI ತಂಡ ಸ್ಥಿರವಾದ ಬ್ಯಾಟಿಂಗ್‌ ದಾಳಿ ನಡೆಸಿ, ಕೊನೆಯ ಕೆಲವು ಎಸೆತಗಳ ಹೊತ್ತಿಗೆ ರನ್‌ ಅಂತರವನ್ನು ಕಡಿಮೆ ಮಾಡುತ್ತಾ ಬಂದಿತು. ಆದರೆ ಕೊನೆಯ ಎಸೆತದಲ್ಲಿ ಕೇವಲ ಒಂದು ರನ್‌ ಅಗತ್ಯವಿದ್ದಾಗ ಎಸ್‌ಸಿಎಒಆರ್‌ಎ ತಂಡದ ಬ್ಯಾಟ್ಸ್‌ಮನ್‌ ರನ್‌ ಔಟ್‌ ಆಗುವುದರೊಂದಿಗೆ ವಕೀಲರ ತಂಡದ ಗೆಲುವಿನ ಕನಸು ಕಮರಿ ಪಂದ್ಯ ಟೈ ಆಯಿತು.

Kannada Bar & Bench
kannada.barandbench.com