ಸಿಎಲ್‌ಎಟಿ-2020: ನೂತನ ಕೌನ್ಸೆಲಿಂಗ್ ಮಾರ್ಗಸೂಚಿ, ಆದ್ಯತಾ ಪಟ್ಟಿ ಕುರಿತ ಮಾಹಿತಿ

ರ‌್ಯಾಂಕ್ ಘೋಷಿಸಿದ ಬಳಿಕ ಆದ್ಯತೆ ಬದಲಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಕೋರ್ಸ್ ಉನ್ನತೀಕರಿಸಿದರೆ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ತಮ್ಮ ನಡುವೆ ನೋಂದಣಿ ಶುಲ್ಕವನ್ನು ವರ್ಗಾಯಿಸಿಕೊಳ್ಳಲಿವೆ.
CLAT 2020
CLAT 2020
Published on

ರಾಷ್ಟ್ರೀಯ ಕಾನೂನು ಪ್ರವೃತ್ತಿ ಪರೀಕ್ಷೆ (ಎನ್‌ಎಲ್ಎಟಿ) ಕುರಿತು ಸುಪ್ರೀಂ ಕೋರ್ಟ್ ತೀರ್ಪು ಕಾನೂನು ಆಕಾಂಕ್ಷಿಗಳಿಗೆ ಪರಿಹಾರದ ರೂಪದಲ್ಲಿ ಒದಗಿ ಬಂದಿದ್ದು, ಸೋಮವಾರ ನಡೆದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್‌ಎಟಿ) ಅಂಕ ಆಧರಿಸಿ ಕೌನ್ಸೆಲಿಂಗ್ ಮತ್ತು ಪ್ರವೇಶ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟಕ್ಕೆ ಆಗ್ರಹಿಸಲಾಗಿದೆ.

ಅಕ್ಟೋಬರ್ 15ರೊಳಗೆ ಪ್ರವೇಶ ಪರೀಕ್ಷೆ ಪೂರ್ಣಗೊಳಿಸುವಂತೆ ಒಕ್ಕೂಟಕ್ಕೆ ಸೂಚಿಸಲಾಗಿದೆ. ಕೌನ್ಸೆಲಿಂಗ್ ಪ್ರಕ್ರಿಯೆ ಮತ್ತು ಮಾರ್ಗಸೂಚಿಯಲ್ಲಿ ಸಾಕಷ್ಟು ಉತ್ತಮ ಬದಲಾವಣೆ ಮಾಡಲಾಗಿದೆ. ರ‌್ಯಾಂಕ್ ಘೋಷಣೆಯಾದ ಬಳಿಕ ಆದ್ಯತೆ ಬದಲಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಇಷ್ಟುಮಾತ್ರವಲ್ಲದೇ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳು ಒಂದೊಮ್ಮೆ ಸೀಟು ಉನ್ನತೀಕರಿಸಿದರೆ ತಮ್ಮ ನಡುವೆ ನೋಂದಣಿ ಶುಲ್ಕ ವರ್ಗಾವಣೆ ಮಾಡಿಕೊಳ್ಳಲು ಸಿದ್ಧವಾಗಿವೆ.

ಪ್ರಕ್ರಿಯೆ ತುರ್ತಾಗಿ ನಡೆಯುತ್ತಿರುವುದರಿಂದ ಪೋಷಕರು ಮತ್ತು ವಿದ್ಯಾರ್ಥಿಗಳು ಎಚ್ಚರಿಕೆಯಿಂದಿದ್ದು, ಹೆಚ್ಚು ಸಕ್ರಿಯವಾಗಿರಬೇಕು. ಆಗಾಗ್ಗೆ ವೆಬ್‌ಸೈಟ್‌ನಲ್ಲಿ ಸೂಚನೆಗಳನ್ನು ಪರಿಶೀಲಿಸುತ್ತಿರಬೇಕು. ಜಂಕ್ ಮೇಲ್ ಮತ್ತು ಸಂದೇಶಗಳನ್ನೂ ಪರಿಶೀಲಿಸಬೇಕು. ಯಾವುದೇ ಎನ್‌ಎಲ್‌ಯುನಲ್ಲಿ ಸೀಟು ಹಂಚಿಕೆಯಾದರೆ ದಾಖಲಾತಿಗಳನ್ನು ಅಪ್‌ಲೋಡ್ ಮಾಡಲು ಸಿದ್ಧವಾಗಿರಬೇಕು.

ಪ್ರವೇಶಾತಿ ಪ್ರಕ್ರಿಯೆ ಬಗ್ಗೆ ಸಮತೋಲಿತ ಅರಿವು ಮೂಡಿಸುವ ಉದ್ದೇಶದಿಂದ ಕೆಳಗಿನಂತೆ ವಿವರಣೆ ನೀಡಲಾಗಿದೆ.

  • ಸೆಪ್ಟೆಂಬರ್ 28ರಂದು ಪರೀಕ್ಷೆ ನಡೆಸಲಾಗಿದ್ದು, ಸಂಜೆ ವೇಳಗೆ ಕೀ ಉತ್ತರಗಳ ಜೊತೆಗೆ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಲಾಗಿದೆ.

  • ಸೆಪ್ಟೆಂಬರ್ 28-29ರಂದು ಪ್ರಶ್ನೆ ಅಥವಾ ಉತ್ತರಕ್ಕೆ ಸಂಬಂಧಿಸಿದಂತೆ ತಕರಾರುಗಳಿದ್ದರೆ ಸಲ್ಲಿಸಬಹುದಾಗಿದೆ.

  • ಅಕ್ಟೋಬರ್ 3ರಂದು ಅಂತಿಮ ಕೀ ಉತ್ತರ ಪ್ರಕಟಿಸಲಾಗುವುದು.

  • ಅಕ್ಟೋಬರ್ 5ರಂದು ಅರ್ಹತಾ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಅಂದು ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದಲ್ಲಿ ತಮ್ಮ ರ್ಯಾಂಕ್, ವಿಭಾಗದಲ್ಲಿ ರ‌್ಯಾಂಕ್ ಮತ್ತು ಇತರೆ ವಿವರಗಳನ್ನು ತಿಳಿದುಕೊಳ್ಳಬಹುದು.

  • ಅಕ್ಟೋಬರ್ 6ರಂದು (ಮಧ್ಯಾಹ್ನ 12 ಗಂಟೆ) ಪ್ರತಿ ವಿಭಾಗದಲ್ಲಿ ಒಟ್ಟಾರೆ ಸೀಟುಗಳ ಮೂರು ಪಟ್ಟು ಅಭ್ಯರ್ಥಿಗಳನ್ನು ಕೌನ್ಸೆಲಿಂಗ್‌ನಲ್ಲಿ ಪಾಲ್ಗೊಳ್ಳುವಂತೆ ಸೂಚಿಸಲಾಗುವುದು.

  • ಅಭ್ಯರ್ಥಿಗಳು ಬಯಸಿದಲ್ಲಿ ಆದ್ಯತಾ ಪಟ್ಟಿಯನ್ನು ಬದಲಿಸಿಕೊಳ್ಳಬಹುದು. ಇದು ನೋಂದಣಿ ಪ್ರಕ್ರಿಯೆಯ ಭಾಗವಾಗಿದ್ದು, ಅಕ್ಟೋಬರ್ 7ರಂದು ಸಂಜೆ 6 ಒಳಗೆ ಪೂರ್ಣಗೊಳಿಸಬೇಕು.

  • ಅಕ್ಟೋಬರ್ 9ರಂದು (ಬೆಳಿಗ್ಗೆ 10) ಮೊದಲ ಅರ್ಹತಾ ಪಟ್ಟಿ ಬಿಡುಗಡೆ. ಮೊದಲ ಪಟ್ಟಿಯಲ್ಲಿ ಸೀಟು ಹಂಚಿಕೆಯಾದ ವಿದ್ಯಾರ್ಥಿಗಳ ಹೆಸರುಗಳನ್ನು ಇದು ಒಳಗೊಂಡಿರಲಿದೆ.

  • ಅಕ್ಟೋಬರ್ 9-10 (ಬೆಳಿಗ್ಗೆ 10 ರಿಂದ 10) ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದ ವಿದ್ಯಾರ್ಥಿಗಳು ತಮಗೆ ನೀಡಲಾದ ಮೂರು ಆಯ್ಕೆಗಳಲ್ಲಿ ಒಂದನ್ನು ನಿರ್ಧರಿಸಬೇಕು.

  • ಅಕ್ಟೋಬರ್ 11ರಂದು ಎರಡನೇ ಅರ್ಹತಾ ಪಟ್ಟಿ ಪ್ರಕಟಿಸಲಾಗುವುದು.

  • ಅಕ್ಟೋಬರ್ 11-12ರಂದು (ಸಂಜೆ 6ರಿಂದ ಮರುದಿನ ಸಂಜೆ 6 ಗಂಟೆಯವರೆಗೆ) ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದ, ಕೌನ್ಸೆಲಿಂಗ್ ಪ್ರಕ್ರಿಯೆಯಿಂದ ಹೊರಬರಲು ನಿರ್ಧರಿಸಿದ ವಿದ್ಯಾರ್ಥಿಗಳು ಹಾಗೂ ರ‌್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳು ನಿಗದಿತ ಎನ್ಎಲ್‌ಯುಗಳಲ್ಲಿ ಪ್ರವೇಶ ಪಡೆಯಲಿದ್ದಾರೆ. ಮೊದಲ ಪಟ್ಟಿಯ ಬಳಿಕ ಇದೇ ಪ್ರಕ್ರಿಯೆಯನ್ನು ಅನುಸರಿಸಲಾಗುವುದು.

  • ಅಕ್ಟೋಬರ್ 14ರಂದು ಮೂರನೇ ಅರ್ಹತಾ ಪಟ್ಟಿ ಬಿಡುಗಡೆ ಮಾಡಲಾಗುವುದು. ಅಕ್ಟೋಬರ್ 14-15ರಂದು (ಬೆಳಿಗ್ಗೆ 10ರಿಂದ ಸಂಜೆ 6ರ ವರೆಗೆ) ಇದೇ ಪ್ರಕ್ರಿಯೆಯನ್ನು ಇತರೆ ಪಟ್ಟಿಗಳಿಗೆ ಅನುಸರಿಸಲಾಗುವುದು.

ಆದ್ಯತಾ ಪಟ್ಟಿಯನ್ನು ತುಂಬುವುದು ಹೇಗೆ?

ಆದ್ಯತಾ ಪಟ್ಟಿಯ ಜೊತೆಗೆ ವಿದ್ಯಾರ್ಥಿಯೊಬ್ಬ ಪಡೆಯುವ ರ‌್ಯಾಂಕ್ ಸೀಟುಗಳ ನಿಯೋಜನೆಗೆ ಹೇಗೆ ಪೂರಕವಾಗಿರಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಈ ಬಾರಿ ಅಂದಾಜು ಕಟ್ ಆಫ್ ಪ್ರಮುಖವಾಗುತ್ತದೆ. ಇಲ್ಲಿ ಕಳೆದ ವರ್ಷದ ಕಟ್ ಆಫ್ ಜೊತೆಗೆ ಎನ್‌ಎಲ್‌ಯುಗಳ ವಿವರ ನೀಡಲಾಗಿದೆ. ಯಾವುದೇ ಸಮಸ್ಯೆಗಳಿಲ್ಲ ಮತ್ತು ನೈಜ ಸ್ಥಳದ ಅನುಕೂಲ ಇಲ್ಲವೆಂದಾದರೆ ಈ ಆದ್ಯತಾ ಪಟ್ಟಿಯನ್ನು ಅನುಸರಿಸಬಹುದಾಗಿದೆ.

Also Read
ಸಮಸ್ಯೆಗಳಿಲ್ಲದೆ ಯಶಸ್ವಿಯಾಗಿ ನಡೆದ ಸಿಎಲ್‌ಎಟಿ ಪರೀಕ್ಷೆ; ಕೋವಿಡ್ ತಡೆಗಿತ್ತು ಅಗತ್ಯ ಕ್ರಮ: ಎನ್‌ಎಲ್‌ಯುಸಿ

ಬೆಂಗಳೂರಿನ ಎನ್‌ಎಲ್‌ಎಸ್‌ಐಯು, ಹೈದರಾಬಾದಿನ ಎನ್‌ಎಎಲ್‌ಎಸ್‌ಎಆರ್, ಕೋಲ್ಕತಾದ ಡಬ್ಲುಬಿಎನ್‌ಯುಜೆಎಸ್‌, ಭೋಪಾಲ್‌ನ ಎನ್‌ಎಲ್‌ಐಯು, ಜೋಧಪುರ್ ಎನ್‌ಎಲ್‌ಯು, ಗಾಂಧಿನಗರದ ಜಿಎನ್‌ಎಲ್‌ಯು, ಪಟಿಯಾಲ ಆರ್‌ಜಿಎನ್‌ಎಲ್‌ಯು, ರಾಯಪುರದ ಎಚ್‌ಎನ್‌ಎಲ್‌ಯು, ಲಖನೌನ ಆರ್‌ಎಂಎಲ್‌ಎನ್‌ಎಲ್‌ಯು, ಒಡಿಶಾದ ಎನ್‌ಎಲ್‌ಯು, ಮುಂಬೈನ ಎಂಎನ್‌ಎಲ್‌ಯು, ರಾಂಚಿಯ ಎನ್‌ಯುಎಸ್‌ಆರ್‌ಎಲ್‌, ಕೊಚ್ಚಿ ಎನ್‌ಯುಎಎಲ್‌ಎಸ್‌, ಪಟ್ನಾದ ಸಿಎನ್‌ಎಲ್‌ಯು ಇದರಲ್ಲಿ ಸೇರಿವೆ.

ಅವರೋಹಣದ ಕ್ರಮದಲ್ಲಿ ಈ ಕೆಳಗಿನ ಐದು ನಿಯತಾಂಕಗಳ ಆಧಾರದಲ್ಲಿ ಕಾಲೇಜುಗಳ ರ‌್ಯಾಂಕಿಂಗ್ ನಿರ್ಧರಿಸಲಾಗುತ್ತದೆ. ವಿದ್ಯಾರ್ಥಿಗಳ ಗುಣಮಟ್ಟ (ಸಿಎಲ್‌ಎಟಿ ರ‌್ಯಾಂಕ್ ಸರಾಸರಿ), ಉದ್ಯೋಗಗಳು, ಮೂಲಸೌಕರ್ಯ (ಕಾಲೇಜಿನ ವೆಬ್‌ಸೈಟ್), ಬೋಧಕ ವರ್ಗ ಮತ್ತು ಉಪಕುಲಪತಿ/ನಿರ್ದೇಕರು ಮತ್ತು ಆಡಳಿತದ ಆಧಾರದಲ್ಲಿ ಕಾಲೇಜಿಗೆ ರ್ಯಾಂಕ್ ನೀಡಲಾಗುತ್ತದೆ.

ಆದ್ಯಾತಾ ಪಟ್ಟಿಯನ್ನು ತುಂಬುವುದು ಸೇರಿದಂತೆ, ಮಾರ್ಗಸೂಚಿಯ ವಿವಿಧ ಅಂಶಗಳ ವಿವರವಾದ ಮಾಹಿತಿಯುಳ್ಳ ಅಂಗ್ಲ ಲೇಖನವನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

Kannada Bar & Bench
kannada.barandbench.com