ಸಿಬಿಎಸ್ಇ ಪರೀಕ್ಷೆ ಹಿನ್ನೆಲೆ: ಜೂನ್ 13ಕ್ಕೆ ಸಿಎಲ್ಎಟಿ 2021ರ ಕಾನೂನು ಪ್ರವೇಶಾತಿ ಪರೀಕ್ಷೆ ಮರುನಿಗದಿ

ಮೇ 4ರಿಂದ ಸಿಬಿಎಸ್ಇ ಪರೀಕ್ಷೆಗಳು ನಡೆಯುವ ಹಿನ್ನೆಲೆಯಲ್ಲಿ ಬುಧವಾರ ಸಭೆ ಸೇರಿದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ ಸಿಎಲ್ಎಟಿ 2021 ಪರೀಕ್ಷೆಯನ್ನು ಮರುನಿಗದಿ ಮಾಡಲು ನಿರ್ಧರಿಸಿತು.
ಸಿಬಿಎಸ್ಇ ಪರೀಕ್ಷೆ ಹಿನ್ನೆಲೆ: ಜೂನ್ 13ಕ್ಕೆ ಸಿಎಲ್ಎಟಿ 2021ರ  ಕಾನೂನು ಪ್ರವೇಶಾತಿ ಪರೀಕ್ಷೆ ಮರುನಿಗದಿ
Published on

ಸಿಬಿಎಸ್‌ಇ ಪರೀಕ್ಷೆಗಳನ್ನು ಮೇ ತಿಂಗಳಿನಲ್ಲಿ ನಡೆಸುವುದಾಗಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ಕಳೆದ ವಾರ ಘೋಷಿಸಿದ ಹಿನ್ನೆಲೆಯಲ್ಲಿ 2021ನೇ ಸಾಲಿನ ಸಿಎಲ್‌ಎಟಿ ಕಾನೂನು ಪ್ರವೇಶಾತಿ ಪರೀಕ್ಷೆಯನ್ನು ಜೂನ್ 13 ಕ್ಕೆ ಮರು ನಿಗದಿಪಡಿಸಲಾಗಿದೆ.

ಈ ಹಿಂದೆ ಸಿಎಲ್‌ಎಟಿ 2021 ಪರೀಕ್ಷೆಯನ್ನು ಮೇ 9ರಂದು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಸಿಬಿಎಸ್‌ಇ ಪರೀಕ್ಷೆ ಮೇ 4 ರಿಂದ ಆರಂಭವಾಗುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ ಬುಧವಾರ ಸಭೆ ಸೇರಿ ಪರೀಕ್ಷೆ ಮರುನಿಗದಿಗೆ ತೀರ್ಮಾನಿಸಿತು.

ಕೋವಿಡ್‌ ಹಿನ್ನೆಲೆಯಲ್ಲಿ ಈ ಮೊದಲೇ ಘೋಷಿಸಿದಂತೆ ಸಿಎಲ್‌ಎಟಿ 2021 ರ ಆಫ್‌ಲೈನ್‌ ಪರೀಕ್ಷೆ “ಅವಶ್ಯಕತೆಗೆ ತಕ್ಕಂತೆ ಪರಿಷ್ಕರಣೆಗೆ ಒಳಪಡಲಿದೆ”. ಪ್ರವೇಶಾತಿ ಪರೀಕ್ಷೆಯ ಆನ್‌ಲೈನ್‌ ಅರ್ಜಿಗಳು ಜನವರಿ 1 ರಿಂದ ಲಭ್ಯವಿವೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಮಾರ್ಚ್ 31.

Also Read
ಬ್ರೇಕಿಂಗ್: ಎನ್‌ಎಲ್‌ಎಟಿ ರದ್ದುಗೊಳಿಸಿದ ಸುಪ್ರೀಂ; ಸಿಎಲ್‌ಎಟಿ ಅಂಕ ಆಧರಿಸಿ ಪ್ರವೇಶಾತಿಗೆ ನಿರ್ದೇಶನ
Kannada Bar & Bench
kannada.barandbench.com